ಯೂಲಿಯಾ ವಂಟೂರ್ ಜತೆ ಸಲ್ಲು ಡೇಟಿಂಗ್ ಮಾಡ್ತಿರೋದು ಖಚಿತ? ಇಲ್ಲಿದೆ ವಿಡಿಯೋ ಸಾಕ್ಷಿ

ಯೂಲಿಯಾ ಅವರು ಸಲ್ಲು ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಸಲ್ಮಾನ್ ಹಾಗೂ ಯೂಲಿಯಾ ಅನೇಕ ಕಡೆಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ.

ಯೂಲಿಯಾ ವಂಟೂರ್ ಜತೆ ಸಲ್ಲು ಡೇಟಿಂಗ್ ಮಾಡ್ತಿರೋದು ಖಚಿತ? ಇಲ್ಲಿದೆ ವಿಡಿಯೋ ಸಾಕ್ಷಿ
ಯೂಲಿಯಾ ಬರ್ತ್​ಡೇ ಆಚರಿಸಿದ ಸಲ್ಮಾನ್ ಖಾನ್
Updated By: ರಾಜೇಶ್ ದುಗ್ಗುಮನೆ

Updated on: Jul 25, 2022 | 2:44 PM

ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರು ರೊಮೇನಿಯನ್ ಗಾಯಕಿ ಯೂಲಿಯಾ ವಂಟೂರ್ (Iulia Vantur) ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಈ ಮೊದಲಿನಿಂದಲೂ ಹರಿದಾಡುತ್ತಿದೆ. ಆದರೆ, ಈ ವಿಚಾರದಲ್ಲಿ ಸಲ್ಮಾನ್ ಖಾನ್ ಅವರಾಗಲಿ, ಯೂಲಿಯಾ ಅವರಾಗಲಿ ಮೌನ ಮುರಿದಿಲ್ಲ. ಈಗ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಸಲ್ಮಾನ್ ಖಾನ್ ಹಾಗೂ ಯೂಲಿಯಾ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಡೇಟಿಂಗ್ ನಡೆಸುತ್ತಿರುವುದು ಪಕ್ಕಾ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಯೂಲಿಯಾ ಅವರು ಸಲ್ಲು ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಸಲ್ಮಾನ್ ಹಾಗೂ ಯೂಲಿಯಾ ಅನೇಕ ಕಡೆಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಭಾನುವಾರ (ಜುಲೈ 24) ಸಲ್ಮಾನ್ ಖಾನ್ ಅವರು ಯೂಲಿಯಾ ಬರ್ತ್​ಡೇ ಸೆಲೆಬ್ರೇಷನ್ ಅನ್ನು ಜೋರಾಗಿ ಮಾಡಿದ್ದಾರೆ. ಈ ವೇಳೆ ಕುಟುಂಬದವರು ಕೂಡ ಹಾಜರಿ ಹಾಕಿದ್ದರು. ಸೋಹೆಲ್ ಖಾನ್, ಆಯುಷ್ ಶರ್ಮಾ, ನಿರ್ದೇಶಕ ಸಾಜಿದ್ ಅಲಿ ಮೊದಲಾದವರು ಕಾಣಿಸಿಕೊಂಡಿದ್ದಾರೆ.

ಈ ವಿಡಿಯೋವನ್ನು ಯೂಲಿಯಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇಷ್ಟು ವಿಶೇಷವಾಗಿ ಬರ್ತ್​ಡೇ ಸೆಲೆಬ್ರೇಷನ್ ಮಾಡಿದ್ದಕ್ಕೆ ಅವರು ಸಂತಸ ಹೊರಹಾಕಿದ್ದಾರೆ.  ಮೂಲಗಳ ಪ್ರಕಾರ ಸಲ್ಮಾನ್ ಖಾನ್ ಹಾಗೂ ಯೂಲಿಯಾ ಅವರು ಹಲವು ಕಾಲದಿಂದ ಡೇಟಿಂಗ್ ಮಾಡುತ್ತಿದ್ದಾರೆ. ಇವರಿಬ್ಬರ ಮದುವೆ ನೆರವೇರಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ. ಗಾಯಕ ಗುರು ರಂಧವಾ ಜೊತೆ ಸೇರಿ ಅವರು ‘ಮೈ ಚಲಾ’ ಹಾಡಿಗೆ ಧ್ವನಿ ನೀಡಿದ್ದಾರೆ ಯೂಲಿಯಾ. ಈ ಹಾಡಿನಲ್ಲಿ ಸಲ್ಮಾನ್​ ಖಾನ್​ ಮತ್ತು ಪ್ರಗ್ಯಾ ಜೈಸ್ವಾಲ್​ ಅವರು ನಟಿಸಿದ್ದಾರೆ.

ಇದನ್ನೂ ಓದಿ
Salman Khan: ಸಲ್ಮಾನ್ ಖಾನ್ ಚಿತ್ರದಲ್ಲಿ 10 ನಾಯಕಿಯರು..!
KGF: ಕಬಾಲಿ ನಿರ್ದೇಶಕನ ಮಾಸ್ಟರ್​ ಪ್ಲ್ಯಾನ್​: ಬರಲಿದೆ ಮತ್ತೊಂದು ಕೆಜಿಎಫ್..!
Yash Next Movie: ಯಶ್ ಮುಂದಿನ ಚಿತ್ರಕ್ಕೆ ಸೌತ್ ಸುಂದರಿ ನಾಯಕಿ..?
Kabza: ಒಂದಲ್ಲ, ಎರಡಲ್ಲ, ಮೂರಲ್ಲ…ವಿದೇಶಿ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ ಕಬ್ಜ

ಇದನ್ನೂ ಓದಿ: ಸಲ್ಮಾನ್ ಖಾನ್ ಹತ್ಯೆಗೆ ಖರೀದಿ ಆಗಿತ್ತು 4 ಲಕ್ಷ ರೂಪಾಯಿ ಗನ್; ಹೊರಬಿತ್ತು ಶಾಕಿಂಗ್ ನ್ಯೂಸ್

ಸಲ್ಮಾನ್ ಖಾನ್ ಅವರು ‘ಕಭಿ ಈದ್ ಕಭಿ ದಿವಾಲಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾ ಈ ವರ್ಷ ಡಿಸೆಂಬರ್ 30ರಂದು ತೆರೆಗೆ ಬರುತ್ತಿದೆ. ಪೂಜಾ ಹೆಗ್ಡೆ ಈ ಚಿತ್ರಕ್ಕೆ ನಾಯಕಿ. ಇದಲ್ಲದೆ, ‘ಟೈಗರ್ 3’ ಚಿತ್ರದ ಕೆಲಸದಲ್ಲೂ ಸಲ್ಮಾನ್ ಖಾನ್ ತೊಡಗಿಕೊಂಡಿದ್ದಾರೆ. ಈ ಚಿತ್ರದಲ್ಲಿ ಕತ್ರಿನಾ ಕೈಫ್ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆಯೂ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ.