Salman Khan: ‘ಫ್ಯಾಮಿಲಿ ಎಂಟರ್ಟೇನರ್’; ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ನೋಡಿ ವಿಮರ್ಶೆ ತಿಳಿಸಿದ ಫ್ಯಾನ್ಸ್
Kisi Ka Bhai Kisi Ki Jaan Movie Twitter Review: ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಅಭಿಮಾನಿಗಳಿಗೆ ಇಷ್ಟವಾಗಿದೆ. ಸಲ್ಮಾನ್ ಖಾನ್ ನಟನೆಯ ಈ ಚಿತ್ರ ವಿನ್ನರ್ ಎಂದು ಫ್ಯಾನ್ಸ್ ಕರೆದಿದ್ದಾರೆ.
‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ (Kisi Ka Bhai Kisi Ki Jaan) ಇಂದು (ಏಪ್ರಿಲ್ 21) ರಿಲೀಸ್ ಆಗಿದೆ. ಕೊವಿಡ್ ಮತ್ತಿತ್ಯಾದಿ ಕಾರಣದಿಂದ ಸಲ್ಮಾನ್ ಖಾನ್ (Salman Khan) ಸಿನಿಮಾಗಳು ದೊಡ್ಡಮಟ್ಟದಲ್ಲಿ ಥಿಯೇಟರ್ನಲ್ಲಿ ರಿಲೀಸ್ ಆಗಿರಲಿಲ್ಲ. ಈಗ ನಾಲ್ಕು ವರ್ಷಗಳ ಬಳಿಕ ದೊಡ್ಡ ಪರದೆಗೆ ಅವರು ಕಂಬ್ಯಾಕ್ ಮಾಡಿದ್ದಾರೆ. ಈ ಸಿನಿಮಾಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಚಿತ್ರವನ್ನು ಮಾಸ್ ಎಂಟರ್ಟೇನರ್ ಎಂದು ಅಭಿಮಾನಿಗಳು ಕರೆಯುತ್ತಿದ್ದಾರೆ. ಈ ಮೂಲಕ ಸಿನಿಮಾ ಗೆಲ್ಲುವ ಸೂಚನೆ ಸಿಕ್ಕಿದೆ. ಮೊದಲ ದಿನದ ಕಲೆಕ್ಷನ್ ಲೆಕ್ಕಾಚಾರ ಸಿಕ್ಕರೆ ಸಿನಿಮಾದ ಭವಿಷ್ಯದ ಬಗ್ಗೆ ಚಿತ್ರಣ ಸಿಗಲಿದೆ.
ಬಾಲಿವುಡ್ನಲ್ಲಿ ರಿಮೇಕ್ ಚಿತ್ರಗಳು ಸದ್ದು ಮಾಡುತ್ತಿಲ್ಲ. ಈ ವರ್ಷ ರಿಲೀಸ್ ಆದ ಅನೇಕ ರಿಮೇಕ್ ಸಿನಿಮಾಗಳು ಸೋತಿವೆ. ಆದಾಗ್ಯೂ ಸಲ್ಮಾನ್ ಖಾನ್ ಅವರು 2014ರಲ್ಲಿ ರಿಲೀಸ್ ಆದ ತಮಿಳಿನ ‘ವೀರಂ’ ಚಿತ್ರವನ್ನು ರಿಮೇಕ್ ಮಾಡಿದ್ದಾರೆ. ಮೂಲ ಚಿತ್ರದಲ್ಲಿ ಸಾಕಷ್ಟು ಆ್ಯಕ್ಷನ್ ಇತ್ತು. ಈ ಕಾರಣಕ್ಕೆ ಸಲ್ಲು ಇದನ್ನು ರಿಮೇಕ್ ಮಾಡುವ ನಿರ್ಧಾರಕ್ಕೆ ಬಂದರು. ಹೋಂ ಬ್ಯಾನರ್ನಲ್ಲಿ ಅವರು ಚಿತ್ರ ನಿರ್ಮಾಣ ಮಾಡಿದ್ದಾರೆ. ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಅಭಿಮಾನಿಗಳಿಗೆ ಇಷ್ಟವಾಗಿದೆ.
