ಬಿಗ್​ ಬಾಸ್​ ಮನೆಗೆ ಸುಶಾಂತ್​ ಪ್ರೇಯಸಿ ರಿಯಾ? ಒಂದು ವಾರದ ಸಂಭಾವನೆ ಇಷ್ಟೊಂದಾ?

| Updated By: ರಾಜೇಶ್ ದುಗ್ಗುಮನೆ

Updated on: Sep 29, 2021 | 9:34 PM

ಸುಶಾಂತ್​ ಸಿಂಗ್ ಸಾವಿನ ನಂತರದಲ್ಲಿ ರಿಯಾ ಚಕ್ರವರ್ತಿ ಹೆಸರು ಮುನ್ನೆಲೆಗೆ ಬಂದಿತ್ತು. ರಿಯಾ ಹಾಗೂ ಸುಶಾಂತ್​ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಇವರ ನಡುವಿನ ಪ್ರೀತಿ ಮುರಿದು ಬಿದ್ದಿತ್ತು.

ಬಿಗ್​ ಬಾಸ್​ ಮನೆಗೆ ಸುಶಾಂತ್​ ಪ್ರೇಯಸಿ ರಿಯಾ? ಒಂದು ವಾರದ ಸಂಭಾವನೆ ಇಷ್ಟೊಂದಾ?
Follow us on

ಯಶಸ್ವಿಯಾಗಿ 14 ಸೀಸನ್​ಗಳನ್ನು ಪೂರ್ಣಗೊಳಿಸಿರುವ ಹಿಂದಿ ಬಿಗ್​ ಬಾಸ್​ ಈಗ 15ನೇ ಸೀಸನ್​ಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬಿಗ್​ ಬಾಸ್​ ಒಟಿಟಿ ಶೋ ಪೂರ್ಣಗೊಂಡಿದ್ದು, ಶೀಘ್ರವೇ ಬಿಗ್​ ಬಾಸ್​ 15ನೇ ಸೀಸನ್​ ಆರಂಭಗೊಳ್ಳಲಿದೆ. ಅಚ್ಚರಿ ವಿಚಾರ ಎಂದರೆ, ಸುಶಾಂತ್​ ಸಿಂಗ್ ಪ್ರೇಯಸಿ ಆಗಿದ್ದ ರಿಯಾ ಚಕ್ರವರ್ತಿ ಬಿಗ್​ ಬಾಸ್​ ಮನೆಗೆ ಹೋಗಲಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ.

ಸುಶಾಂತ್​ ಸಿಂಗ್ ಸಾವಿನ ನಂತರದಲ್ಲಿ ರಿಯಾ ಚಕ್ರವರ್ತಿ ಹೆಸರು ಮುನ್ನೆಲೆಗೆ ಬಂದಿತ್ತು. ರಿಯಾ ಹಾಗೂ ಸುಶಾಂತ್​ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಇವರ ನಡುವಿನ ಪ್ರೀತಿ ಮುರಿದು ಬಿದ್ದಿತ್ತು. ಸುಶಾಂತ್​ ಸಾವಿನ ಪ್ರಕರಣದ ತನಿಖೆ ವೇಳೆ ರಿಯಾ ವಿಚಾರಣೆ ಮಾಡಲಾಗಿತ್ತು. ನಂತರ ಅವರು ಈ ಪ್ರಕರಣದಲ್ಲಿ ಅರೆಸ್ಟ್​ ಕೂಡ ಆಗಿದ್ದರು. ಅವರು ಜೈಲಿನಿಂದ ಜಾಮೀನು ಪಡೆದು ಹೊರ ಬಂದು ಹಲವು ತಿಂಗಳಾಗಿವೆ. ಈಗ ಬಿಗ್​ ಬಾಸ್ ತಂಡದವರು ರಿಯಾ ಅವರನ್ನು ಅಪ್ರೋಚ್​ ಮಾಡಿದ್ದಾರೆ ಎನ್ನಲಾಗಿದೆ.

