Riteish Deshmukh: ‘ನಾನು ಅಂಥ ಸಿನಿಮಾಗಳನ್ನು ಮಾಡಿದ್ದೀನಿ, ಆದರೆ ನಾಚಿಕೆ ಅನಿಸಿಲ್ಲ’: ರಿತೇಶ್​ ದೇಶಮುಖ್​ ನೇರನುಡಿ

| Updated By: ಮದನ್​ ಕುಮಾರ್​

Updated on: Jul 21, 2022 | 3:43 PM

ಅಡಲ್ಟ್ ಕಾಮಿಡಿ ಸಿನಿಮಾ ಮಾಡಿದಾಗ ತಮ್ಮ ಮನೆಯ ಸದಸ್ಯರು ಏನಂದುಕೊಳ್ಳುತ್ತಾರೆ ಎಂಬ ಚಿಂತೆಯನ್ನು ರಿತೇಶ್​ ದೇಶಮುಖ್​ ಮಾಡಿಲ್ಲ. ಆ ಬಗ್ಗೆ ಇತ್ತೀಚೆಗಿನ ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದಾರೆ.

Riteish Deshmukh: ‘ನಾನು ಅಂಥ ಸಿನಿಮಾಗಳನ್ನು ಮಾಡಿದ್ದೀನಿ, ಆದರೆ ನಾಚಿಕೆ ಅನಿಸಿಲ್ಲ’: ರಿತೇಶ್​ ದೇಶಮುಖ್​ ನೇರನುಡಿ
ರಿತೇಶ್ ದೇಶಮುಖ್
Follow us on

ನಟ ರಿತೇಶ್​ ದೇಶಮುಖ್ (Riteish Deshmukh)​ ಅವರು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಬಾಲಿವುಡ್​ನಲ್ಲಿ (Bollywood) ಅವರು ಸ್ಟಾರ್​ ನಟನಾಗಿ ಮಿಂಚಿದ್ದಾರೆ. ಮರಾಠಿ ಚಿತ್ರರಂಗದಲ್ಲೂ ಅವರು ಫೇಮಸ್​. ಎಲ್ಲ ಬಗೆಯ ಪ್ರೇಕ್ಷಕರನ್ನೂ ರಂಜಿಸಬೇಕು ಎಂಬುದು ಅವರ ಪಾಲಿಸಿ. ಬರೀ ಹೀರೋ ಆಗಿ ಕಾಣಿಸಿಕೊಳ್ಳಲಷ್ಟೇ ಅವರು ಸೀಮಿತ ಆಗಿಲ್ಲ. ವಿಲನ್​ ಪಾತ್ರದಲ್ಲಿಯೂ ಮಿಂಚಿದ್ದಾರೆ. ಅದೂ ಸಾಲದೆಂಬಂತೆ ಅಡಲ್ಟ್​ ಕಾಮಿಡಿ (Adult Comedy) ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಇವುಗಳನ್ನು ಸೆxಕ್ಸ್​ ಕಾಮಿಡಿ ಸಿನಿಮಾ ಎಂದೂ ಕರೆಯುತ್ತಾರೆ. ಲೈಂಗಿಕತೆಗೆ ಸಂಬಂಧಿಸಿದ ಕಥೆಯನ್ನೇ ಇಟ್ಟುಕೊಂಡು ಪ್ರೇಕ್ಷಕರನ್ನು ನಗಿಸುವುದು ಇಂಥ ಚಿತ್ರಗಳ ಸೂತ್ರ. ರಿತೇಶ್​ ದೇಶಮುಖ್​ ಕೂಡ ಅಡಲ್ಟ್​ ಕಾಮಿಡಿ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಆ ಬಗ್ಗೆ ತಮಗೆ ನಾಚಿಕೆ ಇಲ್ಲ ಎಂದು ಅವರು ಹೇಳಿದ್ದಾರೆ.

ಕೆಲವು ನಟರು ಸಿನಿಮಾ ಒಪ್ಪಿಕೊಳ್ಳುವಾಗ ತಮ್ಮ ಮನೆಯವರ ಅನುಮತಿಯನ್ನೂ ಪಡೆದುಕೊಳ್ಳುತ್ತಾರೆ. ಅಪ್ಪ-ಅಮ್ಮ, ಹೆಂಡತಿ-ಮಕ್ಕಳ ಅಭಿಪ್ರಾಯವನ್ನೂ ಪರಿಗಣಿಸುತ್ತಾರೆ. ಆದರೆ ರಿತೇಶ್​ ದೇಶಮುಖ್​ ಆ ರೀತಿ ಅಲ್ಲ. ಅಡಲ್ಟ್ ಕಾಮಿಡಿ ಸಿನಿಮಾ ಮಾಡಿದಾಗಲೂ ಕೂಡ ಮಕ್ಕಳು ಏನಂದುಕೊಳ್ಳುತ್ತಾರೆ ಎಂಬ ಚಿಂತೆಯನ್ನು ಅವರು ಮಾಡಿಲ್ಲ. ಆ ಬಗ್ಗೆ ಇತ್ತೀಚೆಗಿನ ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದಾರೆ.

