Tiger 3: ಮುಗಿಯಿತು ‘ಟೈಗರ್​ 3’ ಚಿತ್ರದ ಶೂಟಿಂಗ್​; ದೀಪಾವಳಿ ಹಬ್ಬದ ಮೇಲೆ ಕಣ್ಣಿಟ್ಟ ಸಲ್ಮಾನ್​ ಖಾನ್​

|

Updated on: May 26, 2023 | 5:59 PM

Salman Khan: ‘ಟೈಗರ್​’ ಸರಣಿಯ ಚಿತ್ರಗಳ ಬಗ್ಗೆ ಅಭಿಮಾನಿಗಳಿಗೆ ಸಖತ್​ ಕ್ರೇಜ್​ ಇದೆ. ಹಾಗಾಗಿ ‘ಟೈಗರ್​ 3’ ಸಿನಿಮಾ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿದೆ.

Tiger 3: ಮುಗಿಯಿತು ‘ಟೈಗರ್​ 3’ ಚಿತ್ರದ ಶೂಟಿಂಗ್​; ದೀಪಾವಳಿ ಹಬ್ಬದ ಮೇಲೆ ಕಣ್ಣಿಟ್ಟ ಸಲ್ಮಾನ್​ ಖಾನ್​
ಸಲ್ಮಾನ್​ ಖಾನ್​
Follow us on

ಸೋಲು-ಗೆಲುವು ಏನೇ ಇದ್ದರೂ ಸಲ್ಮಾನ್​ ಖಾನ್​ (Salman Khan) ಅವರಿಗೆ ಇರುವ ಡಿಮ್ಯಾಂಡ್​ ಕಡಿಮೆ ಆಗಿಲ್ಲ. ಅವರೀಗ ‘ಟೈಗರ್​ 3’ (Tiger 3) ಚಿತ್ರದ ಮೇಲೆ ಗಮನ ಹರಿಸಿದ್ದಾರೆ. ಅಭಿಮಾನಿಗಳ ಪಾಲಿನ ಖುಷಿಯ ವಿಚಾರ ಏನೆಂದರೆ ಈ ಸಿನಿಮಾದ ಶೂಟಿಂಗ್​ ಮುಕ್ತಾಯ ಆಗಿದೆ. ಈ ವಿಷಯವನ್ನು ಸ್ವತಃ ಸಲ್ಮಾನ್​ ಖಾನ್​ ಖಚಿತ ಪಡಿಸಿದ್ದಾರೆ. ಮನೀಶ್​ ಶರ್ಮಾ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಯಶ್​ ರಾಜ್​ ಫಿಲ್ಮ್ಸ್​ ಮೂಲಕ ನಿರ್ಮಾಣ ಆಗುತ್ತಿದೆ. ಸಲ್ಮಾನ್​ ಖಾನ್​ ಜೊತೆ ಕತ್ರಿನಾ ಕೈಫ್​, ಇಮ್ರಾನ್ ಹಷ್ಮಿ ಕೂಡ ಪಾತ್ರವರ್ಗದಲ್ಲಿದ್ದಾರೆ. ಇತ್ತೀಚೆಗೆ ಐಫಾ ಅವಾರ್ಡ್ಸ್ (IIFA Awards)​ ಸಲುವಾಗಿ ಸಲ್ಮಾನ್​ ಖಾನ್​ ಅವರು ಅಬುಧಾಬಿಗೆ ತೆರಳಿದ್ದರು. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡುವಾಗ ಅವರು ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ‘ನಿನ್ನೆ ರಾತ್ರಿ ಟೈಗರ್​ 3 ಚಿತ್ರದ ಶೂಟಿಂಗ್​ನಲ್ಲಿ ನಾನು ಭಾಗಿಯಾಗಿದ್ದೆ. ಅಂತೂ ಅದರ ಚಿತ್ರೀಕರಣ ಮುಗಿಸಿದ್ದೇನೆ. ಅದು ತುಂಬ ಕಷ್ಟಕರವಾಗಿತ್ತು. ಆದರೂ ಚೆನ್ನಾಗಿತ್ತು. ದೀಪಾವಳಿ ಹಬ್ಬಕ್ಕೆ ನೀವು ಈ ಸಿನಿಮಾ ನೋಡುತ್ತೀರಿ’ ಎಂದು ಸಲ್ಮಾನ್​ ಖಾನ್ ಹೇಳಿದ್ದಾರೆ.

