ಅಡ್ವಾನ್ಸ್ ಟಿಕೆಟ್ ಬುಕಿಂಗ್​ನಲ್ಲಿ ‘ಡಂಕಿ’ ಚಿತ್ರವನ್ನು ಹಿಂದಿಕ್ಕಿದ ‘ಸಲಾರ್’; ಎರಡನೇ ಟ್ರೇಲರ್​ಗೆ ಕೌಂಟ್​ಡೌನ್  

|

Updated on: Dec 18, 2023 | 12:47 PM

‘ಸಲಾರ್’ ಸಿನಿಮಾಗೆ ಈವರೆಗೆ 1,53, 705 ಟಿಕೆಗಟ್​ಗಳು ಮಾರಾಟ ಆಗಿವೆ. ತೆಲುಗು ಮಾತನಾಡುವ ಭಾಗದಲ್ಲಿ 84 ಸಾವಿರ, ಮಲಯಾಳಂ ಭಾಗದಲ್ಲಿ 42 ಸಾವಿರ, ಹಿಂದಿ ಭಾಗದಲ್ಲಿ 18 ಸಾವಿರ ಟಿಕೆಟ್ ಬುಕ್ ಆಗಿದೆ.

ಅಡ್ವಾನ್ಸ್ ಟಿಕೆಟ್ ಬುಕಿಂಗ್​ನಲ್ಲಿ ‘ಡಂಕಿ’ ಚಿತ್ರವನ್ನು ಹಿಂದಿಕ್ಕಿದ ‘ಸಲಾರ್’; ಎರಡನೇ ಟ್ರೇಲರ್​ಗೆ ಕೌಂಟ್​ಡೌನ್  
ಪ್ರಭಾಸ್-ಶಾರುಖ್
Follow us on

ಈ ಬಾರಿಯ ಕ್ರಿಸ್​​ಮಸ್ ಸಂದರ್ಭದಲ್ಲಿ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕ್ಲ್ಯಾಶ್ ಏರ್ಪಡುತ್ತಿದೆ. ಶಾರುಖ್ ಖಾನ್ ನಟನೆಯ ‘ಡಂಕಿ’ (ಡಿಸೆಂಬರ್ 21) ಹಾಗೂ ಪ್ರಭಾಸ್ (Prabhas) ನಟನೆಯ ‘ಸಲಾರ್ (ಡಿಸೆಂಬರ್ 22) ಒಂದು ದಿನದ ಅಂತರದಲ್ಲಿ ರಿಲೀಸ್ ಆಗುತ್ತಿದೆ. ಈ ಸಿನಿಮಾಗಳು ಮೊದಲು ದಿನ ಎಷ್ಟು ಕೋಟಿ ರೂಪಾಯಿ ಗಳಿಕೆ ಮಾಡಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಈಗ ಅಡ್ವಾನ್ಸ್ ಬುಕಿಂಗ್ ಲೆಕ್ಕ ಸಿಕ್ಕಿದ್ದು, ‘ಡಂಕಿ’ ಚಿತ್ರವನ್ನು ‘ಸಲಾರ್’ ಹಿಂದಿಕ್ಕಿದೆ. ‘ಸಲಾರ್’ ಮಾಸ್ ಆಗಿರುವುದರಿಂದ ಜನರು ಈ ಚಿತ್ರದತ್ತ ಹೆಚ್ಚು ವಾಲುತ್ತಿದ್ದಾರೆ.

‘ಸಲಾರ್’ ಸಿನಿಮಾಗೆ ಈವರೆಗೆ 1,53, 705 ಟಿಕೆಗಟ್​ಗಳು ಮಾರಾಟ ಆಗಿವೆ. ತೆಲುಗು ಮಾತನಾಡುವ ಭಾಗದಲ್ಲಿ 84 ಸಾವಿರ, ಮಲಯಾಳಂ ಭಾಗದಲ್ಲಿ 42 ಸಾವಿರ, ಹಿಂದಿ ಭಾಗದಲ್ಲಿ 18 ಸಾವಿರ ಟಿಕೆಟ್ ಬುಕ್ ಆಗಿದೆ. ಕನ್ನಡ, ತಮಿಳು ಭಾಗದ ಲೆಕ್ಕಾಚಾರ ಇನ್ನಷ್ಟೇ ಸಿಗಬೇಕಿದೆ. ಈ ಚಿತ್ರ ಮೊದಲ ದಿನ ಎಷ್ಟು ಕೋಟಿ ರೂಪಾಯಿ ಗಳಿಕೆ ಮಾಡಬಹುದು ಎನ್ನುವ ಕುತೂಹಲ ಮೂಡಿದೆ.

‘ಡಂಕಿ’ ಚಿತ್ರದ ಬುಕಿಂಗ್ ಕೂಡ ಜೋರಾಗಿದೆ. ಸೋಲಿಲ್ಲದ ಸರದಾರ ಎನ್ನುವ ಖ್ಯಾತಿ ಪಡೆದಿರುವ ರಾಜ್​ಕುಮಾರ್ ಹಿರಾನಿ ಅವರು ‘ಡಂಕಿ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಶಾರುಖ್ ಖಾನ್, ತಾಪ್ಸಿ ಪನ್ನು, ವಿಕ್ಕಿ ಕೌಶಲ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ 1,44, 830 ಟಿಕೆಟ್​ಗಳು ಮಾರಾಟ ಆಗಿವೆ. ವಿದೇಶದಲ್ಲೂ ಈ ಚಿತ್ರಕ್ಕೆ ಅಬ್ಬರದ ಬುಕಿಂಗ್ ಆಗುತ್ತಿದೆ.

ಇದನ್ನೂ ಓದಿ: ‘ಡಂಕಿ’ ಕ್ರೇಜ್: ಶಾರುಖ್ ಖಾನ್ ಸಿನಿಮಾ ನೋಡಲು ವಿದೇಶದಿಂದ ಬರುತ್ತಿದ್ದಾರೆ ಅಭಿಮಾನಿಗಳು

ಶಾರುಖ್ ಖಾನ್ ಅವರು ಇತ್ತೀಚೆಗೆ ‘ಡಂಕಿ’ ಸಿನಿಮಾ ಪ್ರಮೋಷನ್​ಗೆ ದುಬೈಗೆ ತೆರಳಿದ್ದರು. ಅಲ್ಲಿ ಫ್ಯಾನ್ಸ್​ನ ಭೇಟಿ ಮಾಡಿದ್ದಾರೆ. ಶಾರುಖ್​ಗೆ ದುಬೈನಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ‘ಸಲಾರ್’ ತಂಡದವರು ಕೂಡ ಸ್ಪರ್ಧೆಗೆ ಇಳಿದಿದ್ದಾರೆ. ಅವರು ಎರಡನೇ ಟ್ರೇಲರ್ ರಿಲೀಸ್ ಮಾಡಲು ರೆಡಿ ಆಗಿದ್ದಾರೆ. ಈ ಟ್ರೇಲರ್ ನೋಡಲು ಫ್ಯಾನ್ಸ್ ಕಾದಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಟ್ರೇಲರ್ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