ಸೋಲು ಗೆಲುವು ಏನೇ ಇರಲಿ, ಸಲ್ಮಾನ್ ಖಾನ್ (Salman Khan) ಸಿನಿಮಾ ಎಂದರೆ ಬಜೆಟ್ ಅದ್ದೂರಿಯಾಗಿಯೇ ಇರುತ್ತದೆ. ‘ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕ ಬಳಿಕ ಸಲ್ಮಾನ್ ಖಾನ್ ಗಮನ ಸಂಪೂರ್ಣವಾಗಿ ‘ಟೈಗರ್ 3’ (Tiger 3) ಚಿತ್ರದ ಮೇಲೆ ನೆಟ್ಟಿದೆ. ಈ ಸಿನಿಮಾ ಬಗ್ಗೆ ಹಲವು ಅಚ್ಚರಿಯ ಸುದ್ದಿಗಳು ಕೇಳಿಬರುತ್ತಿದೆ. ಈ ಚಿತ್ರದಲ್ಲಿ ವಿಲನ್ ಆಗಿ ಇಮ್ರಾನ್ ಹಷ್ಮಿ (Emraan Hashmi) ನಟಿಸುತ್ತಿರುವುದು ವಿಶೇಷ. ಬಹುಕೋಟಿ ಬಜೆಟ್ನಲ್ಲಿ ತಯಾರಾಗುತ್ತಿರುವ ‘ಟೈಗರ್ 3’ ಬಗ್ಗೆ ಅಭಿಮಾನಿಗಳ ವಲಯದಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಇದೆ.
‘ಟೈಗರ್ 3’ ಮೇಲೆ ಅಭಿಮಾನಿಗಳು ಇಟ್ಟುಕೊಂಡಿರುವ ನಿರೀಕ್ಷೆಯ ಮಟ್ಟವನ್ನು ತಲುಪಲು ನಿರ್ಮಾಪಕರು ಕೋಟಿ ಕೋಟಿ ರೂ. ಹಣ ಖರ್ಚು ಮಾಡುತ್ತಿದ್ದಾರೆ. ಎಲ್ಲ ಸಿನಿಮಾದಲ್ಲಿಯೂ ಹೀರೋ ಎಂಟ್ರಿ ದೃಶ್ಯಕ್ಕೆ ಸಿಕ್ಕಾಪಟ್ಟೆ ಬಜೆಟ್ ಮೀಸಲಿಡುವುದು ಸಹಜ. ಆದರೆ ‘ಟೈಗರ್ 3’ ಚಿತ್ರದಲ್ಲಿ ವಿಲನ್ ಇಂಟ್ರಡಕ್ಷನ್ ಸೀನ್ಗಾಗಿ ನಿರ್ಮಾಪಕರು ಬರೋಬ್ಬರಿ 10 ಕೋಟಿ ರೂ. ಖರ್ಚು ಮಾಡುತ್ತಿದ್ದಾರೆ.
ಸಲ್ಮಾನ್ ಖಾನ್ ಎದುರು ಇಮ್ರಾನ್ ಹಷ್ಮಿ ಖಳನಾಯಕನಾಗಿ ಕಾದಾಡಲಿದ್ದಾರೆ. ಒಂದು ಫೈಟ್ ದೃಶ್ಯದ ಮೂಲಕ ವಿಲನ್ ಪಾತ್ರವನ್ನು ಪರಿಚಯಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ 10 ಕೋಟಿ ರೂ. ಖರ್ಚು ಆಗಲಿದೆ. ತಿಂಗಳುಗಳ ಕಾಲ ಈ ಫೈಟಿಂಗ್ ದೃಶ್ಯದ ಶೂಟಿಂಗ್ ನಡೆಯಲಿದೆ ಎಂಬ ಮಾಹಿತಿ ಬಿ-ಟೌನ್ ಅಂಗಳದಲ್ಲಿ ಹರಿದಾಡುತ್ತಿದೆ. ಈ ಪಾತ್ರಕ್ಕಾಗಿ ಇಮ್ರಾನ್ ಹಷ್ಮಿ ಕಟ್ಟುಮಸ್ತಾಗಿ ಬಾಡಿ ಬಿಲ್ಡ್ ಮಾಡುತ್ತಿದ್ದಾರೆ.
‘ಏಕ್ ಥಾ ಟೈಗರ್’, ‘ಟೈಗರ್ ಜಿಂದಾ ಹೈ’ ಬಳಿಕ ಟೈಗರ್ ಸರಣಿಯಲ್ಲಿ ಮೂಡಿಬರುತ್ತಿರುವ ಮೂರನೇ ಸಿನಿಮಾ ಇದಾಗಿದ್ದು, ಈ ಬಾರಿಯೂ ಸಲ್ಮಾನ್ ಖಾನ್ಗೆ ಜೋಡಿಯಾಗಿ ಕತ್ರಿನಾ ಕೈಫ್ ಕಾಣಿಸಿಕೊಳ್ಳಲಿದ್ದಾರೆ. ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಅವರ ಎಂಟ್ರಿ ಸೀನ್ ಕೂಡ ಈ ಬಾರಿ ಸಖತ್ ವಿಶೇಷವಾಗಿರಲಿವೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಕೂಡ ಒಂದು ಅತಿಥಿ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಬಗ್ಗೆ ಚಿತ್ರತಂಡದ ಕಡೆಯಿಂದ ಇನ್ನಷ್ಟೇ ಅಧಿಕೃತ ಮಾಹಿತಿ ಸಿಗಬೇಕಿದೆ.
ಇದನ್ನೂ ಓದಿ:
ವಿದೇಶದಲ್ಲಿದ್ದಾರಾ ಸಲ್ಮಾನ್ ಖಾನ್ ಪತ್ನಿ ನೂರ್ ಮತ್ತು 17 ವರ್ಷದ ಮಗಳು? ಹೊಸ ರಹಸ್ಯ
ಮೈ ಕಾಣುವಂತೆ ಬಟ್ಟೆ ಧರಿಸಿ ಬಂದಿದ್ದ ಕತ್ರಿನಾ ಕೈಫ್ ಜೊತೆ ಈ ರೀತಿ ನಡೆದುಕೊಂಡಿದ್ರಾ ಸಲ್ಮಾನ್ ಖಾನ್?