AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಷ್ಟೆಲ್ಲಾ ಸಿಕ್ಕ ಮೇಲೂ ನಿಮಗಿದು ಬೇಕಿತ್ತಾ; ರಾಜ್​ಕುಂದ್ರಾರನ್ನು ತರಾಟೆಗೆ ತೆಗೆದುಕೊಂಡು ಅತ್ತು ರಂಪಾಟ ಮಾಡಿದ್ದ ಶಿಲ್ಪಾ ಶೆಟ್ಟಿ

ಜಗಳದ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ ಬಿಕ್ಕಿಬಿಕ್ಕಿ ಅಳಲಾರಂಭಿಸಿದ್ದು, ಗಂಡನ ಮೇಲಿನ ಗಂಭೀರ ಆರೋಪ ಕೇಳಿ ಜರ್ಜರಿತರಾಗಿದ್ದರಂತೆ. ಬಳಿಕ ಅವರಿಬ್ಬರ ಜಗಳವನ್ನು ನಿಲ್ಲಿಸಲು ಮಧ್ಯೆ ಪ್ರವೇಶಿಸಿದ ಪೊಲೀಸರು ಶಿಲ್ಪಾ ಶೆಟ್ಟಿಯನ್ನು ಸಮಾಧಾನಗೊಳಿಸಿದರಂತೆ.

ಇಷ್ಟೆಲ್ಲಾ ಸಿಕ್ಕ ಮೇಲೂ ನಿಮಗಿದು ಬೇಕಿತ್ತಾ; ರಾಜ್​ಕುಂದ್ರಾರನ್ನು ತರಾಟೆಗೆ ತೆಗೆದುಕೊಂಡು ಅತ್ತು ರಂಪಾಟ ಮಾಡಿದ್ದ ಶಿಲ್ಪಾ ಶೆಟ್ಟಿ
ಶಿಲ್ಪಾ ಶೆಟ್ಟಿ, ರಾಜ್​ಕುಂದ್ರಾ
TV9 Web
| Edited By: |

Updated on: Jul 27, 2021 | 12:37 PM

Share

ಅಶ್ಲೀಲ ಸಿನಿಮಾ ತಯಾರಿ ಆರೋಪವನ್ನು ಹೊತ್ತಿರುವ ಉದ್ಯಮಿ ರಾಜ್​ಕುಂದ್ರಾ (Raj Kundra) ಅವರ ಮನೆ ಮೇಲೆ ಮುಂಬೈನ ಅಪರಾಧ ತಡೆ ವಿಭಾಗದ ಪೊಲೀಸರು ದಾಳಿ ಮಾಡಿದಾಗ ನಟಿ ಶಿಲ್ಪಾ ಶೆಟ್ಟಿ (Shilpa Shetty) ತನ್ನ ಪತಿ ರಾಜ್​ಕುಂದ್ರಾ ಜತೆಗೆ ಜಗಳ ತೆಗೆದು, ಕಿರುಚಾಡಿ, ಅತ್ತು ಗೋಳಾಡಿದ್ದರೆಂದು ಪೊಲೀಸ್​ ಮೂಲಗಳು ಎಎನ್​ಐ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿವೆ. ಪೊಲೀಸರು ಮನೆಗೆ ಬಂದು ಪರಿಶೀಲನೆ ನಡೆಸುವಾಗ ತನ್ನ ಗಂಡನ ಮೇಲಿರುವ ಆರೋಪ ಕೇಳಿ ದಿಗ್ಭ್ರಾಂತರಾದ ಶಿಲ್ಪಾ ಶೆಟ್ಟಿ, ಪತಿ ಹೀಗೆಲ್ಲಾ ಮಾಡುತ್ತಿದ್ದರೆಂದು ನನಗೆ ಗೊತ್ತೇ ಇರಲಿಲ್ಲ. ಇದ್ಯಾವುದರ ಬಗ್ಗೆಯೂ ನನಗೆ ಅರಿವಿಲ್ಲ ಎಂದು ಹೇಳಿ ದುಃಖ ತೋಡಿಕೊಂಡಿದ್ದರಂತೆ. ಅಲ್ಲದೇ ಆ ಬಗ್ಗೆ ಗಂಡನೊಂದಿಗೆ ತಕರಾರು ತೆಗೆದು ಕಣ್ಣೀರಿಟ್ಟ ಅವರನ್ನು ಸಮಾಧಾನ ಮಾಡಲು ಪೊಲೀಸರೇ ಮುಂದಾಗಬೇಕಾಯಿತು ಎನ್ನುವ ವಿಚಾರವೂ ಬಯಲಾಗಿದೆ.

