ಭರ್ಜರಿ ಕಂಬ್ಯಾಕ್ ಸೂಚನೆ ಕೊಟ್ಟ ಕರಣ್ ಜೋಹರ್; ಸಾಂಗ್​ನಲ್ಲೇ ಟೀಸರ್​ ಕಟ್ಟಿಕೊಟ್ಟ ನಿರ್ದೇಶಕ

|

Updated on: Jun 20, 2023 | 1:07 PM

Rocky Aur Rani Kii Prem Kahaani Teaser: ಹೆಸರೇ ಸೂಚಿಸುವಂತೆ ಇದೊಂದು ಪ್ರೇಮ ಕಥೆ. ಇದನ್ನು ಯಾವ ರೀತಿಯಲ್ಲಿ ಕಟ್ಟಿಕೊಡಲಾಗಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಈ ಕುತೂಹಲ ಹೆಚ್ಚಿಸುವ ರೀತಿಯಲ್ಲಿ ಟೀಸರ್ ಮೂಡಿ ಬಂದಿದೆ.

ಭರ್ಜರಿ ಕಂಬ್ಯಾಕ್ ಸೂಚನೆ ಕೊಟ್ಟ ಕರಣ್ ಜೋಹರ್; ಸಾಂಗ್​ನಲ್ಲೇ ಟೀಸರ್​ ಕಟ್ಟಿಕೊಟ್ಟ ನಿರ್ದೇಶಕ
ರಣವೀರ್​-ಆಲಿಯಾ
Follow us on

ಕರಣ್ ಜೋಹರ್ (Karan Johar) ಅವರು ನಿರ್ದೇಶನ ಮಾಡುತ್ತಿದ್ದಾರೆ ಎಂದರೆ ಅಲ್ಲೊಂದು ವಿಶೇಷತೆ ಇರುತ್ತದೆ. ‘ಕುಚ್ ಕುಚ್ ಹೋತಾ ಹೈ’ ಮೊದಲಾದ ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಈಗ ಅವರು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ (Rocky Aur Rani Kii Prem Kahaani) ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದ ಟೀಸರ್ ರಿಲೀಸ್ ಆಗಿದೆ. ಸಂಪೂರ್ಣವಾಗಿ ಮ್ಯೂಸಿಕ್ ಹಾಗೂ ಹಾಡುಗಳ ಮೂಲಕ ಈ ಟೀಸರ್ ಮೂಡಿ ಬಂದಿದೆ. ಪ್ರತಿ ದೃಶ್ಯವೂ ಸಖತ್ ಅದ್ದೂರಿಯಾಗಿದೆ ಎಂಬುದಕ್ಕೆ ಟೀಸರ್​​ನಲ್ಲಿ ಸಾಕ್ಷಿ ಸಿಕ್ಕಿದೆ.

‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದಲ್ಲಿ ರಣವೀರ್ ಸಿಂಗ್, ಆಲಿಯಾ ಭಟ್ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಜಯಾ ಬಚ್ಚನ್, ಧರ್ಮೇಂದ್ರ ಮೊದಲಾದ ಕಲಾವಿದರು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹೆಸರೇ ಸೂಚಿಸುವಂತೆ ಇದೊಂದು ಪ್ರೇಮ ಕಥೆ. ಇದನ್ನು ಯಾವ ರೀತಿಯಲ್ಲಿ ಕಟ್ಟಿಕೊಡಲಾಗಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಈ ಕುತೂಹಲ ಹೆಚ್ಚಿಸುವ ರೀತಿಯಲ್ಲಿ ಟೀಸರ್ ಮೂಡಿ ಬಂದಿದೆ.

ಕರಣ್ ಜೋಹರ್ ಸಿನಿಮಾಗಳಲ್ಲಿ ಮ್ಯೂಸಿಕ್​ಗೆ ಹೆಚ್ಚು ಆದ್ಯತೆ ಇರುತ್ತದೆ. ಚಿತ್ರದ ಸಂಪೂರ್ಣ ಟೀಸರ್ ಹಾಡಿನ ರೂಪದಲ್ಲೇ ಮೂಡಿ ಬಂದಿದೆ ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ. ‘ಬ್ರಹ್ಮಾಸ್ತ್ರ’, ‘ಭೂಲ್ ಭುಲಯ್ಯ 2’ ಸೇರಿ ಹಲವು ಸೂಪರ್ ಹಿಟ್ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿರುವ ಪ್ರೀತಮ್ ಅವರು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.


ಇದನ್ನೂ ಓದಿ: Karan Johar: ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಕರಣ್​ ಜೋಹರ್​; ವಿಶೇಷ ವಿಡಿಯೋ ಮೂಲಕ ಸಂಭ್ರಮ

‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದ ಕೆಲಸಗಳು ಪೂರ್ಣಗೊಂಡು ಬಹಳ ಸಮಯ ಕಳೆದಿದೆ. ಆದರೆ, ಆಲಿಯಾ ಭಟ್ ಅವರು ಪ್ರೆಗ್ನೆಂಟ್ ಆಗಿದ್ದ ಕಾರಣಕ್ಕೆ ಚಿತ್ರದ ರಿಲೀಸ್ ದಿನಾಂಕ ಮುಂದಕ್ಕೆ ಹಾಕಲಾಯಿತು. ಜುಲೈ 28ರಂದು ಈ ಚಿತ್ರ ರಿಲೀಸ್ ಆಗುತ್ತಿದೆ. ಶೀಘ್ರದಲ್ಲೇ ಈ ಚಿತ್ರದ ಟ್ರೇಲರ್ ರಿಲೀಸ್ ಆಗುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