ಹಬ್ಬ-ಹರಿದಿನಗಳಲ್ಲಿ ಸಿನಿಮಾ ರಿಲೀಸ್​ ಆದರೆ ಉತ್ತಮ ಕಮಾಯಿ ಆಗುತ್ತದೆ. ಹಾಗಾಗಿ 2023ರ ದೀಪಾವಳಿ ಹಬ್ಬದ ಮೇಲೆ ಸಲ್ಮಾನ್​ ಖಾನ್​ ಕಣ್ಣಿಟ್ಟಿದ್ದಾರೆ. ‘ಟೈಗರ್​’ ಸರಣಿಯ ಚಿತ್ರಗಳ ಬಗ್ಗೆ ಅಭಿಮಾನಿಗಳಿಗೆ ಸಖತ್​ ಕ್ರೇಜ್​ ಇದೆ. ಹಾಗಾಗಿ ‘ಟೈಗರ್​ 3’ ಸಿನಿಮಾ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿದೆ. ಇದರಲ್ಲಿ ಭರ್ಜರಿ ಆ್ಯಕ್ಷನ್​ ದೃಶ್ಯಗಳು ಇರಲಿವೆ ಎಂದು ನಿರೀಕ್ಷಿಸಲಾಗಿದೆ. ಇತ್ತೀಚೆಗೆ ತೆರೆಕಂಡ ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಸಿನಿಮಾ ಹೇಳಿಕೊಳ್ಳುವಷ್ಟು ಕಲೆಕ್ಷನ್​ ಮಾಡಲಿಲ್ಲ. ಹಾಗಾಗಿ ಮುಂದಿನ ಸಿನಿಮಾಗಳ ಮೂಲಕ ಗೆಲ್ಲಲ್ಲೇ ಬೇಕಾದ ಅನಿವಾರ್ಯತೆ ಸಲ್ಮಾನ್​ ಖಾನ್ ಅವರಿಗೆ ಇದೆ.

ಇದನ್ನೂ ಓದಿ: Salman Khan: 100 ಕೋಟಿ ರೂಪಾಯಿ ಕ್ಲಬ್​ ಸೇರಿವೆ ಸಲ್ಮಾನ್​ ಖಾನ್​ ನಟನೆಯ 16 ಚಿತ್ರಗಳು; ಇಲ್ಲಿದೆ ಪಟ್ಟಿ

ಸಲ್ಮಾನ್​ ಖಾನ್​ ಅವರು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರಿಗೆ ಅದೃಷ್ಟ ಕೈ ಕೊಟ್ಟಿದೆ. ಗ್ಯಾಂಗ್​​ಸ್ಟರ್​ಗಳಿಂದ ಅವರಿಗೆ ಬೆದರಿಕೆ ಬಂದಿರುವುದು ಗೊತ್ತೇ ಇದೆ. ಹಾಗಂತ ಸಲ್ಮಾನ್​ ಖಾನ್​ ಅವರ ಗತ್ತು, ಗಾಂಭೀರ್ಯಕ್ಕೆ ಏನೂ ಕೊರತೆ ಆಗಿಲ್ಲ. ಎಂದಿನಂತೆ ಅವರು ದಿಲ್ದಾರ್​ ಆಗಿ ಓಡಾಡಿಕೊಂಡಿದ್ದಾರೆ. ಕೆಲವೇ ದಿನಗಳ ಹಿಂದೆ ಅವರು ಕೊಲ್ಕತ್ತಾದಲ್ಲಿ ‘ದಬಂಗ್​ ಟೂರ್​’ ಕಾರ್ಯಕ್ರಮ ನೀಡಿದ್ದರು. ಈಗ ಐಫಾ ಅವಾರ್ಡ್ಸ್​ ಕಾರ್ಯಕ್ರಮದ ಸಲುವಾಗಿ ವಿದೇಶಕ್ಕೆ ಹಾರಿದ್ದಾರೆ.

ಇದನ್ನೂ ಓದಿ: Salman Khan: ‘ಮಹಿಳೆಯರು ದೇಹ ಮುಚ್ಚಿಕೊಂಡಷ್ಟೂ ಉತ್ತಮ’: ಚರ್ಚೆ ಹುಟ್ಟುಹಾಕಿದ ಸಲ್ಮಾನ್​ ಖಾನ್​ ಹೇಳಿಕೆ

ಸಿನಿಮಾ ಮಾತ್ರವಲ್ಲದೇ ಕಿರುತೆರೆಯಲ್ಲೂ ಸಲ್ಮಾನ್​ ಖಾನ್​ ಅವರಿಗೆ ಬೇಡಿಕೆ ಇದೆ. ಅವರು ಬಿಗ್​ ಬಾಸ್​ ಕಾರ್ಯಕ್ರಮವನ್ನು ನಿರೂಪಿಸುವ ಮೂಲಕ ಜನಮನ ಗೆದ್ದಿದ್ದಾರೆ. ಈಗ ಒಟಿಟಿಗೂ ಅವರು ಕಾಲಿಡುತ್ತಿದ್ದಾರೆ. ‘ಬಿಗ್​ ಬಾಸ್​ ಒಟಿಟಿ ಸೀಸನ್​ 2’ ಶೀಘ್ರದಲ್ಲೇ ಆರಂಭ ಆಗಲಿದೆ. ಅದರ ನಿರೂಪಣೆ ಮಾಡಲು ಸಲ್ಮಾನ್​ ಖಾನ್​ ಸಜ್ಜಾಗಿದ್ದಾರೆ. ಮೊದಲ ಸೀಸನ್​ ಅನ್ನು ಕರಣ್​ ಜೋಹರ್​ ನಡೆಸಿಕೊಟ್ಟಿದ್ದರು. ಈಗ ಅವರ ಜಾಗಕ್ಕೆ ಸಲ್ಮಾನ್​ ಖಾನ್​ ಆಗಮಿಸುತ್ತಿದ್ದಾರೆ. ಅದನ್ನು ತಿಳಿಸಲು ಪ್ರೋಮೋ ಬಿಡುಗಡೆ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.