ರಾಜ್​ಕುಂದ್ರಾ ನೀಲಿ ಚಿತ್ರ ತಯಾರಿಸುವ ಜಾಲದಲ್ಲಿ ತೊಡಗಿಕೊಂಡಿದ್ದಾರೆ ಎಂಬ ಕಾರಣಕ್ಕೆ ಮುಂಬೈ ಪೊಲೀಸರು ಕಳೆದ ವಾರ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸದ್ಯ ಪೊಲೀಸರ ವಶದಲ್ಲೇ ಇರುವ ರಾಜ್​ಕುಂದ್ರಾ ಮೇಲೆ ಹಲವರು ಗಂಭೀರ ಆರೋಪವನ್ನೂ ಎಸಗುತ್ತಿದ್ದಾರೆ. ಹಾಟ್​ಶಾಟ್ಸ್​ ಎಂಬ ಆ್ಯಪ್ ಮೂಲಕ ಅಶ್ಲೀಲ ಚಿತ್ರ ನಿರ್ಮಾಣ ಹಾಗೂ ಹಂಚಿಕೆಯನ್ನು ಮಾಡುತ್ತಿದ್ದ ರಾಜ್​ಕುಂದ್ರಾ ಅನೇಕರನ್ನು ಈ ದಂಧೆಗೆ ನೂಕುವ ಯತ್ನ ಮಾಡಿದ್ದರು ಎಂಬ ಆಪಾದನೆಯೂ ಇದೆ.

ಆದರೆ, ಈ ವಿಚಾರವಾಗಿ ಪೊಲೀಸರು ಮುಂಬೈನಲ್ಲಿರುವ ರಾಜ್​ಕುಂದ್ರಾ ನಿವಾಸದ ಮೇಲೆ ದಾಳಿ ಮಾಡಿದ ನಂತರವಷ್ಟೇ ಅವರ ಪತ್ನಿ ಶಿಲ್ಪಾ ಶೆಟ್ಟಿಗೆ ವಿಷಯ ಗೊತ್ತಾಗಿದೆಯಂತೆ. ಪೊಲೀಸ್​ ತನಿಖೆ ಆರಂಭವಾಗುತ್ತಿದ್ದಂತೆಯೇ ಶಿಲ್ಪಾ ಅನ್ಯಮನಸ್ಕರಾಗಿ, ಬೇಸರಗೊಂಡು ಕುಳಿತಿದ್ದರಂತೆ. ಬಳಿಕ ರಾಜ್​ಕುಂದ್ರಾ ಜತೆಗೆ ಜಗಳ ತೆಗೆದ ಅವರು ಈ ರೀತಿ ಮಾಡುವ ಅವಶ್ಯಕತೆಯಾದರೂ ಏನಿತ್ತು. ಇಂತಹ ದಂಧೆ ನಿಮಗೆ ಬೇಕಿತ್ತಾ ಎಂದು ಕಿಡಿಕಾರಿದ್ದಾರಂತೆ.

ಜಗಳದ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ ಬಿಕ್ಕಿಬಿಕ್ಕಿ ಅಳಲಾರಂಭಿಸಿದ್ದು, ಗಂಡನ ಮೇಲಿನ ಗಂಭೀರ ಆರೋಪ ಕೇಳಿ ಜರ್ಜರಿತರಾಗಿದ್ದರಂತೆ. ಬಳಿಕ ಅವರಿಬ್ಬರ ಜಗಳವನ್ನು ನಿಲ್ಲಿಸಲು ಮಧ್ಯೆ ಪ್ರವೇಶಿಸಿದ ಪೊಲೀಸರು ಶಿಲ್ಪಾ ಶೆಟ್ಟಿಯನ್ನು ಸಮಾಧಾನಗೊಳಿಸಿದರಂತೆ. ಬಳಿಕ ಪೊಲೀಸರೊಂದಿಗೂ ಕಣ್ಣೀರಿಡುತ್ತಲೇ ಮಾತನಾಡಿ ನನಗೆ ಪತಿಯ ಈ ವ್ಯವಹಾರದ ಬಗ್ಗೆ ತಿಳಿದೇ ಇಲ್ಲ. ಆ್ಯಪ್​ ಬಗ್ಗೆಯೂ ಮಾಹಿತಿ ಇಲ್ಲ ಎಂದು ಹೇಳಿಕೊಂಡಿದ್ದಾರಂತೆ.

