ವಿಶ್ವಾದ್ಯಂತ 100 ಕೋಟಿ ರೂಪಾಯಿ ಗಳಿಸಿದ ‘ಶೈತಾನ್’ ಸಿನಿಮಾ
‘ಶೈತಾನ್’ ಸಿನಿಮಾ ನೋಡಿದ ಎಲ್ಲರೂ ಪಾಸಿಟಿವ್ ಪ್ರತಿಕ್ರಿಯೆ ನೀಡಿದ್ದಾರೆ. ವಿಮರ್ಶಕರು ಕೂಡ ಈ ಚಿತ್ರಕ್ಕೆ ಉತ್ತಮ ಅಂಕ ನೀಡಿದ್ದಾರೆ. ಅಜಯ್ ದೇವಗನ್, ಆರ್. ಮಾಧವನ್ ಅವರ ಮುಖಾಮುಖಿ ಈ ಸಿನಿಮಾದಲ್ಲಿ ಆಗಿದೆ. ನಟಿ ಜ್ಯೋತಿಕಾ ಅವರಿಗೂ ಒಂದು ಪ್ರಮುಖ ಪಾತ್ರವಿದೆ. ಜಾನಕಿ ಬೋಡಿವಾಲಾ ಅವರ ನಟನೆ ಹೆಚ್ಚು ಹೈಲೈಟ್ ಆಗಿದೆ.
ಹಾರರ್ ಸಿನಿಮಾಗಳನ್ನು ಇಷ್ಟಪಡುವ ದೊಡ್ಡ ಪ್ರೇಕ್ಷಕರ ವರ್ಗವಿದೆ. ಅಂಥವರೆಲ್ಲ ‘ಶೈತಾನ್’ ಸಿನಿಮಾ (Shaitaan Movie) ನೋಡಿ ಎಂಜಾಯ್ ಮಾಡಿದ್ದಾರೆ. ಅಜಯ್ ದೇವಗನ್ (Ajay Devgn) ನಟನೆಯ ಈ ಸಿನಿಮಾದಲ್ಲಿ ಆರ್. ಮಾಧವನ್ ಅವರು ನೆಗೆಟಿವ್ ಪಾತ್ರ ಮಾಡಿದ್ದಾರೆ. ಯುವತಿಯನ್ನು ವಶೀಕರಣ ಮಾಡುವ ಕಥೆ ಈ ಸಿನಿಮಾದಲ್ಲಿದೆ. ಕಳೆದ ಶುಕ್ರವಾರ (ಮಾರ್ಚ್ 8) ಬಿಡುಗಡೆಯಾದ ಶೈತಾನ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಉತ್ತಮವಾಗಿ ಕಲೆಕ್ಷನ್ ಮಾಡುತ್ತಿದೆ. ವಿಶ್ವಾದ್ಯಂತ ‘ಶೈತಾನ್’ ಕಲೆಕ್ಷನ್ (Shaitaan Box Office Collection) 100 ಕೋಟಿ ರೂಪಾಯಿಯಾಗಿದೆ ಎಂದು ವರದಿ ಆಗಿದೆ. ಇನ್ನೂ ಅನೇಕ ಕಡೆಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ.
‘ಶೈತಾನ್’ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರಿ ಹೈಪ್ ಸೃಷ್ಟಿ ಮಾಡಿತ್ತು. ಟ್ರೇಲರ್ ನೋಡಿ ಎಲ್ಲರೂ ವಾವ್ ಎಂದಿದ್ದರು. ಇದು ಗುಜರಾತಿ ಭಾಷೆಯ ‘ವಶ್’ ಸಿನಿಮಾದ ಬಾಲಿವುಡ್ ರಿಮೇಕ್. ಹಿಂದಿ ಪ್ರೇಕ್ಷಕರು ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ‘ದೃಶ್ಯಂ’ ರೀತಿಯೇ ಅಜಯ್ ದೇವಗನ್ ಅವರು ‘ಶೈತಾನ್’ ಚಿತ್ರದ ಮೂಲಕ ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದಾರೆ.
ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಶೈತಾನ್ ಕಲೆಕ್ಷನ್ ವಿವರ:
ಮೊದಲ ದಿನ: 15.21 ಕೋಟಿ ರೂಪಾಯಿ. ಎರಡನೇ ದಿನ: 19.18 ಕೋಟಿ ರೂಪಾಯಿ. ಮೂರನೇ ದಿನ: 20.74 ಕೋಟಿ ರೂಪಾಯಿ. ನಾಲ್ಕನೇ ದಿನ: 7.81 ಕೋಟಿ ರೂಪಾಯಿ. ಐದನೇ ದಿನ: 6.27 ಕೋಟಿ ರೂಪಾಯಿ.
#Shaitaan continues its dominance… The plus is its rock-steady performance in the heartland/mass pockets, which, in turn, indicates that it will continue to stay strong in Week 2 as well… Fri 15.21 cr, Sat 19.18 cr, Sun 20.74 cr, Mon 7.81 cr, Tue 6.57 cr, Wed 6.27 cr. Total: ₹… pic.twitter.com/FtA9UZI8qR
— taran adarsh (@taran_adarsh) March 14, 2024
6ನೇ ದಿನವೂ ‘ಶೈತಾನ್’ ಚಿತ್ರ ಉತ್ತಮವಾಗಿ ಪ್ರದರ್ಶನವಾಗುತ್ತಿದೆ. ಈವರೆಗೂ ಭಾರತದಲ್ಲಿ ಈ ಸಿನಿಮಾದ ಗಳಿಕೆ 80 ಕೋಟಿ ರೂಪಾಯಿ ಆಗಿದೆ ಎಂದು ಹೇಳಲಾಗುತ್ತಿದೆ. ವಿದೇಶದಿಂದ 20 ಕೋಟಿ ರೂಪಾಯಿ ಆದಾಯ ಹರಿದುಬಂದಿರುವ ಬಗ್ಗೆ ವರದಿ ಆಗಿದೆ. ಎರಡೂ ಸೇರಿಸಿದರೆ ‘ಶೈತಾನ್’ ಕಲೆಕ್ಷನ್ 100 ಕೋಟಿ ರೂಪಾಯಿ ಗಡಿ ಮುಟ್ಟಿದೆ. ಈ ಸಿನಿಮಾಗೆ ವಿಕಾಸ್ ಬಹ್ಲ್ ಅವರು ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: ‘ನನಗೂ ದೆವ್ವದ ಅನುಭವ ಆಗಿದೆ, ಆದರೆ ನಾನು ಮಾತಾಡಲ್ಲ’: ಅಜಯ್ ದೇವಗನ್
‘ಶೈತಾನ್’ ಸಿನಿಮಾದಲ್ಲಿ ನಟಿ ಜಾನಕಿ ಬೋಡಿವಾಲಾ ಅವರು ಕಥಾನಾಯಕನ ಮಗಳ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದಲ್ಲಿ ಅವರ ನಟನೆಗೆ ಹೆಚ್ಚು ಸ್ಕೋಪ್ ಸಿಕ್ಕಿದೆ. ಜ್ಯೋತಿಕಾ ಕೂಡ ಒಂದು ಪ್ರಮುಖವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಲನ್ ಆಗಿ ಅಬ್ಬರಿಸಿರುವ ಆರ್. ಮಾಧವನ್ ಅವರ ನಟನೆಗೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.