ಹಾಡಿನ ಶೂಟ್ ವೇಳೆ ಸಲ್ಲುಗೆ ಇಂಜೂರಿ; ನಟ ತೆಗೆದುಕೊಂಡರು ದಿಟ್ಟ ನಿರ್ಧಾರ

Salman Khan: ಸಲ್ಮಾನ್ ಖಾನ್ ನಟನೆಯ 'ಸಿಕಂದರ್' ಚಿತ್ರವು ಈದ್ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಚಿತ್ರದ ಹಾಡುಗಳು ಮತ್ತು ಟೀಸರ್ ಈಗಾಗಲೇ ಬಿಡುಗಡೆಯಾಗಿವೆ. ಹೋಳಿ ಹಾಡಿನ ಚಿತ್ರೀಕರಣದ ಸಮಯದಲ್ಲಿ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಇಬ್ಬರಿಗೂ ಗಾಯಗಳಾಗಿವೆ. ಆದರೂ, ಚಿತ್ರೀಕರಣದಲ್ಲಿ ಯಾವುದೇ ವಿಳಂಬವಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಎ.ಆರ್. ಮುರುಗದಾಸ್ ನಿರ್ದೇಶನದ ಈ ಚಿತ್ರವು ಸಾಕಷ್ಟು ಆಕ್ಷನ್ ದೃಶ್ಯಗಳನ್ನು ಒಳಗೊಂಡಿದೆ.

ಹಾಡಿನ ಶೂಟ್ ವೇಳೆ ಸಲ್ಲುಗೆ ಇಂಜೂರಿ; ನಟ ತೆಗೆದುಕೊಂಡರು ದಿಟ್ಟ ನಿರ್ಧಾರ
Salman Khan
Edited By:

Updated on: Mar 13, 2025 | 5:36 PM

ನಟ ಸಲ್ಮಾನ್ ಖಾನ್ (Salman Khan) ನಟನೆಯ ‘ಸಿಕಂದರ್’ ಸಿನಿಮಾ ರಿಲೀಸ್ ಆಗಲು ರೆಡಿ ಆಗಿದೆ. ಈ ಚಿತ್ರದ ಹಾಡುಗಳು ಹಾಗೂ ಟೀಸರ್ ರಿಲೀಸ್ ಮಾಡುವ ಮೂಲಕ ಗಮನ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಹೋಳಿ ಹಬ್ಬದ ಸಂದರ್ಭದಲ್ಲಿ ಚಿತ್ರದ ‘ಬಮ್ ಬಮ್ ಭೋಲೆ..’ ಹಾಡನ್ನು ರಿಲೀಸ್ ಮಾಡಲಾಗಿದೆ. ಹೋಳಿ ಹಿನ್ನೆಲೆಯಲ್ಲಿ ಹಾಡು ಸಾಗುತ್ತದೆ. ಈ ಹಾಡಿನಲ್ಲಿ ರಶ್ಮಿಕಾ ಹಾಗೂ ಕಾಜಲ್ ಕೂಡ ಕಾಣಿಸಿಕೊಂಡಿದ್ದಾರೆ. ಈ ಹಾಡಿನ ಶೂಟ್ ವೇಳೆ ಸಲ್ಲುಗೆ ಇಂಜೂರಿ ಆಗಿತ್ತು ಎಂಬುದು ನಿಮಗೆ ಗೊತ್ತೇ? ಆದರೂ ಬಿಡದೆ ಸಲ್ಮಾನ್ ಖಾನ್ ಶೂಟ್ ಮಾಡಿದ್ದರು ಎಂಬುದು ಈಗ ರಿವೀಲ್ ಆಗಿದೆ.

ಹೋಳಿ ಹಿನ್ನೆಲೆಯಲ್ಲಿ ಹಾಡು ಸಾಗುತ್ತದೆ. ಹೆಚ್ಚಿನ ಸಂಖ್ಯೆಯ ಡ್ಯಾನ್ಸರ್​ಗಳು ಇದರಲ್ಲಿ ಇದ್ದರು. ಈ ಹಾಡಿನ ಶೂಟ್ ವೇಳೆ ಅವರಿಗೆ ಗಾಯ ಆಯಿತು. ಆದರೂ ಸಲ್ಮಾನ್ ಖಾನ್ ಅವರು ಬಿಡದೆ ಶೂಟ್ ಮಾಡಿದ್ದರು. ಈ ಮೂಲಕ ಶೂಟಿಂಗ್ ವಿಳಂಬ ಆಗೋದನ್ನು ತಡೆದಿದ್ದರು. ಒಂದೊಮ್ಮೆ ಶೂಟ್ ವಿಳಂಬ ಆದರೆ ಡ್ಯಾನ್ಸರ್​ಗಳಿಂದ ಹೊಸ ಕಾಲ್​ಶೀಟ್ ಪಡೆಯಬೇಕಾಗುತ್ತದೆ.  ಇದನ್ನು ಸಲ್ಲು ತಡೆದಿದ್ದಾರೆ.

ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಅವರು ಜಿಮ್ ಮಾಡುವಾಗ ಗಾಯಗೊಂಡಿದ್ದರು. ಈ ಕಾರಣಕ್ಕೆ ‘ಸಿಕಂದರ್’ ಚಿತ್ರದ ಶೂಟ್ ವಿಳಂಬ ಆಯಿತು. ಇದರಿಂದ ಸಿನಿಮಾ ರಿಲೀಸ್ ಮುಂದಕ್ಕೆ ಹೋಗುವ ಭಯ ಇತ್ತು. ಆದರೆ, ಆ ರೀತಿ ಆಗಿಲ್ಲ. ಈಗ ಶೂಟ್ ಪೂರ್ಣಗೊಳಿಸಿರೋ ತಂಡ ಈದ್​ಗೆ ರಿಲೀಸ್ ಆಗುತ್ತಿದೆ.

ಇದನ್ನೂ ಓದಿ:‘ಸಿಕಂದರ್’ ಚಿತ್ರಕ್ಕಾಗಿ ಸಲ್ಮಾನ್ ಖಾನ್ ಪಡೆದ ಸಂಭಾವನೆ ಇಷ್ಟೊಂದಾ?

ಎಆರ್ ಮುರಗದಾಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಮುರುಗದಾಸ್ ಅವರು ‘ಘಜಿನಿ’ ರೀತಿಯ ಹಿಟ್ ಚಿತ್ರಗಳನ್ನು ನೀಡಿದವರು. ಅವರು ಮೊದಲ ಬಾರಿಗೆ ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್ ಅವರು ಈ ಚಿತ್ರಕ್ಕಾಗಿ ಕಾದಿದ್ದಾರೆ.

ಈದ್ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಮಾಡಲು ಸಲ್ಮಾನ್ ಖಾನ್ ಸದಾ ಉತ್ಸುಕರಾಗಿರುತ್ತಾರೆ. ಅಂತೆಯೇ ಈ ವರ್ಷ ಈದ್​ಗೆ ಅವರು ಬರುತ್ತಿದ್ದಾರೆ. ಸಾಜಿದ್ ನಾಡಿಯಾದ್ವಾಲಾ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಸಾಕಷ್ಟು ಆ್ಯಕ್ಷನ್ ಇರಲಿದೆ. ಈ ಸಿನಿಮಾ ಯಾವಾಗ ರಿಲೀಸ್ ಆಗುತ್ತದೆ ಹಾಗೂ ಟ್ರೇಲರ್ ಯಾವಾಗ ತೆರೆಗೆ ಬರುತ್ತದೆ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ರಿವೀಲ್ ಆಗಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