ದಬಾಂಗ್​ ಸರಣಿ ವಿಚಾರದಲ್ಲಿ ದೊಡ್ಡ ರಿಸ್ಕ್​ ತೆಗೆದುಕೊಳ್ಳುತ್ತಿದ್ದಾರೆ ಸಲ್ಮಾನ್​ ಖಾನ್

| Updated By: ರಾಜೇಶ್ ದುಗ್ಗುಮನೆ

Updated on: Jul 21, 2021 | 6:54 PM

2019ರಲ್ಲಿ ತೆರೆಗೆ ಬಂದ ‘ದಬಾಂಗ್​ 3’ ಸಿನಿಮಾದಲ್ಲಿ ಚುಲ್ಬುಲ್​ ಪಾಂಡೆ ಪಾತ್ರದಲ್ಲಿ ಸಲ್ಲು ನಟಿಸಿದರೆ, ಸುದೀಪ್​ ನೆಗೆಟಿವ್​ ಶೇಡ್​ನಲ್ಲಿ ಮಿಂಚಿದ್ದರು. ಈ ಚಿತ್ರದ ಮೇಲೆ ದೊಡ್ಡಮಟ್ಟದ ನಿರೀಕ್ಷೆ ಇತ್ತು. ಆದರೆ, ಅದು ಹುಸಿ ಆಗಿತ್ತು.

ದಬಾಂಗ್​ ಸರಣಿ ವಿಚಾರದಲ್ಲಿ ದೊಡ್ಡ ರಿಸ್ಕ್​ ತೆಗೆದುಕೊಳ್ಳುತ್ತಿದ್ದಾರೆ ಸಲ್ಮಾನ್​ ಖಾನ್
ಸಲ್ಮಾನ್​ ಖಾನ್​
Follow us on

ಸಲ್ಮಾನ್​ ಖಾನ್​ ಹಾಗೂ ಕಿಚ್ಚ ಸುದೀಪ್​ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ‘ದಬಾಂಗ್​ 3’ ಸಿನಿಮಾ ಬಾಕ್ಸ್​ ಆಫೀಸ್​ ಹಾಗೂ ವಿಮರ್ಶೆ ಎರಡರಲ್ಲೂ ಸೋತಿತ್ತು. ಈ ಮಧ್ಯೆಯೂ ‘ದಬಾಂಗ್​ 4’ ಮಾಡೋಕೆ ಸಲ್ಲು ತೆರೆಮರೆಯಲ್ಲಿ ಸಿದ್ಧತೆ ನಡೆಸಿದ್ದಾರೆ. ಈ ವಿಚಾರ ಅಭಿಮಾನಿಗಳಿಗೆ ಅಚ್ಚರಿ ಹಾಗೂ ಖುಷಿ ಎರಡನ್ನೂ ನೀಡಿದೆ.

ಒಂದು ಫ್ರಾಚೈಸ್​ನಲ್ಲಿ ಮೂರು-ನಾಲ್ಕು ಚಿತ್ರಗಳು ಮೂಡಿ ಬಂದ ಉದಾಹರಣೆ ಸಾಕಷ್ಟಿದೆ. ಆದರೆ, ಒಂದು ಚಿತ್ರ ಸೋತರೂ ನಂತರ ಆ ಸರಣಿಯಲ್ಲಿ ಮತ್ತೆ ಚಿತ್ರ ಮಾಡುವ ಸಾಹಸಕ್ಕೆ ಯಾವ ನಿರ್ಮಾಪಕರೂ ಹೋಗುವುದಿಲ್ಲ. ಆದರೆ, ಸಲ್ಮಾನ್​ ಖಾನ್​ ಹೀಗೊಂದು ರಿಸ್ಕ್​ ತೆಗೆದುಕೊಳ್ಳುತ್ತಿದ್ದಾರೆ.

2019ರಲ್ಲಿ ತೆರೆಗೆ ಬಂದ ‘ದಬಾಂಗ್​ 3’ ಸಿನಿಮಾದಲ್ಲಿ ಚುಲ್ಬುಲ್​ ಪಾಂಡೆ ಪಾತ್ರದಲ್ಲಿ ಸಲ್ಲು ನಟಿಸಿದರೆ, ಸುದೀಪ್​ ನೆಗೆಟಿವ್​ ಶೇಡ್​ನಲ್ಲಿ ಮಿಂಚಿದ್ದರು. ಈ ಚಿತ್ರದ ಮೇಲೆ ದೊಡ್ಡಮಟ್ಟದ ನಿರೀಕ್ಷೆ ಇತ್ತು. ಆದರೆ, ಅದು ಹುಸಿ ಆಗಿತ್ತು. ಈಗ ಸಲ್ಲು ದಬಾಂಗ್​ 4 ಮಾಡುತ್ತಿರುವ ಬಗ್ಗೆ ಘೋಷಣೆ ಮಾಡಿದ್ದಾರೆ.

