ಯೂಟ್ಯೂಬ್ನಲ್ಲಿ ಉಚಿತವಾಗಿ ಸಿನಿಮಾ ತೋರಿಸ್ತೀನಿ: ಆಮಿರ್ ಖಾನ್ ಘೋಷಣೆ
‘ಸಿತಾರೆ ಜಮೀನ್ ಪರ್’ ಸಿನಿಮಾದ ಬಿಡುಗಡೆಯ ಹೊಸ್ತಿಲಿನಲ್ಲಿ ಆಮಿರ್ ಖಾನ್ ಅವರು ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಒಂದು ಸಿಹಿ ಸುದ್ದಿ ನೀಡಿದ್ದಾರೆ. 2007ರ ‘ತಾರೆ ಜಮೀನ್ ಪರ್’ ಸಿನಿಮಾವನ್ನು ಯೂಟ್ಯೂಬ್ನಲ್ಲಿ ಉಚಿತವಾಗಿ ಪ್ರಸಾರ ಮಾಡುವುದಾಗಿ ಅವರು ಹೇಳಿದರು. ಈ ಸುದ್ದಿ ಕೇಳಿ ಪ್ಯಾನ್ಸ್ಗೆ ಖುಷಿ ಆಗಿದೆ.

ನಟ, ನಿರ್ಮಾಪಕ ಆಮಿರ್ ಖಾನ್ ಅವರು ‘ಸಿತಾರೆ ಜಮೀನ್ ಪರ್’ (Sitaare Zameen Par) ಸಿನಿಮಾದ ಬಿಡುಗಡೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಜೂನ್ 20ರಂದು ಈ ಸಿನಿಮಾ ರಿಲೀಸ್ ಆಗಲಿದೆ. 2007ರಲ್ಲಿ ಬಿಡುಗಡೆ ಆದ ‘ತಾರೆ ಜಮೀನ್ ಪರ್’ (Taare Zameen Par) ಚಿತ್ರದ ಥೀಮ್ನಲ್ಲೇ ಈಗ ‘ಸಿತಾರೆ ಜಮೀನ್ ಪರ್’ ಸಿನಿಮಾ ಮೂಡಿಬಂದಿದೆ. ಈಗಾಗಲೇ ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಲಾಗಿದೆ. ಇತ್ತೀಚೆಗೆ ಆಮಿರ್ ಖಾನ್ (Aamir Khan) ಅವರು ಅಭಿಮಾನಿಗಳನ್ನು ಭೇಟಿ ಮಾಡಿದರು. ಈ ಭೇಟಿಯ ವೇಳೆ ಅವರು ಒಂದು ಗುಡ್ ನ್ಯೂಸ್ ನೀಡಿದರು. ‘ತಾರೆ ಜಮೀನ್ ಪರ್’ ಸಿನಿಮಾವನ್ನು ಯೂಟ್ಯೂಬ್ನಲ್ಲಿ ಉಚಿತವಾಗಿ ಪ್ರಸಾರ ಮಾಡುವುದಾಗಿ ತಿಳಿಸಿದರು.
ಫ್ಯಾನ್ಸ್ ಮೀಟ್ ವೇಳೆ ‘ತಾರೆ ಜಮೀನ್ ಪರ್’ ಸಿನಿಮಾದ ದೃಶ್ಯವೊಂದರ ಬಗ್ಗೆ ಆಮಿರ್ ಖಾನ್ ಜೊತೆ ಚರ್ಚೆ ಮಾಡಲಾಯಿತು. ಆದರೆ ಆ ದೃಶ್ಯವನ್ನು ತೋರಿಸಲು ಸಾಧ್ಯವಾಗಲಿಲ್ಲ. ಯಾಕೆಂದರೆ, ‘ತಾರೆ ಜಮೀನ್ ಪರ್’ ಸಿನಿಮಾ ಯಾವುದೇ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಲಭ್ಯವಿಲ್ಲ. ಹಾಗಾಗಿ ಅಭಿಮಾನಿಗಳಿಗೆ ಆಮಿರ್ ಖಾನ್ ಅವರು ಒಂದು ಸುವರ್ಣಾವಕಾಶ ನೀಡಿದರು.