#KBKJReview – SUPERB Family Entertainer #KBKJ is a winner, more than lives up to the expectations, A Must Watch movie, #KisiKaBhaiKisiKiJaan Ticks all the right boxes, #SalmanKhan Outstanding…
Rating: ????1/2#KisiKaBhaiKisiKiJaanReview #KBKJReview pic.twitter.com/0PBEXpmwih
— Vikas (@salmaniac_07) April 21, 2023
ಇದನ್ನೂ ಓದಿ: ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಲಿದೆ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ?
One Word Review: Mazedaaaarrrr ? Full Masala Movie Rating: ⭐️⭐⭐⭐
Emotions, Action, Comedy and Masala!After cameo in #Pathaan, #SalmanKhan? is back with his entertaining style. Must Watch. #Eid2023 Mubarak ? pic.twitter.com/pNDuHKF6gv
— Aakash Shukla (@JournoAakash) April 21, 2023
‘ಕಿಸಿ ಕ ಭಾಯ್ ಕಿಸಿ ಜಾನ್’ ಸಿನಿಮಾ ವಿನ್ನರ್. ನಿರೀಕ್ಷೆಗೂ ಮೀರಿ ಈ ಸಿನಿಮಾ ಇದೆ. ಸಲ್ಮಾನ್ ಖಾನ್ ಅವರದ್ದು ಔಟ್ಸ್ಟ್ಯಾಂಡಿಂಗ್ ಪರ್ಫಾರ್ಮೆನ್ಸ್’ ಎಂದು ಸಲ್ಲು ಅಭಿಮಾನಿಯೋರ್ವ ಬರೆದುಕೊಂಡಿದ್ದಾನೆ. ‘ಸಲ್ಮಾನ್ ಖಾನ್ ಚಿತ್ರ ಎಂಟರ್ಟೇನಿಂಗ್ ಆಗಿದೆ. ಸಾಂಗ್ ಹಾಗೂ ಬಿಜಿಎಂ ಅದ್ಭುತ. ಸಲ್ಮಾನ್ ಖಾನ್ ನಟನೆ ಮೆಚ್ಚುವಂಥದ್ದು. ಛಾಯಾಗ್ರಹಣ, ಡೈಲಾಗ್ ಡೆಲಿವರಿ, ಸ್ಕ್ರೀನ್ಪ್ಲೇ ಎಲ್ಲವೂ ಪರ್ಫೆಕ್ಟ್’ ಆಗಿದೆ ಎಂದು ಕೆಲವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾದ ಬೆಡಗಿ ಪೂಜಾ ಹೆಗ್ಡೆ
ಸಲ್ಮಾನ್ ಖಾನ್ ಚಿತ್ರಗಳಲ್ಲಿ ಆ್ಯಕ್ಷನ್ ಇರಬೇಕು ಎಂದು ಫ್ಯಾನ್ಸ್ ಬಯಸುತ್ತಾರೆ. ಈ ಚಿತ್ರದಲ್ಲಿ ಆ್ಯಕ್ಷನ್ ಕೊಂಚ ಹೆಚ್ಚೇ ಇದೆ. ಇದರ ಜೊತೆಗೆ ಫ್ಯಾಮಿಲಿ ಡ್ರಾಮಾ ಕೂಡ ಇದೆ. ಸಲ್ಮಾನ್ ಖಾನ್ ಸಿನಿಮಾಗಳಲ್ಲಿ ಅಶ್ಲೀಲತೆಗೆ ಜಾಗ ಇಲ್ಲ. ಅದು ಈ ಚಿತ್ರದಲ್ಲೂ ಮುಂದುವರಿದಿದೆ. ಹೀಗಾಗಿ ಫ್ಯಾಮಿಲಿ ಆಡಿಯನ್ಸ್ಗೆ ಅವರು ಹೆಚ್ಚು ಇಷ್ಟ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