Salman Khan: ‘ಮಹಿಳೆಯರು ದೇಹ ಮುಚ್ಚಿಕೊಂಡಷ್ಟೂ ಉತ್ತಮ’: ಚರ್ಚೆ ಹುಟ್ಟುಹಾಕಿದ ಸಲ್ಮಾನ್​ ಖಾನ್​ ಹೇಳಿಕೆ

|

Updated on: Apr 30, 2023 | 1:59 PM

Aap ki Adalat: ‘ಒಂದು ಡೀಸೆಂಟ್​ ಸಿನಿಮಾ ಮಾಡಿದಾಗ ಇಡೀ ಕುಟುಂಬದವರು ಬಂದು ನೋಡುತ್ತಾರೆ. ಅದರಲ್ಲಿ ಯಾವುದೇ ದ್ವಂದ್ವ ನೀತಿ ಇಲ್ಲ’ ಎಂದು ಸಲ್ಮಾನ್​ ಖಾನ್​ ಹೇಳಿದ್ದಾರೆ.

Salman Khan: ‘ಮಹಿಳೆಯರು ದೇಹ ಮುಚ್ಚಿಕೊಂಡಷ್ಟೂ ಉತ್ತಮ’: ಚರ್ಚೆ ಹುಟ್ಟುಹಾಕಿದ ಸಲ್ಮಾನ್​ ಖಾನ್​ ಹೇಳಿಕೆ
ಸಲ್ಮಾನ್ ಖಾನ್
Follow us on

ಬೇರೆ ನಟರಿಗಿಂತ ಸಲ್ಮಾನ್​ ಖಾನ್ (Salman Khan)​ ಭಿನ್ನ. ತಮ್ಮ ಸಿನಿಮಾಗಳ ಶೂಟಿಂಗ್​ ಸೆಟ್​ನಲ್ಲಿ ಅವರು ಒಂದಷ್ಟು ನಿಯಮಗಳನ್ನು ವಿಧಿಸುತ್ತಾರೆ ಎಂಬ ಮಾತಿದೆ. ಅದರಲ್ಲೂ ಮಹಿಳೆಯರ ಬಟ್ಟೆ ವಿಚಾರದಲ್ಲಿ ಅವರು ಕೊಂಚ ಕಟ್ಟುನಿಟ್ಟು ಎಂಬ ಸುದ್ದಿ ಕೂಡ ಹರಡಿದೆ. ಕೆಲವೇ ದಿನಗಳ ಹಿಂದೆ ನಟಿ ಪಲಕ್​ ತಿವಾರಿ (Palak Tiwari) ಅವರು ಈ ಕುರಿತು ನೀಡಿದ ಹೇಳಿಕೆ ವೈರಲ್​ ಆಗಿತ್ತು. ಆದರೆ ನಂತರದ ದಿನಗಳಲ್ಲಿ ಅವರು ತಮ್ಮ ಹೇಳಿಕೆಗೆ ಬೇರೆ ರೀತಿಯ ಸಮರ್ಥನೆ ನೀಡಲು ಪ್ರಯತ್ನಿಸಿದ್ದರು. ಆದರೆ ಈಗ ಸ್ವತಃ ಸಲ್ಮಾನ್​ ಖಾನ್​ ಅವರು ಈ ವಿಚಾರದ ಬಗ್ಗೆ ಮೌನ ಮುರಿದಿದ್ದಾರೆ. ಮಹಿಳೆಯರ ಬಟ್ಟೆ (Dress Code) ಬಗ್ಗೆ ತಮಗೆ ಇರುವ ಅಭಿಪ್ರಾಯ ಏನು ಎಂಬುದನ್ನು ಅವರು ಬಹಿರಂಗವಾಗಿ ಹೇಳಿದ್ದಾರೆ. ಅವರ ಈ ಹೇಳಿಕೆ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಇತ್ತೀಚೆಗೆ ಸಲ್ಮಾನ್​ ಖಾನ್​ ಅವರು ‘ಆಪ್​ ಕಿ ಅದಾಲತ್​’ ಶೋನಲ್ಲಿ ಭಾಗವಹಿಸಿದ್ದರು. ಆಗ ಅವರಿಗೆ ಈ ಬಗ್ಗೆ ಪ್ರಶ್ನೆ ಎದುರಾಯಿತು. ಅದಕ್ಕೆ ಅವರು ನೇರವಾಗಿ ಉತ್ತರ ನೀಡಿದ್ದಾರೆ. ‘ಒಂದು ಡೀಸೆಂಟ್​ ಸಿನಿಮಾ ಮಾಡಿದಾಗ ಇಡೀ ಕುಟುಂಬದವರು ಬಂದು ನೋಡುತ್ತಾರೆ. ಅದರಲ್ಲಿ ಯಾವುದೇ ದ್ವಂದ್ವ ನೀತಿ ಇಲ್ಲ. ಮಹಿಳೆಯ ದೇಹ ಬಹಳ ಮೌಲ್ಯಯುತವಾದ್ದದ್ದು ಅಂತ ನಾನು ಭಾವಿಸಿದ್ದೇನೆ. ಹಾಗಾಗಿ ಹೆಚ್ಚು ದೇಹ ಮುಚ್ಚಿಕೊಂಡಷ್ಟೂ ಒಳ್ಳೆಯದು ಎಂದು ನನಗೆ ಅನಿಸುತ್ತದೆ’ ಎಂದಿ​ದ್ದಾರೆ ಸಲ್ಮಾನ್​ ಖಾನ್​.

