AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ayush Sharma: ಅರ್ಪಿತಾ ಖಾನ್​ ರೀತಿ ಇರುವ ಹುಡುಗಿಯನ್ನು ಸಲ್ಲು ಹೀರೋಯಿನ್​ ಮಾಡಿಕೊಳ್ತಾರಾ? ನೆಟ್ಟಿಗರ ಪ್ರಶ್ನೆ

Arpita Khan: ಆಯುಷ್ ಶರ್ಮಾ ಅವರ ಹೇಳಿಕೆಯಿಂದ ನೆಟ್ಟಿಗರಿಗೆ ಸಮಾಧಾನ ಆಗಿಲ್ಲ. ಅವರು​ ಹೇಳಿದ ಮಾತುಗಳಲ್ಲಿ ಸಾಕಷ್ಟು ತಪ್ಪು ಇದೆ ಎಂಬುದನ್ನು ಜನರು ಪತ್ತೆಹಚ್ಚಿದ್ದಾರೆ.

Ayush Sharma: ಅರ್ಪಿತಾ ಖಾನ್​ ರೀತಿ ಇರುವ ಹುಡುಗಿಯನ್ನು ಸಲ್ಲು ಹೀರೋಯಿನ್​ ಮಾಡಿಕೊಳ್ತಾರಾ? ನೆಟ್ಟಿಗರ ಪ್ರಶ್ನೆ
ಸಲ್ಮಾನ್ ಖಾನ್, ಅರ್ಪಿತಾ ಖಾನ್, ಆಯುಷ್ ಶರ್ಮಾ
ಮದನ್​ ಕುಮಾರ್​
|

Updated on:Apr 25, 2023 | 6:24 PM

Share

ನಟ ಆಯುಷ್​​ ಶರ್ಮಾ (Ayush Sharma) ಅವರಿಗೆ ಬಣ್ಣದ ಲೋಕದಲ್ಲಿ ಇನ್ನೂ ದೊಡ್ಡ ಯಶಸ್ಸು ಸಿಕ್ಕಿಲ್ಲ. ಆದರೆ ಅವರು ಸಲ್ಮಾನ್​ ಖಾನ್​ (Salman Khan) ಸಂಬಂಧಿ ಎಂಬ ಕಾರಣಕ್ಕೆ ಮೀಡಿಯಾ ಅಟೆನ್ಷನ್​ ಸಿಗುತ್ತಿದೆ. ಸಲ್ಲು ಸಹೋದರಿ ಅರ್ಪಿತಾ ಖಾನ್​ ಅವರನ್ನು ಆಯುಷ್​​ ಶರ್ಮಾ ಮದುವೆ ಆಗಿದ್ದಾರೆ. ‘ಲವ್​ ಯಾತ್ರಿ’ ಮತ್ತು ‘ಅಂತಿಮ್​’ ಸಿನಿಮಾದಲ್ಲಿ ನಟಿಸಿರುವ ಆಯುಷ್​​ ಶರ್ಮಾ ಅವರು ಇತ್ತೀಚೆಗೆ ‘ಟೆಡ್​ ಟಾಕ್​’ನಲ್ಲಿ ಹೇಳಿದ ಮಾತುಗಳು ಚರ್ಚೆಗೆ ಕಾರಣ ಆಗಿವೆ. ಅರ್ಪಿತಾ ಖಾನ್ (Arpita Khan)​ ಅವರಿಗೆ ನೆಟ್ಟಿಗರು ಆಗಾಗ ಬಾಡಿ ಶೇಮಿಂಗ್​ ಮಾಡುತ್ತಾರೆ. ಅವರ ಮೈಬಣ್ಣ ಕಪ್ಪಾಗಿದೆ ಮತ್ತು ಅವರು ದಪ್ಪಗಿದ್ದಾರೆ ಎಂಬ ಕಾರಣಕ್ಕೆ ಟ್ರೋಲ್​ ಮಾಡಲಾಗುತ್ತದೆ. ಇದೇ ವಿಚಾರವನ್ನು ಇಟ್ಟುಕೊಂಡು ಆಯುಷ್​​ ಶರ್ಮಾ ಮಾತನಾಡಿದ್ದಾರೆ. ಆದರೆ ಅವರ ಹೇಳಿಕೆಯಿಂದ ನೆಟ್ಟಿಗರಿಗೆ ಸಮಾಧಾನ ಆಗಿಲ್ಲ. ಆಯುಷ್​ ಹೇಳಿದ ಮಾತುಗಳಲ್ಲಿ ಸಾಕಷ್ಟು ತಪ್ಪು ಇದೆ ಎಂಬುದನ್ನು ಜನರು ಪತ್ತೆಹಚ್ಚಿದ್ದಾರೆ.

