AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jeh: ಕರೀನಾ-ಸೈಫ್​ ಅಲಿ ಖಾನ್​ 2ನೇ ಪುತ್ರನಿಗೆ ನಾಮಕರಣ; ಏನು ಈ ಹೆಸರಿನ ಅರ್ಥ?

Kareena Kapoor Khan Saif Ali Khan: ಮೊದಲ ಪುತ್ರನಿಗೆ ಅವರು ತೈಮೂರ್​ ಅಲಿ ಖಾನ್​ ಎಂದು ಹೆಸರು ಇಟ್ಟಾಗ ವಿವಾದ ಆಗಿತ್ತು. ಅದೇ ಕಾರಣಕ್ಕೆ ತಮ್ಮ ಎರಡನೇ ಮಗನಿಗೆ ಹೆಸರು ಇಡುವಾಗ ಸೈಫ್​-ಕರೀನಾ ತುಂಬ ಎಚ್ಚರಿಕೆ ವಹಿಸಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು.

Jeh: ಕರೀನಾ-ಸೈಫ್​ ಅಲಿ ಖಾನ್​ 2ನೇ ಪುತ್ರನಿಗೆ ನಾಮಕರಣ; ಏನು ಈ ಹೆಸರಿನ ಅರ್ಥ?
ಕರೀನಾ-ಸೈಫ್​ ಅಲಿ ಖಾನ್​ 2ನೇ ಪುತ್ರನಿಗೆ ನಾಮಕರಣ; ಏನು ಈ ಹೆಸರಿನ ಅರ್ಥ?
TV9 Web
| Edited By: |

Updated on:Jul 09, 2021 | 2:42 PM

Share

ಸ್ಟಾರ್​ ದಂಪತಿಗಳಾದ ಸೈಫ್​ ಅಲಿ ಖಾನ್​ ಮತ್ತು ಕರೀನಾ ಕಪೂರ್​ ಖಾನ್ ಅವರು ತಮ್ಮ 2ನೇ ಮಗನಿಗೆ ನಾಮಕರಣ ಮಾಡಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ವರ್ಷ ಫೆಬ್ರವರಿಯಲ್ಲಿ ಎರಡನೇ ಪುತ್ರನಿಗೆ ಕರೀನಾ ಜನ್ಮ ನೀಡಿದ್ದರು. ಆದರೆ ಈವರೆಗೂ ಒಮ್ಮೆಯೂ ಅವರು ಮಗನ ಮುಖ ತೋರಿಸಿಲ್ಲ. ಏನು ಹೆಸರು ಇಟ್ಟಿದ್ದಾರೆ ಎಂಬುದು ಕೂಡ ಬಹಿರಂಗ ಆಗಿರಲಿಲ್ಲ. ಈಗ ಕೇಳಿಬಂದಿರುವ ಮಾಹಿತಿ ಪ್ರಕಾರ ಎರಡನೇ ಪುತ್ರನಿಗೆ ಅವರು ‘ಜೇ’ (Jeh) ಎಂದು ಹೆಸರು ಇಟ್ಟಿದ್ದಾರೆ. ಈ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.

ಅಷ್ಟಕ್ಕೂ ಕರೀನಾ-ಸೈಫ್​ ಪುತ್ರನ ನಾಮಕರಣದ ವಿಷಯ ಯಾಕೆ ಇಷ್ಟು ಚರ್ಚೆ ಆಗುತ್ತಿದೆ? ಮೊದಲ ಪುತ್ರನಿಗೆ ಅವರು ತೈಮೂರ್​ ಅಲಿ ಖಾನ್​ ಎಂದು ಹೆಸರು ಇಟ್ಟಿದ್ದರು. ಅದು ದಾಳಿಕೋರ, ಕ್ರೂರ ರಾಜನ ಹೆಸರು ಎಂಬ ಕಾರಣಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಅದೇ ಕಾರಣಕ್ಕೆ ತಮ್ಮ ಎರಡನೇ ಮಗನಿಗೆ ಹೆಸರು ಇಡುವಾಗ ಸೈಫ್​-ಕರೀನಾ ತುಂಬ ಎಚ್ಚರಿಕೆ ವಹಿಸಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಹಾಗಾಗಿ ಅವರು ಏನು ಹೆಸರು ಇಡಬಹುದು ಎಂಬ ಬಗ್ಗೆ ಎಲ್ಲರಿಗೂ ಕುತೂಹಲ ಇತ್ತು.