‘ಒಂದು ಕೆಲಸ ಮಾಡೋಣ. ಆಮಿರ್ ಖಾನ್ ಟಾಕೀಸ್ ಅಂತ ನಾನು ಯೂಟ್ಯೂಬ್ ಚಾನೆಲ್ ಶುರು ಮಾಡಿದ್ದೇನೆ. ಅದರಲ್ಲಿ ತಾರೆ ಜಮೀನ್ ಪರ್ ಸಿನಿಮಾವನ್ನು ಉಚಿತವಾಗಿ ಅಪ್ಲೋಡ್ ಮಾಡಲು ತನ್ನ ತಂಡಕ್ಕೆ ಹೇಳುತ್ತೇನೆ. ಆದರೆ ಅದು ಕೇವಲ ಒಂದು ಅಥವಾ ಎರಡು ವಾರ ಮಾತ್ರ ಲಭ್ಯವಿರುತ್ತದೆ’ ಎಂದು ಆಮಿರ್ ಖಾನ್ ಹೇಳಿದ್ದಾರೆ. ಇದನ್ನು ಕೇಳಿ ಆಮಿರ್ ಖಾನ್ ಅಭಿಮಾನಿಗಳಿಗೆ ಖುಷಿ ಆಗಿದೆ.
ಇನ್ನು, ‘ಸಿತಾರೆ ಜಮೀನ್ ಪರ್’ ಸಿನಿಮಾ ಬಗ್ಗೆ ಹೇಳುವುದಾದರೆ, ಈ ಚಿತ್ರಕ್ಕೆ ಆರ್.ಎಸ್. ಪ್ರಸನ್ನ ಅವರು ನಿರ್ದೇಶನ ಮಾಡಿದ್ದಾರೆ. ಆಮಿರ್ ಖಾನ್ ಅವರು ಬಾಸ್ಕೆಟ್ ಬಾಲ್ ಕೋಚ್ ಪಾತ್ರದಲ್ಲಿ ನಟಿಸಿದ್ದಾರೆ. ಇದು ಆಮಿರ್ ಖಾನ್ ಅವರ ಕಮ್ ಬ್ಯಾಕ್ ಸಿನಿಮಾ. ಆದ್ದರಿಂದ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಆದರೆ ರಿಮೇಕ್ ಎಂಬ ಟೀಕೆ ಕೂಡ ಇದೆ.
ಇದನ್ನೂ ಓದಿ: ‘ಸಿತಾರೆ ಜಮೀನ್ ಪರ್’ ಟ್ರೇಲರ್: ಈ ಬಾರಿಯಾದ್ರೂ ಗೆಲ್ತಾರಾ ಆಮಿರ್ ಖಾನ್?
‘ಸಿತಾರೆ ಜಮೀನ್ ಪರ್’ ಚಿತ್ರದ ಟ್ರೇಲರ್ ಬಿಡುಗಡೆ ಆದ ಕೂಡಲೇ ನೆಟ್ಟಿಗರು ಟ್ರೋಲ್ ಮಾಡಲು ಆರಂಭಿಸಿದರು. ಇದು ‘ಚಾಂಪಿಯನ್ಸ್’ ಸಿನಿಮಾದ ಕಾಪಿ ಎಂದು ಪತ್ತೆ ಹಚ್ಚಲಾಯಿತು. ಬಳಿಕ ಇದು ಅಧಿಕೃತ ರಿಮೇಕ್ ಎಂಬುದು ಗೊತ್ತಾಯಿತು. ಜೂನ್ 20ರಂದು ಈ ಸಿನಿಮಾಗೆ ಪ್ರೇಕ್ಷಕರಿಂದ ಯಾವ ರೀತಿ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