ರಿಯಾ ಚಕ್ರವರ್ತಿ ವೈಯಕ್ತಿಕ ಜೀವನದ ಬಗ್ಗೆ ಜನರಿಗೆ ಆಸಕ್ತಿ ಇದೆ. ಸುಶಾಂತ್ ಸಿಂಗ್​ ಜತೆ ಅವರು ಹೇಗಿದ್ದರು ಎನ್ನುವ ಬಗ್ಗೆಯೂ ಅನೇಕರಿಗೆ ಕುತೂಹಲವಿದೆ. ಒಂದೊಮ್ಮೆ ರಿಯಾ ಬಿಗ್​ ಬಾಸ್​ ಮನೆ ಒಳಗೆ ಹೋದರೆ ಒಂದಷ್ಟು ವಿಚಾರಗಳು ಹೊರ ಬರಲಿವೆ. ಕುತೂಹಲದಿಂದ ಜನರು ಕೂಡ ಶೋ ವೀಕ್ಷಣೆ ಮಾಡುವ ಸಾಧ್ಯತೆ ಹೆಚ್ಚು. ಈ ಕಾರಣಕ್ಕೆ ರಿಯಾ ಅವರಿಗೆ ಮೊದಲ ಪ್ರಿಫರೆನ್ಸ್​ ನೀಡಲಾಗುತ್ತಿದೆ.

ಇನ್ನು, ರಿಯಾ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನುವ ಕುತೂಹಲ ಕೂಡ ಇದೆ. ಅವರು ಜೈಲಿಗೆ ಹೋಗಿ ಬಂದ ನಂತರದಲ್ಲಿ ಸ್ವಲ್ಪ ಕುಗ್ಗಿದಂತೆ ಕಾಣುತ್ತಿದ್ದಾರೆ. ಹೀಗಾಗಿ, ಮಾಧ್ಯಮಗಳ ಎದುರು ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಈ ಕಾರಣಕ್ಕೆ ಅವರು ಆಫರ್​ ರಿಜೆಕ್ಟ್​ ಮಾಡಬಹುದು ಅಥವಾ ಬಿಗ್​ ಬಾಸ್​ ಮನೆ ಒಳಗೆ ತೆರಳಿ ತಾವು ಯಾರು ಎಂಬುದನ್ನು ಸಾಬೀತು ಮಾಡಿಕೊಳ್ಳಲು ಶೋನಲ್ಲಿ ಭಾಗವಹಿಸೋಕೆ ಒಪ್ಪಿಕೊಳ್ಳಬಹುದು.

ರಿಯಾಗೆ ನೀಡುತ್ತಿರುವ ಸಂಭಾವನೆ ವಿಚಾರ ಕೂಡ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ರಿಯಾ ಒಂದು ವಾರಕ್ಕೆ ಬರೋಬ್ಬರಿ 35 ಲಕ್ಷ ರೂಪಾಯಿ ಕೇಳಿದ್ದಾರೆ ಎನ್ನಲಾಗಿದೆ. ಟಿಆರ್​ಪಿ ದೃಷ್ಟಿಯಲ್ಲಿ ರಿಯಾ ಬಹಳ ಮಹತ್ವ ಪಡೆದುಕೊಳ್ಳುತ್ತಾರೆ. ಈ ಕಾರಣಕ್ಕೆ ಅವರಿಗೆ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಕೊಡೋಕೆ ವಾಹಿನಿಯವರು ಒಪ್ಪಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಡ್ರಗ್ ಪೆಡ್ಲಿಂಗ್ ಮಾಡ್ತಿದ್ದ ನೈಜೀರಿಯಾ ನಟನ ಬಂಧನ; ಈತ ಅಣ್ಣಾಬಾಂಡ್, ಪರಮಾತ್ಮ ಸಿನಿಮಾಗಳಲ್ಲೂ ನಟಿಸಿದ್ದ!

ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ ಬಿಗ್ ಬಾಸ್ ಪ್ರಿಯಾಂಕಾ ತಿಮ್ಮೇಶ್

Published On - 8:14 pm, Wed, 29 September 21