ಸಾಯಿ ಪಲ್ಲವಿ ಜೊತೆ ಆಮಿರ್​ ಖಾನ್​ ಮಗನ ಸುತ್ತಾಟ; ಫೋಟೋ ವೈರಲ್​

ಸಾಯಿ ಪಲ್ಲವಿ ಮತ್ತು ಜುನೈದ್​ ಖಾನ್​ ಜೊತೆಯಾಗಿ ಇರುವ ಫೋಟೋಗಳು ಲೀಕ್​ ಆಗಿವೆ. ಆ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ವಿದೇಶದಲ್ಲಿ ಅವರಿಬ್ಬರು ಬ್ಯುಸಿ ಆಗಿದ್ದಾರೆ. ವೈರಲ್​ ಫೋಟೋಗಳನ್ನು ಕಂಡು ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಮಾಡಿರುವ ಸಾಯಿ ಪಲ್ಲವಿ ಅವರು ಇದೇ ಮೊದಲ ಬಾರಿಗೆ ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ.

ಸಾಯಿ ಪಲ್ಲವಿ ಜೊತೆ ಆಮಿರ್​ ಖಾನ್​ ಮಗನ ಸುತ್ತಾಟ; ಫೋಟೋ ವೈರಲ್​
ಸಾಯಿ ಪಲ್ಲವಿ, ಜುನೈದ್​ ಖಾನ್​

Updated on: Feb 12, 2024 | 9:28 PM

ನಟಿ ಸಾಯಿ ಪಲ್ಲವಿ (Sai Pallavi) ಅವರು ಸದ್ಯಕ್ಕೆ ಸಿಂಗಲ್​ ಆಗಿದ್ದಾರೆ. ಯಾರ ಜೊತೆಗೂ ಅವರ ಹೆಸರು ತಳುಕು ಹಾಕಿಕೊಂಡಿಲ್ಲ. ಬಹುಭಾಷೆಯ ಚಿತ್ರರಂಗದಲ್ಲಿ ಅವರಿಗೆ ಬೇಡಿಕೆ ಇದೆ. ಈಗ ಅವರು ಆಮಿರ್​ ಖಾನ್​ (Aamir Khan) ಪುತ್ರ ಜುನೈದ್​ ಖಾನ್​ (Junaid Khan) ಜೊತೆ ಓಡಾಡುತ್ತಿದ್ದಾರೆ. ಹಾಗಂತ ಅವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂದರ್ಥವಲ್ಲ. ಹೊಸದೊಂದು ಸಿನಿಮಾದಲ್ಲಿ ಅವರಿಬ್ಬರು ನಟಿಸುತ್ತಿದ್ದಾರೆ. ವಿದೇಶದಲ್ಲಿ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಚಿತ್ರೀಕರಣದ ನಡುವೆ ಅವರು ಅಲ್ಲಿನ ಸ್ನೋ ಫೆಸ್ಟಿವಲ್​ನಲ್ಲಿ ಸುತ್ತಾಡಿದ್ದಾರೆ. ಆ ಸಂದರ್ಭದ ಫೋಟೋಗಳು ವೈರಲ್​ ಆಗಿವೆ. ಚಿತ್ರತಂಡದ ಜೊತೆಗಿರುವ ಯಾರಿಂದಲೋ ಈ ಫೋಟೋಗಳು ಲೀಕ್ ಆದಂತಿದೆ.

ಆಮಿರ್​ ಖಾನ್​ ಅವರ ಪುತ್ರ ಜುನೈದ್​ ಖಾನ್​ ಅವರು ಚಿತ್ರರಂಗಕ್ಕೆ ನಟನಾಗಿ ಎಂಟ್ರಿ ನೀಡುತ್ತಿದ್ದಾರೆ. ಅವರ ಮೊದಲ ಸಿನಿಮಾ ‘ಮಹಾರಾಜ್​​’ ಬಿಡುಗಡೆ ಆಗುವುದು ಇನ್ನೂ ಬಾಕಿ ಇದೆ. ಅಷ್ಟರಲ್ಲಾಗಲೇ ಅವರು ಎರಡನೇ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾದಲ್ಲಿ ಅವರು ಸಾಯಿ ಪಲ್ಲವಿ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಪ್ರಸ್ತುತ ಜಪಾನ್​ನಲ್ಲಿ ಇದರ ಚಿತ್ರೀಕರಣ ನಡೆಯುತ್ತಿದೆ. ಶೂಟಿಂಗ್​ ಬಿಡುವಿನಲ್ಲಿ ಸಾಯಿ ಪಲ್ಲವಿ ಮತ್ತು ಜುನೈದ್​ ಖಾನ್​ ಅವರು ಜೊತೆಯಾಗಿ ಕಾಲ ಕಳೆದಿದ್ದಾರೆ.

