Salman Khan: ಟರ್ಕಿಯಲ್ಲಿ ಅಭಿಮಾನಿಗಳೊಂದಿಗೆ ನೃತ್ಯ ಮಾಡಿ ಗಮನ ಸೆಳೆದ ಸಲ್ಮಾನ್ ಖಾನ್

| Updated By: shivaprasad.hs

Updated on: Sep 14, 2021 | 7:09 PM

ಬಾಲಿವುಡ್​ನ ಖ್ಯಾತ ನಟ ಸಲ್ಮಾನ್ ಖಾನ್ ಅಭಿಮಾನಿಗಳೊಂದಿಗೆ ಒಂದಾಗಿ ಹೆಜ್ಜೆ ಹಾಕಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Salman Khan: ಟರ್ಕಿಯಲ್ಲಿ ಅಭಿಮಾನಿಗಳೊಂದಿಗೆ ನೃತ್ಯ ಮಾಡಿ ಗಮನ ಸೆಳೆದ ಸಲ್ಮಾನ್ ಖಾನ್
ಸಲ್ಮಾನ್ ಖಾನ್ (ಸಾಂದರ್ಭಿಕ ಚಿತ್ರ)
Follow us on

ಬಾಲಿವುಡ್ ನಟ ಸಲ್ಮಾನ್ ಖಾನ್ ಪ್ರಸ್ತುತ ‘ಟೈಗರ್ 3’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಪ್ರಸ್ತುತ ಟರ್ಕಿಯ ನಗರವೊಂದರಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ. ಈ ವೇಳೆ, ದಿನದ ಶೂಟ್ ಮುಗಿದ ನಂತರ ನೆರೆದಿದ್ದ ಅಭಿಮಾನಿಗಳೊಂದಿಗೆ ಸಲ್ಲು ಭಾಯ್ ಜಾಲಿಯಾಗಿ‌ ಸ್ಟೆಪ್ ಹಾಕಿದ್ದು, ಅಭಿಮಾನಿಗಳು ಸಖತ್ ಎಂಜಾಯ್ ಮಾಡಿದ್ದಾರೆ. ಪ್ರಸ್ತುತ ಈ ವಿಡಿಯೊಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ.

ಸಲ್ಮಾನ್ ನರ್ತಿಸಿರುವ ವಿಡಿಯೊ ಇಲ್ಲಿದೆ: 

ಅಭಿಮಾನಿಗಳೊಂದಿಗೆ ಒಂದಾಗಿ ಸಲ್ಮಾನ್ ನರ್ತಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಷ್ಟು ದೊಡ್ಡ ನಟನಾದರೂ ಕೂಡ ಯಾವ ಹಮ್ಮು ಬಿಮ್ಮು ಕೂಡ ಇಲ್ಲದೇ ಸಾಮಾನ್ಯ ಅಭಿಮಾನಿಗಳೊಂದಿಗೆ ಸಂತಸದಿಂದ ಕಾಲ ಕಳೆದಿರುವುದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ಅಭಿಮಾನಿಗಳು ಹೊಗಳಿದ್ದಾರೆ.

‘ಟೈಗರ್ 3’ ಚಿತ್ರಕ್ಕೆ ಇನ್ನೂ ಅಧಿಕೃತವಾಗಿ ಶೀರ್ಷಿಕೆಯನ್ನು ನೀಡಿಲ್ಲ. ಈ ಹಿಂದಿನ ‘ಏಕ್ತಾ ಟೈಗರ್’ ಹಾಗೂ ‘ಟೈಗರ್ ಜಿಂದಾ ಹೈ’ ಚಿತ್ರಗಳು ಬಹುದೊಡ್ಡ ಹಿಟ್ ಆಗಿದ್ದಲ್ಲದೇ, ಬಾಕ್ಸಾಫೀಸ್​ನಲ್ಲಿ ಧೂಳೆಬ್ಬಿಸಿದ್ದವು. ಆದ್ದರಿಂದಲೇ ಸರಣಿಯ ಮೂರನೇ ಚಿತ್ರದ ಮೇಲೆ ಬಹುದೊಡ್ಡ ನಿರೀಕ್ಷೆ ಇದೆ.  ಟೈಗರ್ 3 ಚಿತ್ರದಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಕತ್ರಿನಾ ಕೈಫ್ ನಟಿಸುತ್ತಿದ್ದಾರೆ. ಮನೀಶ್ ಶರ್ಮಾ ನಿರ್ದೇಶನ ಮಾಡುತ್ತಿರುವ ‘ಟೈಗರ್ 3’ ಚಿತ್ರದಲ್ಲಿ ಸಲ್ಮಾನ್ ರಾ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ಚಿತ್ರವನ್ನು ಹಿಂದಿನ ಟೈಗರ್ ಚಿತ್ರಗಳನ್ನು ನಿರ್ಮಿಸಿದ್ದ ‘ಯಶ್ ರಾಜ್ ಸ್ಟುಡಿಯೋಸ್’  ನಿರ್ಮಾಣ ಮಾಡುತ್ತಿದೆ. ಸಲ್ಮಾನ್ ಸಂಬಂಧಿ ಸೊಹೈಲ್ ಖಾನ್ ಕೂಡಾ ಈ ಚಿತ್ರದ ಭಾಗವಾಗಿದ್ದಾರೆ.

ಟೈಗರ್ 3 ಚಿತ್ರವು ಸಲ್ಮಾನ್ ಪಾಲಿಗೆ ಬಹುಮುಖ್ಯವಾದ ಚಿತ್ರವಾಗಿದೆ. ಕಾರಣ, ಅವರ ಈ ಹಿಂದಿನ ‘ರಾಧೆ: ದಿ ಮೋಸ್ಟ್ ವಾಂಟೆಡ್ ಭಾಯಿ’ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದೇ, ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಆದರೆ ಈ ಚಿತ್ರಕ್ಕೆ ಅಭಿಮಾನಿಗಳು ಹಾಗೂ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಆದ್ದರಿಂದ ಸಲ್ಮಾನ್​ಗೆ ಈ ಚಿತ್ರ ಮುಖ್ಯವಾಗಿದೆ.

ಇದನ್ನೂ ಓದಿ:

Salman Khan: ಬಹು ನಿರೀಕ್ಷಿತ ‘ಟೈಗರ್ 3’ ಚಿತ್ರದ ಫೊಟೊಗಳು ಲೀಕ್; ಸಲ್ಮಾನ್ ಗೆಟಪ್ ನೋಡಿ ಅಚ್ಚರಿಗೊಂಡ  ಫ್ಯಾನ್ಸ್

ಶಮಿತಾ ಶೆಟ್ಟಿ-ರಾಕೇಶ್​ ಬಾಪಟ್​​ ಸಂಬಂಧಕ್ಕೆ ಮನೆಯವರ ಒಪ್ಪಿಗೆ? ಶಿಲ್ಪಾ ಶೆಟ್ಟಿ ತಾಯಿಯಿಂದ ಹೊಗಳಿಕೆ​

(Salman khan danced with fans after shooting Tiger 3 in Turkey and video goes viral)