ಮೋದಿ ತಾಯಿ ಪಾತ್ರಕ್ಕೆ ಆಯ್ಕೆ ಆದ ‘ಕೆಜಿಎಫ್ 2’ ನಟಿ ರವೀನಾ ಟಂಡನ್
ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್ ಪಾತ್ರದಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ 'ಮಾ ವಂದೇ' ಬಯೋಪಿಕ್‌ನಲ್ಲಿ ನಟಿಸುತ್ತಿದ್ದಾರೆ. 'ಕೆಜಿಎಫ್ 2' ನಂತರ ರವೀನಾ ಅವರಿಗೆ ಈ ಪ್ರಮುಖ ಪಾತ್ರ ಸಿಕ್ಕಿದೆ. ಚಿತ್ರವು ತಾಯಿ-ಮಗನ ಬಾಂಧವ್ಯ, ಹೀರಾಬೆನ್ ಅವರ ತ್ಯಾಗಗಳನ್ನು ಎತ್ತಿ ತೋರಿಸುತ್ತದೆ. ಸೆಪ್ಟೆಂಬರ್ 17ರಂದು ಘೋಷಣೆಯಾದ ಈ ಚಿತ್ರದಲ್ಲಿ ಉನ್ನಿ ಮುಕುಂದನ್ ಮೋದಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಾಲಿವುಡ್ ನಟಿ ರವೀನಾ ಟಂಡನ್ (Raveena Tondon) ಅವರು ಮೋದಿ ಬಯೋಪಿಕ್ ‘ಮಾ ವಂದೇ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದು ಕೂಡ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಪಾತ್ರದಲ್ಲಿ ಅನ್ನೋದು ವಿಶೇಷ. ಪ್ರಧಾನಿ ಮೋದಿ ಅವರ ಜೀವನದ ಉದ್ದಕ್ಕೂ ಹೀರಾಬೆನ್ ಬೆಂಬಲವಾಗಿ ನಿಂತಿದ್ದರು. ಈ ದೃಷ್ಟಿಯಿಂದ ಈ ಪಾತ್ರ ಸಿನಿಮಾದಲ್ಲಿ ತುಂಬಾನೇ ಪ್ರಮುಖವಾಗಲಿದೆ. ರವೀನಾ ಈ ಪಾತ್ರಕ್ಕೆ ಸೂಕ್ತವಾದ ಆಯ್ಕೆ ಎಂದು ಅನೇಕರು ಹೇಳಿದ್ದಾರೆ.
ರವೀನಾ ಟಂಡನ್ ಅವರು ತಮ್ಮ ವೃತ್ತಿ ಜೀವನದಲ್ಲಿ ನಾಯಕಿ ಆಗಿ ಮಿಂಚಿದ್ದಾರೆ. ಅವರು ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಕೆಜಿಫ್ 2’ ಚಿತ್ರದಲ್ಲಿ ಪ್ರಧಾನಿ ಪಾತ್ರ ಮಾಡಿದ್ದರು. ಈಗ ರಿಯಲ್ ಪ್ರಧಾನಿಯ ತಾಯಿ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕೆ ಈಗಾಗಲೇ ಲುಕ್ ಟೆಸ್ಟ್ ನಡೆದಿದ್ದು, ರವೀನಾ ಹೊಂದಿಕೆ ಆಗುವಂತಿದ್ದಾರೆ ಎಂದು ವರದಿ ಆಗಿದೆ.
ಸೆಪ್ಟೆಂಬರ್ 17ರಂದು ಮೋದಿ ಜನ್ಮದಿನ. ಈ ವಿಶೇಷ ದಿನಂದು ‘ಮಾ ವಂದೆ’ ಸಿನಿಮಾ ಘೋಷಣೆ ಆಗಿದೆ. ಕ್ರಾಂತಿ ಕುಮಾರ್ ಸಿಎಚ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಿಲ್ವರ್ ಕಾಸ್ಟ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ವೀರ್ ರೆಡ್ಡಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನರೇಂದ್ರ ಮೋದಿ ಪಾತ್ರದಲ್ಲಿ ಉನ್ನಿ ಮುಕುಂದನ್ ನಟಿಸುತ್ತಿದ್ದಾರೆ. ಅವರು ಈ ಸಿನಿಮಾದ ಭಾಗವಾಗಲು ಎಗ್ಸೈಟ್ ಆಗಿದ್ದಾರೆ.
ಚಿತ್ರತಂಡದ ಆಪ್ತರ ಪ್ರಕಾರ, ಹೀರಾಬೆನ್ ಪಾತ್ರದ ಬಗ್ಗೆ ಕೇಳುತ್ತಿದ್ದಂತೆ ರವೀನಾ ಅವರು ಭಾವುಕರಾದರಂತೆ. ಪಾತ್ರದ ಶಕ್ತಿ, ಆಳ ನೋಡಿ ಅವರಿಗೆ ಖುಷಿ ಆಗಿದೆ. ಹೀರಾಬೆನ್ ತಮ್ಮ ತಾಯಿಯನ್ನು ಬಾಲ್ಯದ ದಿನಗಳಲ್ಲೇ ಕಳೆದುಕೊಂಡರು. ಆದರೂ ಅವರು ದೈರ್ಯದಿಂದ ಎಲ್ಲವನ್ನೂ ಮುನ್ನಡೆಸಿದರು. ಈ ಕಥೆ ರವೀನಾ ಮನಸ್ಸಿನ ಮೇಲೆ ಸಾಕಷ್ಟು ಪ್ರಭಾವ ಬೀರಿತಂತೆ.
ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ; ಶಿವಮೊಗ್ಗದ ಮಂಜುನಾಥ್ ಪತ್ನಿ ಮಾತು ಕೇಳಿ ರವೀನಾ ಟಂಡನ್ ರಕ್ತ ಕೊತ ಕೊತ
‘ಮಾ ವಂದೆ’ ಸಿನಿಮಾದಲ್ಲಿ ರಾಜಕೀಯ ಯಶೋಗಾಥೆಗಳಿಗಿಂತ ತಾಯಿ ಹಾಗೂ ಮಗನ ಬಾಂಧವ್ಯವನ್ನು ಹೈಲೈಟ್ ಮಾಡುವುದು ನಿರ್ದೇಶಕನ ಉದ್ದೇಶ. ಮೋದಿ ಅವರ ಜೀವನವನ್ನು ಉತ್ತಮಗೊಳಿಸಲು ಹೀರಾಬೆನ್ ಮಾಡಿದ ತ್ಯಾಗದ ಬಗ್ಗೆ ಚಿತ್ರ ಪ್ರಮುಖವಾಗಿ ಗಮನ ಹರಿಸುತ್ತದೆ. ಈ ಸಿನಿಮಾ ಆರಂಭಕ್ಕೂ ಮೊದಲು ರವೀನಾ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:05 pm, Thu, 13 November 25




