ಬಾಲಿವುಡ್ನ ಸ್ಟಾರ್ ದಂಪತಿಗಳಾದ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ (Kareena Kapoor Khan) ಅವರು ಆಗಾಗ ಸುದ್ದಿ ಆಗುತ್ತ ಇರುತ್ತಾರೆ. ಅನೇಕ ವಿಚಾರಗಳನ್ನು ಅವರು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಹಲವು ಪ್ರಾಜೆಕ್ಟ್ಗಳಲ್ಲಿ ಇಬ್ಬರೂ ಬ್ಯುಸಿ ಆಗಿದ್ದಾರೆ. ಮಕ್ಕಳ ಪಾಲನೆಯ ಜೊತೆಗೆ ವೃತ್ತಿಜೀವನವನ್ನೂ ಸರಿದೂಗಿಸಿಕೊಂಡು ಸಾಗುತ್ತಿದ್ದಾರೆ ಕರೀನಾ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಸೈಫ್ ಅಲಿ ಖಾನ್ (Saif Ali Khan) ಅವರು ಕರೀನಾ ಕೇಶ ವಿನ್ಯಾಸದ ಬಗ್ಗೆ ಮಾತನಾಡಿದ್ದಾರೆ. ‘ಕರೀನಾ ಕೂದಲಿಗೆ ನಾನು ಕೈ ಹಾಕಿದರೆ ಆಕೆ ನನ್ನನ್ನು ಕೊಲೆ ಮಾಡುತ್ತಾಳೆ’ ಎಂದು ಸೈಫ್ ಹೇಳಿದ್ದಾರೆ.
ಈ ವಿಷಯ ಪ್ರಸ್ತಾಪ ಆಗಲು ಕಾರಣ ಲಾಕ್ಡೌನ್. ಹೌದು, ಕಳೆದ ವರ್ಷ ಕಠಿಣ ಲಾಕ್ಡೌನ್ ನಿಯಮಗಳು ಜಾರಿಯಾಗಿದ್ದಾಗ ಅನೇಕ ಸೆಲೆಬ್ರಿಟಿಗಳು ಮನೆಯಲ್ಲೇ ಹೇರ್ಕಟ್ ಮಾಡಿಕೊಂಡರು. ತಮ್ಮ ಸಂಗಾತಿಗೆ ಹೇರ್ಕಟ್ ಮಾಡಿದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ವಿಚಾರದಲ್ಲಿ ಇದು ಸಾಧ್ಯವಾಗಿರಲಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಸೈಫ್ ಅಲಿ ಖಾನ್ ಈಗ ವಿವರಿಸಿದ್ದಾರೆ.
‘ಅವಳು ದೇಶದ ಆಸ್ತಿ. ಆಕೆಯ ಕೂದಲನ್ನು ನಾನು ಕತ್ತರಿಸಲು ಹೋದರೆ ತುಂಬ ಅನ್ಪ್ರೊಫೆಷನಲ್ ಆಗುತ್ತದೆ. ಆಕೆಯ ಕೂದಲಿಗೆ ನಾನು ಕೈ ಹಾಕಿದರೆ ಖಂಡಿತಾ ನನ್ನನ್ನು ಸಾಯಿಸುತ್ತಾಳೆ. ನಾವಿಬ್ಬರೂ ನಟಿನೆಯಲ್ಲಿ ಬ್ಯುಸಿ ಇದ್ದೇವೆ. ಆದ್ದರಿಂದ ಪರಸ್ಪರ ಕೂದಲಿನ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳೋಕೆ ಆಗಲ್ಲ’ ಎಂದು ಸೈಫ್ ಅಲಿ ಖಾನ್ ಹೇಳಿದ್ದಾರೆ.
2012ರಲ್ಲಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಮದುವೆ ಆದರು. ತೈಮೂರ್ ಅಲಿ ಖಾನ್ ಮತ್ತು ಜೆ ಅಲಿ ಖಾನ್ ಎಂಬಿಬ್ಬರು ಗಂಡು ಮಕ್ಕಳ ಪಾಲನೆಯಲ್ಲಿ ಈ ಜೋಡಿ ತೊಡಗಿಕೊಂಡಿದೆ. ಇತ್ತೀಚೆಗೆ ಕರೀನಾ ಅವರು ‘ಪ್ರಗ್ನೆನ್ಸಿ ಬೈಬಲ್’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದರು. ಅದರಲ್ಲಿ ಅವರ ಪ್ರಗ್ನೆನ್ಸಿ ಅನುಭವವನ್ನು ಬರೆಯಲಾಗಿದೆ. ಆದರೆ ಪುಸ್ತಕದ ಶೀರ್ಷಿಕೆಯಲ್ಲಿ ಬೈಬಲ್ ಎಂಬ ಪದ ಬಳಕೆ ಮಾಡಿರುವುದಕ್ಕೆ ಕೆಲವರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಸಿನಿಮಾ ವಿಚಾರಕ್ಕೆ ಬರುವುದಾದರೆ ಆಮಿರ್ ಖಾನ್ ನಾಯಕತ್ವದ ‘ಲಾಲ್ ಸಿಂಗ್ ಚಡ್ಡಾ’ ಚಿತ್ರದಲ್ಲಿ ಕರೀನಾ ನಟಿಸಿದ್ದಾರೆ. ಆ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ.
ಇದನ್ನೂ ಓದಿ:
Jeh: ಕರೀನಾ-ಸೈಫ್ ಅಲಿ ಖಾನ್ 2ನೇ ಪುತ್ರನಿಗೆ ನಾಮಕರಣ; ಏನು ಈ ಹೆಸರಿನ ಅರ್ಥ?
ಕರೀನಾ ಕಪೂರ್ ಖಾನ್ ಪುಸ್ತಕದ ಶೀರ್ಷಿಕೆ ವಿರುದ್ಧ ಕ್ರೈಸ್ತ ಸಮುದಾಯ ಗುಂಪೊಂದರಿಂದ ದೂರು ದಾಖಲು
Published On - 8:52 am, Tue, 27 July 21