‘ಸಲ್ಮಾನ್ ಖಾನ್, ಶಾರುಖ್ ಮಗ ಡ್ರಗ್ಸ್ ತೆಗೆದುಕೊಳ್ತಾರೆ’; ನೇರವಾಗಿ ಆರೋಪ ಮಾಡಿದ ಬಾಬಾ ರಾಮ್​ದೇವ್

| Updated By: ರಾಜೇಶ್ ದುಗ್ಗುಮನೆ

Updated on: Oct 17, 2022 | 2:31 PM

ಬಾ ರಾಮ್​ದೇವ್ ಅವರು ಮಾಡಿದ ಆರೋಪದಿಂದ ಮತ್ತೆ ಡ್ರಗ್ಸ್ ವಿಚಾರ ಚರ್ಚೆಗೆ ಬಂದಿದೆ. ಇಷ್ಟು ಪ್ರಭಾವಿ ವ್ಯಕ್ತಿ ಈ ರೀತಿ ಆರೋಪ ಮಾಡಿರುವುದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

‘ಸಲ್ಮಾನ್ ಖಾನ್, ಶಾರುಖ್ ಮಗ ಡ್ರಗ್ಸ್ ತೆಗೆದುಕೊಳ್ತಾರೆ’; ನೇರವಾಗಿ ಆರೋಪ ಮಾಡಿದ ಬಾಬಾ ರಾಮ್​ದೇವ್
ಆರ್ಯನ್​-ರಾಮ್​​ದೇವ್​-ಸಲ್ಮಾನ್
Follow us on

ಚಿತ್ರರಂಗದಲ್ಲಿ ಡ್ರಗ್ಸ್ ವಿಚಾರ ಆಗಾಗ ಚರ್ಚೆಗೆ ಬರುತ್ತಲೇ ಇದೆ. ಅನೇಕರು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ್ದಾರೆ, ಇನ್ನೂ ಕೆಲವರ ಹೆಸರು ಡ್ರಗ್ಸ್ ಪ್ರಕರಣದಲ್ಲಿ ತಳುಕು ಹಾಕಿಕೊಂಡಿದೆ. ಖ್ಯಾತ ಬಾಲಿವುಡ್ (Bollywood News)​ ಸ್ಟಾರ್ ನಟರು ಹಾಗೂ ಅವರ ಮಕ್ಕಳ ಹೆಸರಿಗೂ ಮಾದಕ ದ್ರವ್ಯ ಪ್ರಕರಣಕ್ಕೂ ಸಂಬಂಧ ಕಲ್ಪಿಸಲಾಗಿದೆ. ಸಿನಿಮಾ ರಂಗದ ಅನೇಕರು ಈ ಬಗ್ಗೆ ವಿಚಾರಣೆ ಎದುರಿಸಿದ್ದಾರೆ. ಈಗ ಯೋಗ ಗುರು ಬಾಬಾ ರಾಮ್​​ದೇವ್ (Baba Ramdev) ಅವರು ಈ ಪ್ರಕರಣದಲ್ಲಿ ಹಲವು ನೇರ ಆರೋಪಗಳನ್ನು ಮಾಡಿದ್ದಾರೆ. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟು ಹಾಕಿದೆ.

ಬಾಬಾ ರಾಮ್​ದೇವ್ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅವರು ಯೋಗ ಗುರು ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ. ಅವರಿಗೆ ದೊಡ್ಡ ಸಂಖ್ಯೆಯಲ್ಲಿ ಹಿಂಬಾಲಕರಿದ್ದಾರೆ. ಈಗ ಬಾಬಾ ರಾಮ್​ದೇವ್ ಅವರು ಮಾಡಿದ ಆರೋಪದಿಂದ ಮತ್ತೆ ಡ್ರಗ್ಸ್ ವಿಚಾರ ಚರ್ಚೆಗೆ ಬಂದಿದೆ. ಇಷ್ಟು ಪ್ರಭಾವಿ ವ್ಯಕ್ತಿ ಈ ರೀತಿ ಆರೋಪ ಮಾಡಿರುವುದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಬಾಲಿವುಡ್​ನಲ್ಲಿ ಯಾರು ಯಾರು ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂಬುದನ್ನು ರಾಮ್​ದೇವ್ ರಿವೀಲ್ ಮಾಡಿದ್ದಾರೆ. ‘ಸಲ್ಮಾನ್ ಖಾನ್ ಡ್ರಗ್ಸ್ ತೆಗೆದುಕೊಳ್ಳುತ್ತಾರೆ. ಆಮಿರ್ ಖಾನ್ ಬಗ್ಗೆ ನನಗೆ ಗೊತ್ತಿಲ್ಲ. ಶಾರುಖ್ ಖಾನ್ ಮಗ ಡ್ರಗ್ಸ್ ತೆಗೆದುಕೊಳ್ಳುವಾಗ ಸಿಕ್ಕಿ ಬಿದ್ದು ಜೈಲು ಸೇರಿದ. ನಟಿಯರ ವಿಚಾರಕ್ಕೆ ಬರೋದಾದರೆ, ಯಾರ್ಯಾರು ಮಾದಕ ದ್ರವ್ಯ ತೆಗೆದುಕೊಳ್ಳುತ್ತಾರೆ ಅನ್ನೋದು ದೇವರಿಗೆ ಗೊತ್ತು’ ಎಂದು ಹೇಳಿದ್ದಾರೆ ಅವರು.

ರಾಮ್​ದೇವ್ ಆರೋಪ ಇಷ್ಟಕ್ಕೆ ಮುಗಿದಿಲ್ಲ. ‘ಸಿನಿಮಾ ರಂಗದಲ್ಲಿ ಡ್ರಗ್ಸ್ ಇದೆ. ರಾಜಕೀಯದಲ್ಲೂ ಇದೆ. ಚುನಾವಣೆ ಸಂದರ್ಭದಲ್ಲಿ ಮದ್ಯ ಪೂರೈಕೆ ಆಗುತ್ತದೆ. ನಾವು ಮಾದಕ ದ್ರವ್ಯ ಮುಕ್ತ ಭಾರತವನ್ನು ಸೃಷ್ಟಿ ಮಾಡಲು ಕ್ರಾಂತಿ ಹುಟ್ಟು ಹಾಕಬೇಕು. ಇದಕ್ಕಾಗಿ ನಾವು ಆಂದೋಲನ ಆರಂಭಿಸುತ್ತಿದ್ದೇವೆ’ ಎಂದಿದ್ದಾರೆ ರಾಮ್​ದೇವ್​.

ಸದ್ಯ ರಾಮ್​ದೇವ್ ಹೇಳಿಕೆಗೆ ನಾನಾ ರೀತಿಯಲ್ಲಿ ಕಮೆಂಟ್​ಗಳು ಬರುತ್ತಿವೆ. ‘ರಾಮ್​ದೇವ್​ ಅವರು ಸತ್ಯವನ್ನು ಧೈರ್ಯದಿಂದ ಹೇಳಿದ್ದಾರೆ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಅವರ ಹೇಳಿಕೆಯನ್ನು ವಿರೋಧಿಸಿದ್ದಾರೆ. ‘ಸಾಕ್ಷ್ಯ ಇಲ್ಲದೆ ಈ ರೀತಿ ಹೇಳಿಕೆ ನೀಡೋದು ಎಷ್ಟು ಸರಿ’ ಎಂದು ಪ್ರಶ್ನೆ ಮಾಡಿದ್ದಾರೆ.

Published On - 2:29 pm, Mon, 17 October 22