‘ನಾಲ್ಕು-ಐದು ಸೆxಕ್ಸ್​ ಕಾಮಿಡಿ ಸಿನಿಮಾದಲ್ಲಿ ಅಭಿನಯಿಸಿದ ನಟ ನಾನೊಬ್ಬನೇ. ಭವಿಷ್ಯದಲ್ಲಿ ಈ ಬಗ್ಗೆ ನನ್ನ ಮಗ ಏನು ಎಂದುಕೊಳ್ಳಬಹುದು ಅಂತ ನಾನು ಯೋಚಿಸಿಲ್ಲ. ನಾನು ಅಂಥ ಸಿನಿಮಾ ಮಾಡಿದಾಗ ನನ್ನ ತಂದೆ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿದ್ದರು. ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ನನ್ನ ತಂದೆ-ತಾಯಿ ಕೂಡ ನನಗೆ ಹೇಳಿಲ್ಲ. ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಅವರು ನನಗೆ ನೀಡಿದ್ದರು’ ಎಂದು ಇಟೈಮ್ಸ್​ಗೆ ನೀಡಿದ ಸಂದರ್ಶನದಲ್ಲಿ ರಿತೇಶ್​ ದೇಶಮುಖ್​ ಹೇಳಿದ್ದಾರೆ.

ಇದನ್ನೂ ಓದಿ
Genelia D’Souza: ಸಿಇಒ ಪಾತ್ರದಲ್ಲಿ ನಟಿ ಜೆನಿಲಿಯಾ ಡಿಸೋಜಾ​; ಕಿರೀಟಿ ಸಿನಿಮಾ ಬಗ್ಗೆ ಕೇಳಿಬಂತು ಸ್ಪೆಷಲ್​ ನ್ಯೂಸ್​
Vikrant Rona: ಕಿಚ್ಚನ ‘ರಾ ರಾ ರಕ್ಕಮ್ಮ..’ ಹಾಡಿಗೆ ಹೆಜ್ಜೆ ಹಾಕಿದ ಬಾಲಿವುಡ್​ ಸ್ಟಾರ್​ ನಟ ರಿತೇಶ್​ ದೇಶಮುಖ್​
ಮಾಧುರಿ ದೀಕ್ಷಿತ್​ಗೂ ಹತ್ತಿದೆ ‘ಕಚ್ಚಾ ಬಾದಾಮ್​’ ಗುಂಗು; ರಿತೇಶ್​​ ಜತೆ ಮಸ್ತ್​ ಡ್ಯಾನ್ಸ್​; ಇಲ್ಲಿದೆ ವಿಡಿಯೋ
ಜೆನಿಲಿಯಾ ರಿತೇಶ್​ ದಂಪತಿಗೆ ಸುದೀಪ್​ ಪ್ರೀತಿಯ ವಿಶ್​; ಹೊಸ ಕಾರ್ಯಕ್ಕೆ ಕಿಚ್ಚನ ಪ್ರೋತ್ಸಾಹ

2003ರಿಂದಲೂ ರಿತೇಶ್​ ದೇಶಮುಖ್​ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅನೇಕ ಶೋಗಳನ್ನು ನಿರೂಪಿಸಿದ ಅನುಭವವೂ ಅವರಿಗೆ ಇದೆ. ‘ಮಸ್ತಿ’, ‘ಗ್ರ್ಯಾಂಡ್ ಮಸ್ತಿ’, ‘ಕ್ಯಾ ಕೂಲ್​ ಹೈ ಹಮ್​’, ‘ಕ್ಯಾ ಸೂಪರ್​ ಕೂಲ್​ ಹೈ ಹಮ್​’ ಇವು ರಿತೇಶ್​ ದೇಶಮುಖ್​ ನಟಿಸಿದ ಅಡಲ್ಟ್​ ಕಾಮಿಡಿ ಸಿನಿಮಾಗಳು.

2012ರಲ್ಲಿ ಖ್ಯಾತ ನಟಿ ಜೆನಿಲಿಯಾ ಡಿಸೋಜಾ ಜೊತೆ ರಿತೇಶ್​ ದೇಶಮುಖ್​ ಮದುವೆ ಆದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಜೆನಿಲಿಯಾ ಡಿಸೋಜಾ ಮತ್ತು ರಿತೇಶ್ ದೇಶಮುಖ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಆಗಿದ್ದಾರೆ. ಮದುವೆ ಬಳಿಕ ಜೆನಿಲಿಯಾ ಅವರು ನಟನೆಯಿಂದ ದೂರ ಉಳಿದಿದ್ದರು. ಈಗ ಅವರು ಕಮ್​ಬ್ಯಾಕ್​ ಮಾಡುತ್ತಿದ್ದಾರೆ.