ಖ್ಯಾತ ನಟ ಸೈಫ್ ಅಲಿ ಖಾನ್ ಅವರ ಮನೆಯ ಮೇಲೆ ದಾಳಿ ಮಾಡಿದ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಬಾಂಗ್ಲಾದೇಶಿ ಮೂಲದ ಮೊಹಮ್ಮದ್ ಶೆರಿಫುಲ್ ಇಸ್ಲಾಂ ಶೆಹಜಾದ್ ಎಂಬಾತನನ್ನು ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದು, ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ. ಹಾಗಾಗಿ ಆತನನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಮುಂಬೈ ಕೋರ್ಟ್ ಆದೇಶ ನೀಡಿದೆ. ಸೈಫ್ ಮನೆ ಮೇಲೆ ಆದ ದಾಳಿಯ ಉದ್ದೇಶ ಏನು? ಇನ್ನೂ ಯಾರೆಲ್ಲ ಈ ಕೃತ್ಯದಲ್ಲಿ ಭಾಗಿ ಆಗಿದ್ದಾರೆ ಎಂಬುದು ತನಿಖೆ ಬಳಿಕ ಗೊತ್ತಾಗಲಿದೆ.
ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ಬಂದಿರುವ ಮೊಹಮ್ಮದ್ ಶೆರಿಫುಲ್ ಇಸ್ಲಾಂ ಶೆಹಜಾದ್ ಕೆಲವು ತಿಂಗಳಿಂದ ಮುಂಬೈನಲ್ಲಿ ವಾಸವಾಗಿದ್ದಾನೆ. ತನ್ನ ಹೆಸರನ್ನು ಕೂಡ ಆದ ಬದಲಾಯಿಸಿಕೊಂಡಿದ್ದಾನೆ. ವಿಜಯ್ ದಾಸ್ ಎಂಬ ಹೆಸರಿನ ಮೂಲಕ ಆತ ತನ್ನ ನಿಜವಾದ ಗುರುತನ್ನು ಮುಚ್ಚಿಟ್ಟಿದ್ದಾನೆ. ಇಂಥ ಹಲವು ಶಾಕಿಂಗ್ ಸತ್ಯಗಳು ಬಯಲಾಗುತ್ತಿವೆ.
ಸೈಫ್ ಮನೆಗೆ ನುಗ್ಗಿ ದಾಳಿ ಮಾಡಿದ ದಿನ ಮೊಹಮ್ಮದ್ ಶೆರಿಫುಲ್ ಇಸ್ಲಾಂ ಶೆಹಜಾದ್ ಧರಿಸಿದ್ದ ಬಟ್ಟೆಯನ್ನು ಮುಚ್ಚಿಟ್ಟಿದ್ದಾನೆ. ಆ ಬಟ್ಟೆಯಲ್ಲಿ ಸೈಫ್ ಅಲಿ ಖಾನ್ ಅವರ ರಕ್ತದ ಕಲೆಗಳು ಇವೆ. ಆದರೆ ಆ ಬಟ್ಟೆಯನ್ನು ಇಸ್ಲಾಂ ಶೆಹಜಾದ್ ಮುಚ್ಚಿಟ್ಟಿದ್ದಾನೆ. ಅವುಗಳನ್ನು ವಶಕ್ಕೆ ಪಡೆಯುವುದು ಬಾಕಿ ಇದೆ ಎಂದು ಮುಂಬೈ ಪೊಲೀಸರು ಕೋರ್ಟ್ಗೆ ತಿಳಿಸಿದ್ದಾರೆ. ಪಕ್ಕಾ ಪ್ಲ್ಯಾನ್ ಮಾಡಿಯೇ ಆತ ಸೈಫ್ ಮನೆಗೆ ನುಗ್ಗಿದ್ದ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ವಾದಿಸಿದ್ದಾರೆ.
ಮೊಹಮ್ಮದ್ ಶೆರಿಫುಲ್ ಇಸ್ಲಾಂ ಶೆಹಜಾದ್ ಪರವಾಗಿ ವಕೀಲ ದಿನೇಶ್ ಪ್ರಜಾಪತಿ ವಾದ ಮಾಡಿದ್ದಾರೆ. ‘ಸೆಲೆಬ್ರಿಟಿ ಮೇಲೆ ದಾಳಿ ಆಗಿದೆ ಎಂಬ ಕಾರಣಕ್ಕೆ ಹೆಚ್ಚು ಚರ್ಚೆ ಆಗುತ್ತಿದೆ. ಆರೋಪಿಯನ್ನು ಸುಮ್ಮನೇ ಬಲಿಪಶು ಮಾಡಲು ಪ್ರಯತ್ನಿಸಲಾಗಿದೆ. ಆರೋಪಿಯಿಂದ ಯಾವುದೇ ಸಾಕ್ಷಿಯನ್ನು ಪೊಲೀಸರು ಕಲೆ ಹಾಕಿಲ್ಲ. ಆತ ಬಾಂಗ್ಲಾದೇಶದ ಪ್ರಜೆ ಎಂಬುದನ್ನು ಸಾಬೀತು ಮಾಡಲು ಕೂಡ ಯಾವುದೇ ದಾಖಲೆಗಳನ್ನು ಪೊಲೀಸರು ನೀಡಿಲ್ಲ’ ಎಂದು ಆರೋಪಿ ಪರ ವಕೀಲರು ಹೇಳಿದ್ದಾರೆ.
ಇದನ್ನೂ ಓದಿ: ಇವರೇ ನೋಡಿ ಸೈಫ್ ಅಲಿ ಖಾನ್ ಜೀವ ಉಳಿಸಿದ ಆಟೋ ಡ್ರೈವರ್
ಮುಂಬೈನ ಬಾಂದ್ರಾದಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಸೈಫ್ ಅಲಿ ಖಾನ್ ಅವರ ಕುಟುಂಬ ವಾಸ ಮಾಡುತ್ತಿದೆ. ಈ ಅಪಾರ್ಟ್ಮೆಂಟ್ಗೆ ಜನವರಿ 16ರ ನಸುಕಿನಲ್ಲಿ ದರೋಡೆಕೋರರು ನುಗ್ಗಿದ್ದರು. ಈ ಸಂದರ್ಭದಲ್ಲಿ ಸೈಫ್ ಅಲಿ ಖಾನ್ಗೆ ಚಾಕು ಇರಿತ ಆಯಿತು. ಆಗ ಸೈಫ್ ಅಲಿ ಖಾನ್ ಅವರು ಗಂಭೀರವಾಗಿ ಗಾಯಗೊಂಡರು. ಈಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.