ಇಷ್ಟೆಲ್ಲಾ ಸಿಕ್ಕ ಮೇಲೂ ನಿಮಗಿದು ಬೇಕಿತ್ತಾ? ಇದು ನಮ್ಮ ಕುಟುಂಬದ ಮರ್ಯಾದೆ ತೆಗೆಯುವುದಷ್ಟೇ ಅಲ್ಲ. ಎಷ್ಟೆಲ್ಲಾ ಆರ್ಥಿಕ ಹೊಡೆತವನ್ನೂ ನೀಡುತ್ತದೆ. ಎಷ್ಟೋ ಒಪ್ಪಂದಗಳು ಈ ಕಾರಣಕ್ಕೆ ಮುರಿದು ಬೀಳಲಿವೆ. ಈಗಾಗಲೇ ಒಂದು ಹಂತಕ್ಕೆ ಸಾಧನೆ ಮಾಡಿ ಸಮಾಜದಲ್ಲಿ ಗುರುತಿಸಿಕೊಂಡ ಮೇಲೆ ಇಂಥಾ ಕೆಲಸದ ಅವಶ್ಯಕತೆಯಾದರೂ ಏನಿತ್ತು ಎಂದು ಪತಿ ರಾಜ್​ಕುಂದ್ರಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ ರಾಜ್​ಕುಂದ್ರಾ ಅವರಿಗೆ ಬಂಧನದ ಭೀತಿ ಕೆಲ ತಿಂಗಳ ಹಿಂದೆಯೇ ಎದುರಾಗಿದ್ದು, ಉಳಿದ ಒಂಬತ್ತು ಜನರು ಮಾರ್ಚ್​ ತಿಂಗಳಿನಲ್ಲಿ ಬಂಧನಕ್ಕೆ ಒಳಗಾಗುತ್ತಿದ್ದಂತೆಯೇ ತಮ್ಮ ಫೋನ್​ ಬದಲಾಯಿಸಿ, ಯಾವುದೇ ಮಾಹಿತಿ ಸಿಗದಂತೆ ನೋಡಿಕೊಳ್ಳಲು ಯತ್ನಿಸಿದ್ದರಂತೆ. ಆದರೆ, ಪೊಲೀಸರು ಹಳೆಯ ಫೋನ್​ ಎಲ್ಲಿ ಎಂದು ಕೇಳಿದಾಗ ಅದನ್ನು ಎಸೆದರುವುದಾಗಿ ತಿಳಿಸಿದ್ದು, ಇದೀಗ ಪೊಲೀಸರು ಪ್ರಮುಖ ಸಾಕ್ಷ್ಯಗಳು ಇದೆ ಎನ್ನಲಾದ ಹಳೇ ಫೋನ್​ ಹುಡುಕಾಟ ಶುರುಮಾಡಿದ್ದಾರಂತೆ.

ಇದನ್ನೂ ಓದಿ: Shilpa Shetty: ಹಾಟ್​ಶಾಟ್ ಗೊತ್ತಾ? ಪೊಲೀಸರ ಪ್ರಶ್ನೆಗೆ ಕಣ್ಣೀರಿಟ್ಟ ಶಿಲ್ಪಾ ಶೆಟ್ಟಿ..! 

‘ಕುಟುಂಬ ಸಮೇತ ಈ ಸಿನಿಮಾ ನೋಡಿ’; ಗಂಡನ ನೀಲಿ ಚಿತ್ರ ದಂಧೆ ನಡುವೆಯೂ ಶಿಲ್ಪಾ ಶೆಟ್ಟಿ ಹೀಗೆ ಹೇಳಿದ್ದೇಕೆ?

(Shilpa Shetty broke down fought with Raj Kundra During Police raid at home in porn case says source)

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್