‘ನನ್ನ ಪತ್ನಿಯ ಮೈಬಣ್ಣದ ಮತ್ತು ದೇಹದ ತೂಕದ ಬಗ್ಗೆ ಆಗಾಗ ಟ್ರೋಲ್​ ಮಾಡಲಾಗುತ್ತದೆ. ಪ್ರತಿ ಬಾರಿ ಅವರ ಹೊಸ ಫೋಟೋ ಬಂದಾಗೆಲ್ಲ ಕಪ್ಪು ಮೈಬಣ್ಣ ಎಂಬುದನ್ನು ಜನರು ನೆನಪಿಸಲು ಬರುತ್ತಾರೆ. ಇಂದು ಸೌಂದರ್ಯ ಎಂಬುದು ಆಂತರಿಕವಾಗಿ ಉಳಿದಿಲ್ಲ. ವ್ಯಕ್ತಿತ್ವದಿಂದ ನೀವು ಎಷ್ಟು ಸುಂದರವಾಗಿದ್ದೀರಿ ಎಂದು ಯಾರೂ ನೋಡುವುದಿಲ್ಲ. ಆದರೆ ಜನರು ನಿಮ್ಮ ಬಹಿರಂಗ ಸೌಂದರ್ಯ ನೋಡಲು ಬಯಸುತ್ತಾರೆ’ ಎಂದು ಆಯುಷ್​ ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ: ಹಸಿಬಿಸಿ ದೃಶ್ಯದಲ್ಲಿ ನಟಿಸುವಾಗ​ ನನ್ನ ಹೆಂಡತಿ ಕಣ್ಣೆದುರು ಬಂದಿದ್ದಳು ಎಂದ ಬಾಲಿವುಡ್​ ನಟ

ಆಯುಷ್​ ಶರ್ಮಾ ಮಾತನಾಡಿರುವ ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅದನ್ನು ಇದನ್ನು ಇಟ್ಟುಕೊಂಡು ನೆಟ್ಟಿಗರು ಬಗೆಬಗೆಯಲ್ಲಿ ಚರ್ಚೆ ಮಾಡುತ್ತಿದ್ದಾರೆ. ‘ಸೌಂದರ್ಯ ಎಂದರೆ ಏನು ಎಂಬುದನ್ನು ಸೆಲೆಬ್ರಿಟಿಗಳೇ ತಿಳಿಸುತ್ತಾರೆ ಮತ್ತು ಜನರು ಅದನ್ನು ಫಾಲೋ ಮಾಡುತ್ತಾರೆ’ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ. ಪತ್ನಿಯ ಪರವಾಗಿ ಭಾಷಣ ಮಾಡಿರುವ ಆಯುಷ್​ ಶರ್ಮಾಗೆ ಜನರು ಒಂದಷ್ಟು ಪ್ರಶ್ನೆಗಳನ್ನು ಎಸೆದಿದ್ದಾರೆ.

ಇದನ್ನೂ ಓದಿ: ತಂಗಿ ಗಂಡನ ಜೊತೆಗೆ ಸಲ್ಮಾನ್​ ಖಾನ್​ ಕಿರಿಕ್​; ಭಾವನ ಸಿನಿಮಾದಿಂದಲೇ ಹೊರನಡೆದ ಆಯುಷ್​ ಶರ್ಮಾ?

‘ಸಲ್ಮಾನ್​ ಖಾನ್​ ಅವರು ಅರ್ಪಿತಾ ಖಾನ್​ ರೀತಿಯ ಯುವತಿಯನ್ನು ತಮ್ಮ ಸಿನಿಮಾದಲ್ಲಿ ನಾಯಕಿಯಾಗಿ ಆಯ್ಕೆ ಮಾಡಿಕೊಂಡರೆ ಆಗ ನಮ್ಮಂಥ ಹುಡುಗಿಯರಿಗೂ ದೊಡ್ಡ ಪರದೆಯಲ್ಲಿ ಅವಕಾಶ ಸಿಗುತ್ತದೆ’ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ. ‘ತಮ್ಮ ಪತ್ನಿ ಸುಂದರವಾಗಿದ್ದಾರೆ ಎಂದು ಸ್ವತಃ ಆಯುಷ್​ ಶರ್ಮಾ ಒಪ್ಪಿಕೊಂಡಿಲ್ಲ. ಅದಕ್ಕಾಗಿಯೇ ಅವರು ಆಂತರಿಕ ಸೌಂದರ್ಯ ಎಂಬ ಪದ ಬಳಸಿದ್ದಾರೆ’ ಎಂದು ಕೂಡ ಕೆಲವರು ಟೀಕೆ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:24 pm, Tue, 25 April 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್