ಬಾಲಿವುಡ್‌ನ ಎವರ್ ಗ್ರೀನ್ ನಟಿ ರೇಖಾ ತಮ್ಮ ವೈಯಕ್ತಿಕ ಜೀವನದ ಕಾರಣಕ್ಕಾಗಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಕೆಲವರಿಗೆ ಅವರ ಖಾಸಗಿ ಜೀವನದ ಬಗ್ಗೆ ತಿಳಿದಿದೆ. ಇಂದು ರೇಖಾ 69ರ ಹರೆಯದಲ್ಲಿ ಒಂಟಿ ಜೀವನ ನಡೆಸುತ್ತಿದ್ದಾರೆ. ರೇಖಾ ಅವರ ಹೆಸರು ಅನೇಕ ಸೆಲೆಬ್ರಿಟಿಗಳೊಂದಿಗೆ ತಳುಕು ಹಾಕಿಕೊಂಡ ಸಮಯವಿತ್ತು. ರೇಖಾ ಎರಡು ಬಾರಿ ವಿವಾಹವಾದರು. ಆದರೆ ಅವರು ತಮ್ಮ ವೈವಾಹಿಕ ಜೀವನವನ್ನು ಎಂದಿಗೂ ಆನಂದಿಸಲು ಸಾಧ್ಯವಾಗಲಿಲ್ಲ. ಮದುವೆಯ ನಂತರವೂ ರೇಖಾ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಎರಡು ವಿಫಲ ಮದುವೆಗಳ ನಂತರ ರೇಖಾ ಮದುವೆಯಾಗಲು ನಿರ್ಧರಿಸಲಿಲ್ಲ.
ರೇಖಾ ಅವರ ವೈವಾಹಿಕ ಜೀವನದ ಬಗ್ಗೆ ಹಿಂದೊಮ್ಮೆ ಮಾತನಾಡಿದ್ದರು. ಮದುವೆಯಾದ 6 ತಿಂಗಳ ನಂತರ ರೇಖಾ ಅವರ ಪತಿ ಮುಖೇಶ್ ಅಗರ್ವಾಲ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಮದುವೆಯಾದ ಆರು ತಿಂಗಳ ನಂತರ ಪತಿ ತೀರಿಕೊಂಡ ನಂತರ ರೇಖಾಗೆ ಅನೇಕರು ಕೆಟ್ಟ ಪದಗಳಲ್ಲಿ ಅವರನ್ನು ಟೀಕಿಸಿದ್ದರು.
ಕೊನೆಗೆ ರೇಖಾ ಸಂದರ್ಶನದ ಮೂಲಕ ನಡೆದ ಘಟನೆಯನ್ನು ಎಲ್ಲರಿಗೂ ತಿಳಿಸಿದ್ದರು. ಮುಖೇಶ್, ರೇಖಾ ಅವರಿಂದ ವಿಚ್ಛೇದನ ಬಯಸಿದ್ದರು. ರೇಖಾ ತನ್ನ ಪತಿಯಿಂದ ವಿಚ್ಛೇದನವನ್ನು ಕೇಳಲಿಲ್ಲ. ‘ಮದುವೆ ಬಳಿಕ ಪತಿ ಅಷ್ಟಾಗಿ ಉತ್ಸುಕರಾಗಿರಲಿಲ್ಲ. ಆದರೆ ನಾನು ಎಂದಿಗೂ ಸಂಬಂಧವನ್ನು ಬಿಟ್ಟುಕೊಟ್ಟಿಲ್ಲ’ ಎಂದಿದ್ದರು ರೇಖಾ. ‘ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ದು, ಬಗೆಹರಿಸಲು ಸಾಧ್ಯವಾಗದಿದ್ದರೆ ಪ್ರತ್ಯೇಕತೆಯೇ ದಾರಿ ಲಂಡನ್‌ನಲ್ಲಿ ನಾವು ಹನಿಮೂನ್‌ಗೆ ಹೋಗಿದ್ದೆವು. ಆದರೆ ಆಗಲೇ ಮುಖೇಶ್ ಜೊತೆಗಿನ ಸಂಬಂಧದಲ್ಲಿ ವ್ಯತ್ಯಾಸ ಕಂಡಿದ್ದು’ ಎಂದು ರೇಖಾ ಕೂಡ ಹೇಳಿದ್ದರು.
ಇದನ್ನೂ ಓದಿ:ಕಚೇರಿ ಬಾಡಿಗೆಗೆ ನೀಡಿದ ಅಮಿತಾಬ್ ಬಚ್ಚನ್, ತಿಂಗಳ ಬಾಡಿಗೆ ಎಷ್ಟು ಗೊತ್ತೆ?
ಮಾಧ್ಯಮ ವರದಿಗಳ ಪ್ರಕಾರ, ರೇಖಾ ಎರಡು ಬಾರಿ ವಿವಾಹವಾದರು. ರೇಖಾ ಅವರು ದಿವಂಗತ ನಟ ವಿನೋದ್ ಮೆಹ್ರಾ ಅವರನ್ನು ವಿವಾಹವಾಗಿದ್ದರು ಎನ್ನಲಾಗಿದೆ. ಆದರೆ ವಿನೋದ್ ಮೆಹ್ರಾ ಮತ್ತು ರೇಖಾ ಅವರ ಸಂಬಂಧವನ್ನು ನಟನ ತಾಯಿ ಎಂದಿಗೂ ಒಪ್ಪಿಕೊಳ್ಳಲಿಲ್ಲ. ಅದರ ನಂತರ, ರೇಖಾ ಮದುವೆಯಾಗಲು ನಿರ್ಧರಿಸಲಿಲ್ಲ.
ವಿನೋದ್ ಮೆಹ್ರಾ ಮತ್ತು ರೇಖಾ ರಹಸ್ಯವಾಗಿ ವಿವಾಹವಾದರು. ಆದರೆ ಓಪನ್ ಆಗಿ ಈ ಸಂಬಂಧವನ್ನು ಅವರು ಎಂದಿಗೂ ಒಪ್ಪಿಕೊಂಡಿಲ್ಲ. 2004ರ ಸಂದರ್ಶನವೊಂದರಲ್ಲಿ, ವಿನೋದ್ ಅವರು ಮದುವೆಯ ಎಲ್ಲಾ ಮಾತನ್ನು ತಳ್ಳಿಹಾಕಿದರು. ರೇಖಾ ಅವರ ವೈಯಕ್ತಿಕ ಜೀವನ ಹಲವು ಏರಿಳಿತಗಳನ್ನು ಹೊಂದಿತ್ತು. ಇಂದು ಅವರು 69 ನೇ ವಯಸ್ಸಿನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದಾರೆ. 2018ರ ನಂತರ ಅವರು ಸಿನಿಮಾಗಳಲ್ಲೂ ನಟಿಸಿಲ್ಲ. ಅವರು ಈ ಮೊದಲು ಅಮಿತಾಭ್ ಬಚ್ಚನ್ ಅವರನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