ಖ್ಯಾತ ನಟ ಸಲ್ಮಾನ್ ಖಾನ್ (Salman Khan) ಅವರ ಮನೆ ಎದುರು ಗುಂಡಿನ ದಾಳಿ ನಡೆದಿರುವುದು ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ. ಏಪ್ರಿಲ್ 14ರ ಮುಂಜಾನೆಯೇ ಸಲ್ಲು ಮನೆ ಮೇಲೆ ಕಿಡಿಗೇಡಿಗಳು ಗುಂಡು ಹಾರಿಸಿದ್ದಾರೆ. ಶಂಕಿತರ ಪತ್ತೆಗಾಗಿ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಈ ನಡುವೆ ಶಂಕಿತ ಶೂಟರ್ಗಳ ಸಿಸಿಟಿವಿ ದೃಶ್ಯ ವೈರಲ್ ಆಗಿದೆ. ಬೈಕ್ನಲ್ಲಿ ಬಂದ ಕಿಡಿಗೇಡಿಗಳು ಸಲ್ಮಾನ್ ಖಾನ್ ನಿವಾಸದ ಎದುರು ಶೂಟೌಟ್ (Shootout) ನಡೆಸಿದ್ದಾರೆ. ಅದೃಷ್ಟವಶಾತ್ ಯಾರಿಗೂ ಹಾನಿ ಆಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಶಂಕಿತರ ವಿಡಿಯೋ (CCTV Video) ಹರಿದಾಡುತ್ತಿದೆ. ಆರೋಪಿಗಳನ್ನು ಆದಷ್ಟು ಬೇಗ ಪೊಲೀಸರು ಬಂಧಿಸಲಿದ್ದಾರೆ ಎಂಬ ಭರವಸೆ ಅಭಿಮಾನಿಗಳಿಗೆ ಇದೆ.
ಭಾನುವಾರ ಬೆಳಗ್ಗೆ 4.55 ಗಂಟೆಗೆ ಶಂಕಿತರ ಚಲನವಲನ ಕಾಣಿಸಿದೆ. ಒಂದೇ ವೇಗದಲ್ಲಿ ಬಂದ ಇಬ್ಬರು ಬೈಕ್ ಸವಾರರು ಆ ದಾರಿಯಲ್ಲಿ ಹಾದು ಹೋಗಿದ್ದಾರೆ. ಅವರೇ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಸದ್ಯ ಮುಂಬೈ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳು ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡದವರು ಘಟನೆ ಸ್ಥಳದ ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆ ತೀವ್ರಗೊಂಡಿದೆ.
#CCTV #SalmanKhan Suspected Shooters
In bhen ka lo#o ki ma cho#i jayegi
We love you salman bhai #SalmanKhan pic.twitter.com/5X7zTIyd7u— Harsh Kumar (@harshkumar3908) April 14, 2024
ಸಲ್ಮಾನ್ ಖಾನ್ ಅವರಿಗೆ ಈ ಮೊದಲು ಕೂಡ ಕೊಲೆ ಬೆದರಿಕೆ ಹಾಕಲಾಗಿತ್ತು. ಆ ಕಾರಣದಿಂದ ಅವರು ಭದ್ರತೆ ಹೆಚ್ಚಿಸಿಕೊಂಡಿದ್ದರು. ಬುಲೆಟ್ಪ್ರೂಫ್ ಕಾರುಗಳನ್ನು ಅವರು ಖರೀದಿಸಿದ್ದರು. ಈಗ ಅವರ ನಿವಾಸದ ಎದುರಲ್ಲೇ ಶೂಟೌಟ್ ನಡೆದಿರುವ ಕಾರಣ ತಮ್ಮ ಸುರಕ್ಷತೆ ಬಗ್ಗೆ ಸಲ್ಮಾನ್ ಖಾನ್ ಅವರು ಇನ್ನಷ್ಟು ಎಚ್ಚರಿಕೆ ವಹಿಸಬೇಕಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಹಲವು ತಿಂಗಳ ಹಿಂದೆ ಇಬ್ಬರು ವ್ಯಕ್ತಿಗಳು ಸಲ್ಮಾನ್ ಖಾನ್ ಅವರ ಫಾರ್ಮ್ಹೌಸ್ಗೆ ನುಸುಳಲು ಪ್ರಯತ್ನಿಸಿದ್ದು ವರದಿ ಆಗಿತ್ತು.
ಇದನ್ನೂ ಓದಿ: Salman Khan: ಗುಂಡಿನ ದಾಳಿ ಬಳಿಕ ಸಲ್ಮಾನ್ ಖಾನ್ ಮನೆ ಎದುರು ಹೇಗಿದೆ ಪರಿಸ್ಥಿತಿ?
ಶೂಟೌಟ್ ಘಟನೆಗೆ ಸಂಬಂಧಿಸಿದಂತೆ ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ. ಸಲ್ಮಾನ್ ಖಾನ್ ಮಾತ್ರವಲ್ಲ, ಜನಸಾಮಾನ್ಯರಿಗೂ ಮುಂಬೈನಲ್ಲಿ ಭದ್ರತೆ ಇಲ್ಲ ಎಂದು ಶಿವ ಸೇನಾ ಮುಖಂಡ ಆನಂದ್ ದುಬೆ ಹೇಳಿದ್ದಾರೆ. ‘ಮಹಾರಾಷ್ಟ್ರದಲ್ಲಿ ಕಾನೂನು, ಸುವ್ಯವಸ್ಥೆ ಅಪಾಯಕಾರಿ ಸ್ಥಿತಿಯಲ್ಲಿದೆ. ಈ ಸಂದರ್ಭದಲ್ಲಿ ಗೃಹ ಮಂತ್ರಿ ಎಲ್ಲಿದ್ದಾರೆ? ಅವರು 24 ಗಂಟೆ ರಾಜಕೀಯ ಪ್ರಚಾರ ಮತ್ತು ಷಡ್ಯಂತ್ರದಲ್ಲಿ ಬ್ಯುಸಿ ಆಗಿದ್ದಾರೆ’ ಎಂದು ಶಿವಸೇನೆಯ ಸಂಜಯ್ ರಾವತ್ ಆರೋಪಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.