ಸಲ್ಲು ಸಹೋದರ ಅರ್ಬಾಜ್​ ಖಾನ್​ ‘ಕ್ವಿಕ್​ ಹೀಲ್​ ಪಿಂಚ್​ ಸೀಸನ್​ 2’ ಆರಂಭಿಸಿದ್ದಾರೆ. ಸೈಬರ್​ ಬೆದರಿಕೆ ಬಗ್ಗೆ ಜಾಗೃತಿ ಮೂಡಿಸೋದು ಈ ಕಾರ್ಯಕ್ರಮದ ಉದ್ದೇಶ. ಸೀಸನ್​ 2ನ ಮೊದಲ ಅತಿಥಿಯಾಗಿ ಸಲ್ಮಾನ್​ ಖಾನ್​ ಆಗಮಿಸಿದ್ದಾರೆ. ಈ ವೇಳೆ ದಬಾಂಗ್​ 4 ಬಗ್ಗೆ ಚರ್ಚೆ ನಡೆದಿದೆ.

ದಬಾಂಗ್​ 1,2,3 ಹಾಗೂ 4 ಇದರಲ್ಲಿ ಯಾವುದು ನಿಮ್ಮಿಷ್ಟದ ಸಿನಿಮಾ ಎನ್ನುವ ಪ್ರಶ್ನೆಯನ್ನು ಸಲ್ಮಾನ್​ ಖಾನ್​ಗೆ ಅರ್ಬಾಜ್​ ಕೇಳಿದ್ದಾರೆ. ಇದಕ್ಕೆ ಸಲ್ಲು ‘ದಬಾಂಗ್​ 4’ ಎಂದು ಉತ್ತರಿಸಿದ್ದಾರೆ. ಈ ವೇಳೆ ಅರ್ಬಾಜ್​, ‘ನೀವು ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದಂತಾಯಿತು’ ಎಂದಿದ್ದಾರೆ.  ಈ ಮೂಲಕ ಸಲ್ಲು ದಬಾಂಗ್​ 4 ಮಾಡ್ತಿರೋ ವಿಚಾರವನ್ನು ಖಚಿತಪಡಿಸಿದ್ದಾರೆ.

ದಬಾಂಗ್​ ಸರಣಿಯ ಮೂರು ಚಿತ್ರಗಳನ್ನೂ ಅರ್ಬಾಜ್​ ನಿರ್ಮಾಣ ಮಾಡಿದ್ದಾರೆ. ಮೊದಲ ಸಿನಿಮಾವನ್ನು ಅಭಿನವ್​ ಕಶ್ಯಪ್​ ನಿರ್ದೇಶನ ಮಾಡಿದರೆ, ದಬಾಂಗ್​ 2 ಅರ್ಬಾಜ್​ ಖಾನ್​ ಹಾಗೂ ದಬಾಂಗ್​ 3 ಪ್ರಭುದೇವ ಅವರು ನಿರ್ದೇಶನ ಮಾಡಿದ್ದಾರೆ.  ಆಯುಷ್​ ಶರ್ಮಾ ಅವರು ಅಂತಿಮ್​ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ನಟಿಸುತತ್ತಿದ್ದಾರೆ. ಇದರ ಜತೆಗೆ ಟೈಗರ್​ 3 ಚಿತ್ರದಲ್ಲೂ ಸಲ್ಲು ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್ ದಾಂಪತ್ಯದ ಗುಟ್ಟನ್ನು ಹೇಳುವುದು; ನಾನು ಸ್ಟಾರ್ ಆಗುವುದು ಹೇಗೆ ಎಂಬ ಪಾಠ ಮಾಡುವುದು ಎರಡೂ ಒಂದೇ!: ಅರ್ಬಾಜ್ ಖಾನ್

32 ವರ್ಷದ ಕೆರಿಯರ್​ನಲ್ಲಿ ಮೊಟ್ಟಮೊದಲ ಬಾರಿಗೆ ಬಯೋಪಿಕ್​ಗೆ ಸಹಿ ಹಾಕಿದ ಸಲ್ಮಾನ್​ ಖಾನ್​