ಫ್ಲಾಪ್ ಸಿನಿಮಾ ಬಳಿಕ ಮತ್ತೆ ಬಾಲಿವುಡ್ಗೆ ರಶ್ಮಿಕಾ ಮಂದಣ್ಣ
Rashmika Mandanna Hindi Movie: ಕನ್ನಡದಿಂದ ತೆಲುಗಿಗೆ ಹಾರಿ ಅಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡರು. ಬಳಿಕ ಬಾಲಿವುಡ್ಗೆ ವಲಸೆ ಹೋಗಿ ಅಲ್ಲಿಯೂ ಸ್ಟಾರ್ ರೀತಿ ಮಿಂಚುತ್ತಿದ್ದಾರೆ. ರಶ್ಮಿಕಾರ ಈ ಹಿಂದಿನ ಬಾಲಿವುಡ್ ಸಿನಿಮಾ ಫ್ಲಾಪ್ ಆಗಿದೆ. ಹಾಗಿದ್ದರೂ ಸಹ ಈಗ ಮತ್ತೊಂದು ಒಳ್ಳೆಯ ಸಿನಿಮಾ ಅವಕಾಶವನ್ನು ರಶ್ಮಿಕಾ ಮಂದಣ್ಣ ಪಡೆದುಕೊಂಡಿದ್ದಾರೆ. ಯಾವುದು ಆ ಸಿನಿಮಾ? ಇಲ್ಲಿದೆ ಮಾಹಿತಿ...

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಕನ್ನಡದಿಂದ ತೆಲುಗಿಗೆ ಹಾರಿ ಅಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡರು. ಬಳಿಕ ಬಾಲಿವುಡ್ಗೆ ವಲಸೆ ಹೋಗಿ ಅಲ್ಲಿಯೂ ಸ್ಟಾರ್ ರೀತಿ ಮಿಂಚುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಒಂದರ ಹಿಂದೊಂದರಂತೆ ಸತತ ಎರಡು ಬ್ಲಾಕ್ ಬಸ್ಟರ್ ಹಿಂದಿ ಸಿನಿಮಾಗಳನ್ನು ನೀಡಿದ್ದರು. ಅದರ ಬೆನ್ನಲ್ಲೆ ಸ್ಟಾರ್ ನಟ ಸಲ್ಮಾನ್ ಖಾನ್ ಜೊತೆಗೆ ನಟಿಸುವ ಅವಕಾಶವನ್ನೂ ಬಾಚಿಕೊಂಡರು. ಆದರೆ ಸಲ್ಮಾನ್ ಜೊತೆ ನಟಿಸಿದ ‘ಸಿಖಂಧರ್’ ಸಿನಿಮಾ ಹಿಟ್ ಎನಿಸಿಕೊಳ್ಳಲಿಲ್ಲ. ಫ್ಲಾಪ್ ಸಿನಿಮಾ ನೀಡಿದರೂ ಸಹ ಇದೀಗ ರಶ್ಮಿಕಾಗೆ ಮತ್ತೊಂದು ಒಳ್ಳೆಯ ಬಾಲಿವುಡ್ ಸಿನಿಮಾ ಅವಕಾಶ ಅರಸಿ ಬಂದಿದೆ.
ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ, ದಿಯಾನಾ ಪೆಂಟಿ ಒಟ್ಟಿಗೆ ನಟಿಸಿ 2012 ರಲ್ಲಿ ಬಿಡುಗಡೆ ಆಗಿದ್ದ ‘ಕಾಕ್ಟೈಲ್’ ಸಿನಿಮಾ ಆಗ ದೊಡ್ಡ ಹಿಟ್ ಆಗಿತ್ತು. ಮಾಡರ್ನ್ ಹುಡುಗಿ, ಸೀದಾ-ಸಾದಾ ಸಂಸ್ಕಾರವಂತ ಯುವತಿ, ಒಬ್ಬ ಪ್ಲೇಬಾಯ್ ರೀತಿಯ ಯುವಕ ಈ ಮೂವರ ನಡುವೆ ನಡೆಯುವ ಪ್ರೇಮಕತೆಯನ್ನು ಒಳಗೊಂಡಿರುವ ಸಿನಿಮಾ ಇದಾಗಿತ್ತು. ಇದೀಗ ‘ಕಾಕ್ಟೇಲ್ 2’ ಸಿನಿಮಾ ನಿರ್ಮಾಣ ಆಗುತ್ತಿದ್ದು, ಈ ಸಿನಿಮಾನಲ್ಲಿ ರಶ್ಮಿಕಾಗೆ ನಾಯಕಿಯ ಪಾತ್ರ ದೊರೆತಿದೆ.
ಇದನ್ನೂ ಓದಿ:ವಿಜಯ್ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಮಂದಣ್ಣ ಭರ್ಜರಿ ಫೋಟೋಶೂಟ್
ಲವ್ ರಂಜನ್ ‘ಕಾಕ್ಟೇಲ್ 2’ ಸಿನಿಮಾ ನಿರ್ದೇಶಿಸಲಿದ್ದು, ಮ್ಯಾಡ್ಲಾಕ್ನ ವಿಜಯನ್ ಅವರು ಬಂಡವಾಳ ತೊಡಗಿಸುತ್ತಿದ್ದಾರೆ. ಮೊದಲ ‘ಕಾಕ್ಟೇಲ್’ ರೀತಿಯೇ ‘ಕಾಕ್ಟೇಲ್ 2’ ಸಿನಿಮಾ ಸಹ ತ್ರಿಕೋನ ಪ್ರೇಮಕತೆಯುಳ್ಳ ಸಿನಿಮಾ ಆಗಿರಲಿದೆ. ವಿಶೇಷವೆಂದರೆ ಈ ಸಿನಿಮಾನಲ್ಲಿಯೂ ಸಹ ಗ್ಲಾಮರಸ್, ಫಾರ್ವರ್ಡ್ ಯುವತಿ, ಸಂಸ್ಕಾರವಂತ ಯುವತಿ ಮತ್ತು ಪ್ಲೇಬಾಯ್ ಹುಡುಗನ ನಡುವೆ ನಡೆಯುವ ಪ್ರೇಮಕತೆಯನ್ನು ಹೊಂದಿರಲಿದೆ.
ರಶ್ಮಿಕಾ ಮಂದಣ್ಣ ಸಂಸ್ಕಾರವಂತ ಯುವತಿಯ ಪಾತ್ರದಲ್ಲಿ ನಟಿಸಲಿದ್ದಾರೆ. ಕೃತಿ ಸೆನೊನ್ ಮಾಡರ್ನ್ ಯುವತಿಯ ಪಾತ್ರದಲ್ಲಿ ನಟಿಸಲಿದ್ದಾರೆ. ನಾಯಕನಾಗಿ ನಟ ಶಾಹಿದ್ ಕಪೂರ್ ನಟಿಸಲಿದ್ದಾರೆ. ಕೃತಿ ಸನೊನ್ ಮತ್ತು ಶಾಹಿದ್ ಕಪೂರ್ ಈ ಹಿಂದೆಯೂ ಒಟ್ಟಿಗೆ ನಟಿಸಿದ್ದಾರೆ. ಆದರೆ ಆ ಸಿನಿಮಾ ಯಶಸ್ಸು ಗಳಿಸಿಲ್ಲ. ಆದರೆ ರಶ್ಮಿಕಾ ಇದೇ ಮೊದಲ ಬಾರಿಗೆ ಶಾಹಿದ್ ಕಪೂರ್ ಹಾಗೂ ಕೃತಿ ಸನೊನ್ ಜೊತೆಗೆ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