ಇದನ್ನೂ ಓದಿ: ಪೋಷಕ ಪಾತ್ರಕ್ಕೆ ಆಡಿಷನ್​ ನೀಡಿದ ಆಮಿರ್​ ಖಾನ್​; ಅಚ್ಚರಿ ಸಂಗತಿ ಬಯಲು

ಸಾಯಿ ಪಲ್ಲವಿ ಮತ್ತು ಜುನೈದ್​ ಖಾನ್​ ಜೊತೆಯಾಗಿ ನಟಿಸುತ್ತಿರುವ ಈ ಸಿನಿಮಾಗೆ ಆಮಿರ್​ ಖಾನ್​ ಅವರೇ ಬಂಡವಾಳ ಹೂಡುತ್ತಿದ್ದಾರೆ. ಸದ್ಯ ಲೀಕ್​ ಆಗಿರುವ ಫೋಟೋ ನೋಡಿದರೆ ಜುನೈದ್​ ಖಾನ್​ ಅವರ ಲುಕ್​ ಯಾವ ರೀತಿ ಇರಬಹುದು ಎಂಬುದಕ್ಕೆ ಸುಳಿವು ಸಿಕ್ಕಂತಾಗಿದೆ. ಈ ಸಿನಿಮಾದ ಶೀರ್ಷಿಕೆ ಏನು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಹಲವು ವರ್ಷಗಳ ಕಾಲ ರಂಗಭೂಮಿಯಲ್ಲಿ ಅನುಭವ ಪಡೆದ ಜುನೈದ್​ ಖಾನ್​ ಅವರು ಚಿತ್ರರಂಗಕ್ಕೆ ಬರುತ್ತಿದ್ದಾರೆ.

ಇದನ್ನೂ ಓದಿ: 58ನೇ ವಯಸ್ಸಿನಲ್ಲಿ ಶಾಸ್ತ್ರೀಯ ಸಂಗೀತ ಕಲಿಯುತ್ತಿರುವ ನಟ ಆಮಿರ್​ ಖಾನ್​

ದಕ್ಷಿಣ ಭಾರತದಲ್ಲಿ ಸಾಯಿ ಪಲ್ಲವಿ ಅವರು ತಮ್ಮ ಪ್ರತಿಭೆ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ. ಈಗ ಅವರು ಬಾಲಿವುಡ್​ಗೆ ಎಂಟ್ರಿ ನೀಡುತ್ತಿದ್ದಾರೆ. ಆ ಕಾರಣದಿಂದ ಈ ಪ್ರಾಜೆಕ್ಟ್​ ಬಗ್ಗೆ ನಿರೀಕ್ಷೆ ಮೂಡಿದೆ. ಆಮಿರ್ ಖಾನ್​ ಪುತ್ರನಿಗೆ ಅವರು ಜೋಡಿ ಆಗಿರುವುದರಿಂದ ನಿರೀಕ್ಷೆ ಡಬಲ್​ ಆಗಿದೆ. ಆರಂಭದಲ್ಲಿ ಈ ಸಿನಿಮಾದ ಶೂಟಿಂಗ್​ಗೆ ಕೆಲವು ಅಡೆತಡೆಗಳು ಉಂಟಾಗಿದ್ದವು. ಆದರೆ ಈಗ ಚಿತ್ರೀಕರಣ ಸರಾಗವಾಗಿ ಸಾಗುತ್ತಿದೆ. ಇತ್ತ, ಆಮಿರ್ ಖಾನ್​ ಅವರು ನಿರ್ಮಾಣ ಮಾಡಿರುವ ‘ಲಾಪತಾ ಲೇಡೀಸ್​’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅದರ ಪ್ರಚಾರದಲ್ಲಿ ಅವರು ಭಾಗಿ ಆಗಿದ್ದಾರೆ. ಆಮಿರ್ ಖಾನ್​ ಅವರ ಮಾಜಿ ಪತ್ನಿ ಕಿರಣ್​ ರಾವ್​ ಅವರು ‘ಲಾಪತಾ ಲೇಡೀಸ್​’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us