ರೋಹಿತ್ ಶೆಟ್ಟಿ (Rohit Shetty) ನಿರ್ದೇಶನದ ಸಿನಿಮಾಗಳಲ್ಲಿ ಆ್ಯಕ್ಷನ್ಗೆ ಬರ ಇರುವುದಿಲ್ಲ. ಅವರ ಸಿನಿಮಾಗಳಲ್ಲಿ ಮಾಸ್ ಮಸಾಲ ಅಂಶಗಳು ಹೇರಳವಾಗಿ ಇರುತ್ತವೆ. ಅದರಲ್ಲೂ, ಕಾರು, ಬಸ್ಸುಗಳನ್ನು ಉಡೀಸ್ ಮಾಡೋದು ಎಂದರೆ ಅವರಿಗೆ ಸಖತ್ ಇಷ್ಟ. ಹೀಗಾಗಿ, ಅವರ ನಿರ್ದೇಶನದ ಎಲ್ಲಾ ಚಿತ್ರಗಳಲ್ಲೂ ಈ ರೀತಿಯ ಒಂದು ದೃಶ್ಯವಾದರೂ ಇದ್ದೇ ಇರುತ್ತದೆ. ಈಗ ರೋಹಿತ್ ಶೆಟ್ಟಿ ಅವರು ‘ಸಿಂಗಂ 3’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಆ್ಯಕ್ಷನ್ ದೃಶ್ಯ ಶೂಟ್ ಮಾಡೋ ಸಂದರ್ಭ ಹೇಗಿತ್ತು ಎಂಬುದನ್ನು ಅವರು ಫೋಟೋ ಮೂಲಕ ತೋರಿಸಿದ್ದಾರೆ.
ರೋಹಿತ್ ಶೆಟ್ಟಿ ಅವರ ‘ಸಿಂಗಂ’ ಹಾಗೂ ‘ಸಿಂಗಂ’ ರಿಟರ್ನ್ ಸಿನಿಮಾಗಳು ಗಮನ ಸೆಳೆದಿವೆ. ಈಗ ಈ ಸರಣಿಯಲ್ಲಿ ಮೂರನೇ ಸಿನಿಮಾ ರಿಲೀಸ್ ಆಗುತ್ತಿದೆ. ರೋಹಿತ್ ಶೆಟ್ಟಿ ಅವರು ಕಾಪ್ ಯೂನಿವರ್ಸ್ ಮಾಡಿದ್ದು, ಇದರಡಿಯಲ್ಲಿ ‘ಸಿಂಗಂ’, ‘ಸಿಂಗಂ ರಿಟರ್ನ್ಸ್’, ‘ಸಿಂಬ’, ‘ಸೂರ್ಯವಂಶಿ’ ಚಿತ್ರಗಳಿವೆ. ಈಗ ಇದಕ್ಕೆ ‘ಸಿಂಗಂ 3’ ಕೂಡ ಸೇರ್ಪಡೆ ಆಗುತ್ತಿದೆ.
‘ಸಿಂಗಂ 3’ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ. ಅಜಯ್ ದೇವಗನ್ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ, ಟೈಗರ್ ಶ್ರಾಫ್ ಮೊದಲಾದವರು ನಟಿಸಿದ್ದಾರೆ. ಇನ್ನೂ ಕೆಲ ಪ್ರಮುಖರು ಅತಿಥಿ ಪಾತ್ರ ಮಾಡಲಿದ್ದಾರಂತೆ. ಈ ಚಿತ್ರದ ಸೆಟ್ನಲ್ಲಿ ಬಾಂಬ್ ಇಟ್ಟು ಬಸ್ಸು ಹಾಗೂ ಕಾರುಗಳನ್ನು ಸಿಡಿಸುತ್ತಿರುವ ದೃಶ್ಯ ಇದೆ. ‘ಕೆಲಸ ಪ್ರಗತಿಯಲ್ಲಿದೆ’ ಎಂದು ರೋಹಿತ್ ಅವರು ಬರೆದುಕೊಂಡಿದ್ದಾರೆ.
12 years ago, we gave Indian Cinema its biggest cinematic Cop Universe. With all the love we have received over the years, the force got stronger and the Singham family got bigger. Today we come together to take our franchise ahead with Singham Again!#RohitShetty #SinghamAgain pic.twitter.com/9WYbJ8omMc
— Ajay Devgn (@ajaydevgn) September 16, 2023
ಇದನ್ನೂ ಓದಿ: Rohit Shetty: ಸೆಟ್ನಲ್ಲಿ ನಡೆಯಿತು ಅವಘಡ; ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿಗೆ ಗಾಯ
2021ರಲ್ಲಿ ರಿಲೀಸ್ ಆದ ‘ಸೂರ್ಯವಂಶಿ’ ಸಿನಿಮಾ ಯಶಸ್ಸು ಕಂಡಿದೆ. ಈ ಚಿತ್ರ ನೂರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಹೀಗಾಗಿ, ‘ಸಿಂಗಂ 3’ ಕೂಡ ಭರ್ಜರಿ ನಿರೀಕ್ಷೆ ಮೂಡಿಸಿದೆ. ಇನ್ನು, ‘ಇಂಡಿಯನ್ ಪೊಲೀಸ್ ಫೋರ್ಸ್’ ಹೆಸರಿನ ವೆಬ್ ಸೀರಿಸ್ ಕೂಡ ನಿರ್ದೇಶನ ಮಾಡುತ್ತಿದ್ದಾರೆ ರೋಹಿತ್. ಇದರ ಕೆಲಸ ಪ್ರಗತಿಯಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:05 am, Fri, 27 October 23