2ನೇ ಪುತ್ರನಿಗೆ ಜೇ ಎಂದು ಹೆಸರು ಇಟ್ಟಿದ್ದಾರೆ ಎಂಬ ಸುದ್ದಿ ಜೋರಾಗಿ ಹರಡಿದ್ದರೂ ಕೂಡ ಸೈಫ್​ ಮತ್ತು ಕರೀನಾ ಕಡೆಯಿಂದ ಈ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆ ಹೊರಬಿದ್ದಿಲ್ಲ. ಅಷ್ಟಕ್ಕೂ ಜೇ ಎಂಬ ಈ ಹೆಸರಿನ ಅರ್ಥ ಏನು ಎಂದು ತಿಳಿದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಈ ಹೆಸರಿಗೆ ಲ್ಯಾಟಿನ್​ ಭಾಷೆಯಲ್ಲಿ ನೀಲಿ ಬಣ್ಣದ ಒಂದು ಪಕ್ಷಿ ಎಂಬ ಅರ್ಥ ಇದೆ.

ಜೇ ಅಲ್ಲದೆ, ಮನ್ಸೂರ್​ ಎಂದು ಹೆಸರಿಡಬೇಕು ಅಂತ ಕೂಡ ಸೈಫ್​-ಕರೀನಾ ಆಲೋಚಿಸಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಈ ಸುದ್ದಿಗಳ ಬಗ್ಗೆ ಅವರಿಂದಲೇ ಸ್ಪಷ್ಟನೆ ಸಿಗಬೇಕಿದೆ. ಮೊದಲ ಪುತ್ರ ತೈಮೂರ್​ ಅಲಿ ಖಾನ್​ ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಫೇಮಸ್​ ಆಗಿದ್ದಾನೆ. ಅವನು ಹೋದಲ್ಲೆಲ್ಲ ಪಾಪರಾಜಿಗಳು ಕ್ಯಾಮೆರಾ ಸಹಿತ ಹಿಂಬಾಲಿಸುತ್ತಾರೆ. ಆದರೆ ಈವರೆಗೂ ತಮ್ಮ ಎರಡನೇ ಮಗನ ಮುಖ ಕಾಣುವಂತಹ ಫೋಟೋವನ್ನು ಕರೀನಾ-ಸೈಫ್​ ಎಲ್ಲಿಯೂ ಬಹಿರಂಗಪಡಿಸಿಲ್ಲ. ಸಾರ್ವಜನಿಕ ಜೀವನದಿಂದ ಸಾಧ್ಯವಾದಷ್ಟು ದೂರವಿರಿಸಿ ಎರಡನೇ ಮಗನನ್ನು ಬೆಳೆಸಲು ಈ ದಂಪತಿ ತೀರ್ಮಾನಿಸಿದಂತಿದೆ.

ಇದನ್ನೂ ಓದಿ:

ಮತ್ತೆ ಹಿಂದೂಗಳ ಭಾವನೆಗೆ ಧಕ್ಕೆ ತಂದ ಸೈಫ್​ ಅಲಿ ಖಾನ್​; ಈ ಪೋಸ್ಟರ್​ನಲ್ಲಿ ಇರುವ ವಿವಾದ ಏನು?

ಕರೀನಾ ಕಪೂರ್​ ಸೀತೆ ಪಾತ್ರ ಮಾಡುವಂತಿಲ್ಲ; ಇದಕ್ಕೂ ಸೈಫ್​ ಅಲಿ ಖಾನ್​ಗೂ ಏನು ಸಂಬಂಧ?

Published On - 2:02 pm, Fri, 9 July 21