ಸಲ್ಮಾನ್ ಖಾನ್ (Salman Khan) ಜೊತೆ ಸಿನಿಮಾ ಮಾಡಲು ನಿರ್ದೇಶಕರು, ನಿರ್ಮಾಪಕರು ಸಾಲು ಗಟ್ಟಿ ನಿಂತಿದ್ದಾರೆ. ಆದರೆ ವರ್ಷಕ್ಕೆ ಎರಡಷ್ಟೆ ಸಿನಿಮಾ ಮಾಡಲುವ ಸಲ್ಮಾನ್ ಖಾನ್ರ ಡೇಟ್ಸ್ ದೊರೆಯುವುದು ಸುಲಭವಲ್ಲ. ಹಲವರು ಹೇಳುವಂತೆ ಸಲ್ಮಾನ್ ಖಾನ್ ತಾವು ನಟಿಸುವ ಸಿನಿಮಾದ ಕತೆಯನ್ನು ತಾವೇ ಆಯ್ಕೆ ಮಾಡುತ್ತಾರೆ. ಅಥವಾ ಅವರ ತಂದೆ ಆಯ್ಕೆ ಮಾಡುತ್ತಾರೆ. ಹೀಗಿರುವಾಗ ಕೇವಲ ಒಂದು ಎರಡು ಸಿನಿಮಾ ನಿರ್ದೇಶನ ಮಾಡಿರುವ ನಿರ್ದೇಶಕಿಗೆ ಸಲ್ಮಾನ್ ಖಾನ್ ತಮ್ಮ ಸಿನಿಮಾ ನಿರ್ದೇಶನ ಮಾಡುವ ಅವಕಾಶ ನೀಡಿದ್ದಾರೆ ಅದು ಸಹ ಬಹಿರಂಗ ಆಫರ್.
ಆಮಿರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್, ‘ಲಾಪತಾ ಲೇಡೀಸ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಬಹಳ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ನವ ವಧುಗಳಿಬ್ಬರು ಕಾಣೆಯಾಗಿರುವ ಕತೆಯನ್ನು ಒಳಗೊಂಡಿರುವ ಈ ಸಿನಿಮಾನಲ್ಲಿ ಮಹಿಳಾ ಸ್ವಾತಂತ್ರ್ಯ, ಪುರುಷ ಅಹಂ, ಗ್ರಾಮವಾಸಿಗಳ ಸಮಸ್ಯೆ, ದೇಶದ ರಾಜಕೀಯ ಪರಿಸ್ಥಿತಿ ಇನ್ನೂ ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಸಿನಿಮಾದಲ್ಲಿ ಬಳಸಲಾಗಿರುವ ಹಾಸ್ಯಕ್ಕೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ.
‘ಲಾಪತಾ ಲೇಡೀಸ್’ ಸಿನಿಮಾವನ್ನು ಆಮಿರ್ ಖಾನ್ ನಿರ್ಮಾಣ ಮಾಡಿದ್ದು, ಹಲವು ನಗರಗಳಲ್ಲಿ ಪ್ರೀಮಿಯರ್ ಶೋಗಳನ್ನು ಆಯೋಜಿಸಿದ್ದರು. ಹಲವು ಸೆಲೆಬ್ರಿಟಿಗಳು ಈಗಾಗಲೇ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಇದೀಗ ಬಾಲಿವುಡ್ನ ಸ್ಟಾರ್ ನಟ ಸಲ್ಮಾನ್ ಖಾನ್ ಸಹ ‘ಲಾಪತಾ ಲೇಡೀಸ್’ ಸಿನಿಮಾ ವೀಕ್ಷಿಸಿದ್ದು, ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಸಲ್ಮಾನ್ ಖಾನ್ ಮಾತ್ರವೇ ಅಲ್ಲದೆ, ಸಲ್ಮಾನ್ ಖಾನ್ರ ತಂದೆ, ಖ್ಯಾತ ಚಿತ್ರಸಾಹಿತಿ ಸಲೀಂ ಅವರು ಸಹ ಸಿನಿಮಾ ನೋಡಿ ಬಹುವಾಗಿ ಮೆಚ್ಚಿಕೊಂಡಿದ್ದಾರೆ.
ಇದನ್ನೂ ಓದಿ:ಇನ್ಮುಂದೆ YRF ಸಿನಿಮಾಗಳಲ್ಲಿ ಇರಲ್ಲ ಸಲ್ಮಾನ್ ಖಾನ್ ಅತಿಥಿ ಪಾತ್ರ; ನಿರ್ಧಾರಕ್ಕೆ ಕಾರಣ ಏನು?
ಸಿನಿಮಾ ನೋಡಿ ಟ್ವೀಟ್ ಮಾಡಿರುವ ಸಲ್ಮಾನ್ ಖಾನ್, ‘ಈಗಷ್ಟೆ ಕಿರಣ್ ರಾವ್ ನಿರ್ದೇಶನದ ‘ಲಾಪತಾ ಲೇಡೀಸ್’ ಸಿನಿಮಾ ನೋಡಿದೆ. ವಾಹ್, ವಾಹ್ ಕಿರಣ್ ಅದ್ಭುತವಾದ ಸಿನಿಮಾ, ನಾನಂತೂ ಸಿನಿಮಾವನ್ನು ಬಹಳ ಎಂಜಾಯ್ ಮಾಡಿದೆ. ತಂದೆಯವರಿಗೂ ಸಹ ಸಿನಿಮಾ ಬಹಳ ಹಿಡಿಸಿತು. ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ. ನನ್ನ ಜೊತೆ ಯಾವಾಗ ಕೆಲಸ ಮಾಡುತ್ತೀರಿ?’ ಎಂದು ಸಲ್ಮಾನ್ ಖಾನ್ ಪ್ರಶ್ನೆ ಮಾಡಿದ್ದಾರೆ.
‘ಲಾಪತಾ ಲೇಡೀಸ್’ ಕಿರಣ್ ರಾವ್ ಅವರ ಎರಡನೇ ಸಿನಿಮಾ. ಇದಕ್ಕೂ ಮುನ್ನ ಅವರು ‘ದೋಬಿ ಘಾಟ್’ ಸಿನಿಮಾ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹಿಟ್ ಎನಿಸಿಕೊಳ್ಳಲಿಲ್ಲವಾದರೂ ವಿಮರ್ಶಕರಿಂದ, ಸೂಕ್ಷ್ಮ ಪ್ರೇಕ್ಷಕರಿಂದ, ಸಿನಿಮಾ ಪ್ರೇಮಿಗಳಿಂದ ಮೆಚ್ಚುಗೆ ಗಳಿಸಿಕೊಂಡಿತು. ಇದೀಗ ‘ಲಾಪತಾ ಲೇಡೀಸ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿಯೂ ಉತ್ತಮ ಗಳಿಕೆ ಕಾಣುತ್ತಿದೆ. ಒಟಿಟಿಗೆ ಬಂದ ಬಳಿಕ ಇನ್ನಷ್ಟು ಹಿಟ್ ಆಗುವ ಸಂಭವ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