Salman Khan: ಒಂದು ದಿನದ ಮಟ್ಟಿಗೆ ತಮ್ಮ ಪ್ರೀತಿಯ ವಸ್ತುವನ್ನು ಆಮಿರ್​ ಖಾನ್​ಗೆ ನೀಡಿದ ಸಲ್ಮಾನ್​ ಖಾನ್​

ಇದನ್ನೂ ಓದಿ
ಸಲ್ಮಾನ್ ಖಾನ್​ಗೆ ಹ್ಯಾಂಡ್​​ಶೇಕ್ ಮಾಡಲು ಬಂದ ಅಭಿಮಾನಿ; ಸಿಟ್ಟಿನಿಂದ ತಳ್ಳಿದ ಸಲ್ಲು ಬಾಡಿಗಾರ್ಡ್​
Ayush Sharma: ಅರ್ಪಿತಾ ಖಾನ್​ ರೀತಿ ಇರುವ ಹುಡುಗಿಯನ್ನು ಸಲ್ಲು ಹೀರೋಯಿನ್​ ಮಾಡಿಕೊಳ್ತಾರಾ? ನೆಟ್ಟಿಗರ ಪ್ರಶ್ನೆ
Kisi Ka Bhai Kisi Ki Jaan: ಸೋಮವಾರದ ಪರೀಕ್ಷೆಯಲ್ಲಿ ಸಲ್ಲು ಸಿನಿಮಾ ಪಾಸ್​; 100 ಕೋಟಿ ರೂ. ಗಡಿ ಮುಟ್ಟಲು ಇನ್ನೆಷ್ಟು ಬಾಕಿ?
Salman Khan: ‘ಫ್ಯಾಮಿಲಿ ಎಂಟರ್​ಟೇನರ್​’; ‘ಕಿಸಿ ಕ ಭಾಯ್ ಕಿಸಿ ಕಿ ಜಾನ್​’ ನೋಡಿ ವಿಮರ್ಶೆ ತಿಳಿಸಿದ ಫ್ಯಾನ್ಸ್

‘ಸಮಸ್ಯೆ ಇರುವುದು ಹುಡುಗಿಯರಲ್ಲಿ ಅಲ್ಲ. ಸಮಸ್ಯೆ ಇರುವುದು ಹುಡುಗರಲ್ಲಿ. ನಿಮ್ಮ ತಾಯಿ, ತಂಗಿ, ಪತ್ನಿಯನ್ನು ಹುಡುಗರು ಆ ದೃಷ್ಟಿಯಿಂದ ನೋಡುವುದು ನನಗೆ ಇಷ್ಟ ಆಗುವುದಿಲ್ಲ’ ಎಂದು ಸಲ್ಮಾನ್​ ಖಾನ್​ ಹೇಳಿದ್ದಾರೆ. ಸಲ್ಲು ನಟನೆಯ ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯಿತು. ಆ ಸಿನಿಮಾದಲ್ಲಿ ನಟಿಸಿದ ಪಲಕ್​ ತಿವಾರಿ ಅವರು ಸಂದರ್ಶನವೊಂದರಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಬಳಿಕ ಇಷ್ಟೆಲ್ಲ ಚರ್ಚೆ ಆರಂಭ ಆಗಿತ್ತು.

ಬಾಲಿವುಡ್​ನಲ್ಲಿ ಸಲ್ಮಾನ್​ ಖಾನ್​ ಅವರಿಗೆ ಸಖತ್ ಬೇಡಿಕೆ ಇದೆ. ‘ಟೈಗರ್​ 3’ ಸಿನಿಮಾದ ಕೆಲಸಗಳಲ್ಲಿ ಅವರು ನಿರತರಾಗಿದ್ದಾರೆ. ಈ ನಡುವೆ ಅವರಿಗೆ ಬೆದರಿಕೆ ಕರೆಗಳು ಕೂಡ ಹೆಚ್ಚಾಗಿವೆ. ಹಾಗಾಗಿ ತಮ್ಮ ಸುರಕ್ಷತೆ ಬಗ್ಗೆ ಅವರು ಗಮನ ಹರಿಸಿದ್ದಾರೆ. ಇತ್ತೀಚೆಗೆ ಸಲ್ಮಾನ್​ ಖಾನ್​ ಅವರು ಹೊಸ ಬುಲೆಟ್​ ಪ್ರೂಫ್​ ಕಾರು ಖರೀದಿಸಿದ ಬಗ್ಗೆ ಸುದ್ದಿ ಆಗಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.