Salman Khan: ‘ಮಹಿಳೆಯರು ದೇಹ ಮುಚ್ಚಿಕೊಂಡಷ್ಟೂ ಉತ್ತಮ’: ಚರ್ಚೆ ಹುಟ್ಟುಹಾಕಿದ ಸಲ್ಮಾನ್ ಖಾನ್ ಹೇಳಿಕೆ
Aap ki Adalat: ‘ಒಂದು ಡೀಸೆಂಟ್ ಸಿನಿಮಾ ಮಾಡಿದಾಗ ಇಡೀ ಕುಟುಂಬದವರು ಬಂದು ನೋಡುತ್ತಾರೆ. ಅದರಲ್ಲಿ ಯಾವುದೇ ದ್ವಂದ್ವ ನೀತಿ ಇಲ್ಲ’ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.
ಬೇರೆ ನಟರಿಗಿಂತ ಸಲ್ಮಾನ್ ಖಾನ್ (Salman Khan) ಭಿನ್ನ. ತಮ್ಮ ಸಿನಿಮಾಗಳ ಶೂಟಿಂಗ್ ಸೆಟ್ನಲ್ಲಿ ಅವರು ಒಂದಷ್ಟು ನಿಯಮಗಳನ್ನು ವಿಧಿಸುತ್ತಾರೆ ಎಂಬ ಮಾತಿದೆ. ಅದರಲ್ಲೂ ಮಹಿಳೆಯರ ಬಟ್ಟೆ ವಿಚಾರದಲ್ಲಿ ಅವರು ಕೊಂಚ ಕಟ್ಟುನಿಟ್ಟು ಎಂಬ ಸುದ್ದಿ ಕೂಡ ಹರಡಿದೆ. ಕೆಲವೇ ದಿನಗಳ ಹಿಂದೆ ನಟಿ ಪಲಕ್ ತಿವಾರಿ (Palak Tiwari) ಅವರು ಈ ಕುರಿತು ನೀಡಿದ ಹೇಳಿಕೆ ವೈರಲ್ ಆಗಿತ್ತು. ಆದರೆ ನಂತರದ ದಿನಗಳಲ್ಲಿ ಅವರು ತಮ್ಮ ಹೇಳಿಕೆಗೆ ಬೇರೆ ರೀತಿಯ ಸಮರ್ಥನೆ ನೀಡಲು ಪ್ರಯತ್ನಿಸಿದ್ದರು. ಆದರೆ ಈಗ ಸ್ವತಃ ಸಲ್ಮಾನ್ ಖಾನ್ ಅವರು ಈ ವಿಚಾರದ ಬಗ್ಗೆ ಮೌನ ಮುರಿದಿದ್ದಾರೆ. ಮಹಿಳೆಯರ ಬಟ್ಟೆ (Dress Code) ಬಗ್ಗೆ ತಮಗೆ ಇರುವ ಅಭಿಪ್ರಾಯ ಏನು ಎಂಬುದನ್ನು ಅವರು ಬಹಿರಂಗವಾಗಿ ಹೇಳಿದ್ದಾರೆ. ಅವರ ಈ ಹೇಳಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.
ಇತ್ತೀಚೆಗೆ ಸಲ್ಮಾನ್ ಖಾನ್ ಅವರು ‘ಆಪ್ ಕಿ ಅದಾಲತ್’ ಶೋನಲ್ಲಿ ಭಾಗವಹಿಸಿದ್ದರು. ಆಗ ಅವರಿಗೆ ಈ ಬಗ್ಗೆ ಪ್ರಶ್ನೆ ಎದುರಾಯಿತು. ಅದಕ್ಕೆ ಅವರು ನೇರವಾಗಿ ಉತ್ತರ ನೀಡಿದ್ದಾರೆ. ‘ಒಂದು ಡೀಸೆಂಟ್ ಸಿನಿಮಾ ಮಾಡಿದಾಗ ಇಡೀ ಕುಟುಂಬದವರು ಬಂದು ನೋಡುತ್ತಾರೆ. ಅದರಲ್ಲಿ ಯಾವುದೇ ದ್ವಂದ್ವ ನೀತಿ ಇಲ್ಲ. ಮಹಿಳೆಯ ದೇಹ ಬಹಳ ಮೌಲ್ಯಯುತವಾದ್ದದ್ದು ಅಂತ ನಾನು ಭಾವಿಸಿದ್ದೇನೆ. ಹಾಗಾಗಿ ಹೆಚ್ಚು ದೇಹ ಮುಚ್ಚಿಕೊಂಡಷ್ಟೂ ಒಳ್ಳೆಯದು ಎಂದು ನನಗೆ ಅನಿಸುತ್ತದೆ’ ಎಂದಿದ್ದಾರೆ ಸಲ್ಮಾನ್ ಖಾನ್.
Salman Khan: ಒಂದು ದಿನದ ಮಟ್ಟಿಗೆ ತಮ್ಮ ಪ್ರೀತಿಯ ವಸ್ತುವನ್ನು ಆಮಿರ್ ಖಾನ್ಗೆ ನೀಡಿದ ಸಲ್ಮಾನ್ ಖಾನ್
‘ಸಮಸ್ಯೆ ಇರುವುದು ಹುಡುಗಿಯರಲ್ಲಿ ಅಲ್ಲ. ಸಮಸ್ಯೆ ಇರುವುದು ಹುಡುಗರಲ್ಲಿ. ನಿಮ್ಮ ತಾಯಿ, ತಂಗಿ, ಪತ್ನಿಯನ್ನು ಹುಡುಗರು ಆ ದೃಷ್ಟಿಯಿಂದ ನೋಡುವುದು ನನಗೆ ಇಷ್ಟ ಆಗುವುದಿಲ್ಲ’ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ಸಲ್ಲು ನಟನೆಯ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯಿತು. ಆ ಸಿನಿಮಾದಲ್ಲಿ ನಟಿಸಿದ ಪಲಕ್ ತಿವಾರಿ ಅವರು ಸಂದರ್ಶನವೊಂದರಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಬಳಿಕ ಇಷ್ಟೆಲ್ಲ ಚರ್ಚೆ ಆರಂಭ ಆಗಿತ್ತು.
ಬಾಲಿವುಡ್ನಲ್ಲಿ ಸಲ್ಮಾನ್ ಖಾನ್ ಅವರಿಗೆ ಸಖತ್ ಬೇಡಿಕೆ ಇದೆ. ‘ಟೈಗರ್ 3’ ಸಿನಿಮಾದ ಕೆಲಸಗಳಲ್ಲಿ ಅವರು ನಿರತರಾಗಿದ್ದಾರೆ. ಈ ನಡುವೆ ಅವರಿಗೆ ಬೆದರಿಕೆ ಕರೆಗಳು ಕೂಡ ಹೆಚ್ಚಾಗಿವೆ. ಹಾಗಾಗಿ ತಮ್ಮ ಸುರಕ್ಷತೆ ಬಗ್ಗೆ ಅವರು ಗಮನ ಹರಿಸಿದ್ದಾರೆ. ಇತ್ತೀಚೆಗೆ ಸಲ್ಮಾನ್ ಖಾನ್ ಅವರು ಹೊಸ ಬುಲೆಟ್ ಪ್ರೂಫ್ ಕಾರು ಖರೀದಿಸಿದ ಬಗ್ಗೆ ಸುದ್ದಿ ಆಗಿತ್ತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.