‘ಎಲ್ಲಾ ದುಡ್ಡಿಗಾಗಿ’; ವೇದಿಕೆ ಮೇಲೆ ರಶ್ಮಿಕಾ ಕಾಲೆಳೆದ ಸಲ್ಮಾನ್ ಖಾನ್
ಐಫಾ 2027ರ ಪತ್ರಿಕಾಗೋಷ್ಠಿಯಲ್ಲಿ ಸಲ್ಮಾನ್ ಖಾನ್ ನಟಿ ರಶ್ಮಿಕಾ ಮಂದಣ್ಣ ಅವರ ಕಾಲೆಳೆದಿದ್ದಾರೆ. ಹಣಕ್ಕಾಗಿ ಬಂದಿದ್ದೀರಾ ಎಂದು ಕೇಳಿ ನಗು ತರಿಸಿದರು. ಅಬುಧಾಬಿಯಲ್ಲಿ ನಡೆಯಲಿರುವ ಈ ವೈಭವೋಪೇತ ಚಿತ್ರೋತ್ಸವದಲ್ಲಿ ಸ್ಟಾರ್ ನಟರ ಜೊತೆಗೆ ತಂತ್ರಜ್ಞರ ಕೆಲಸವನ್ನು ಕೊಂಡಾಡಲಾಗುವುದು ಎಂದು ವರುಣ್ ಧವನ್ ಈ ವೇಳೆ ಸ್ಪಷ್ಟಪಡಿಸಿದರು.

ಮುಖ್ಯಾಂಶಗಳು
- ರಶ್ಮಿಕಾ ಮಂದಣ್ಣ ಕಾಲೆಳೆದ ಬಾಲಿವುಡ್ ಭಾಯಿಜಾನ್
- ಸಲ್ಮಾನ್ ಖಾನ್ ತಮಾಷೆ
- ಐಫಾ 2027 ಪ್ರೆಸ್‌ಮೀಟ್
ಅಬುಧಾಬಿಯಲ್ಲಿ ನಡೆದ ಐಫಾ 2027 ಸುದ್ದಿಗೋಷ್ಠಿಯಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತಮ್ಮ ಎಂದಿನ ಹಾಸ್ಯಪ್ರಜ್ಞೆಯಿಂದ ಎಲ್ಲರ ಗಮನ ಸೆಳೆದಿದ್ದಾರೆ. ಈ ವಿಶೇಷ ಸುದ್ದಿಗೋಷ್ಠಿಯಲ್ಲಿ ಕರೀನಾ ಕಪೂರ್, ಶಾಹಿದ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ದಿಗ್ಗಜರು ಭಾಗವಹಿಸಿದ್ದರು. ಸಲ್ಮಾನ್ ಖಾನ್ ಅವರ ತಮಾಷೆಯ ಮಾತುಗಳು ಹಾಗೂ ವರುಣ್ ಧವನ್ ಜೊತೆಗಿನ ಡ್ಯಾನ್ಸ್ ಕಾರ್ಯಕ್ರಮದ ಮೆರುಗು ಹೆಚ್ಚಿಸಿತು.
ಕಾರ್ಯಕ್ರಮದ ವೇಳೆ ನಿರೂಪಣೆಯ ಬಗ್ಗೆ ವರುಣ್ ಧವನ್‌ಗೆ ಸಲ್ಮಾನ್ ಖಾನ್ ತಮಾಷೆಯ ಸಲಹೆ ನೀಡಿದರು. ‘ಆರು ಗಂಟೆಗಳ ಕಾಲ ನಿರೂಪಣೆ ಮಾಡುವುದನ್ನು ಬಿಟ್ಟು ಕೇವಲ ಡ್ಯಾನ್ಸ್ ಮಾಡಿ ಹೊರಟುಹೋಗಿ’ ಎಂದು ಟಿಪ್ಸ್ ಕೊಟ್ಟರು. ವರುಣ್ ಧವನ್, ಕರಣ್ ಜೋಹರ್ ಹಾಗೂ ಅನನ್ಯ ಪಾಂಡೆ ಈ ಬಾರಿಯ ಐಫಾ ಅವಾರ್ಡ್ಸ್ ನಿರೂಪಣೆ ಮಾಡಲಿದ್ದಾರೆ.
ಇದೇ ವೇದಿಕೆಯಲ್ಲಿ ರಶ್ಮಿಕಾ ಮಂದಣ್ಣ ತಮ್ಮ ಮೊದಲ ಐಫಾ ಅನುಭವದ ಬಗ್ಗೆ ಮಾತನಾಡುತ್ತಾ ಸಖತ್ ಥ್ರಿಲ್ ಆಗಿರುವುದಾಗಿ ತಿಳಿಸಿದರು. ಸಾಮಾನ್ಯವಾಗಿ ಎಲ್ಲಾ ಸೆಲೆಬ್ರಿಟಿಗಳು ಈ ರೀತಿಯ ವೇದಿಕೆ ಏರೋದು ಹಣಕ್ಕಾಗಿ. ಆದರೆ, ಎಲ್ಲರೂ ಇದನ್ನು ಓಪನ್ ಆಗಿ ಹೇಳಿಕೊಳ್ಳೋದಿಲ್ಲ. ಆದರೆ, ಸಲ್ಲು ಈ ವಿಷಯವನ್ನು ನೇರವಾಗಿ ಹೇಳಿದ್ದಾರೆ.
‘ನಾನು ಎಗ್ಸೈಟ್ ಆಗಿದ್ದೇನೆ’ ಎಂದು ರಶ್ಮಿಕಾ ಹೇಳುತ್ತಿದ್ದಂತೆ ಪಕ್ಕದಲ್ಲೇ ನಿಂತಿದ್ದ ಸಲ್ಮಾನ್ ಖಾನ್, ರಶ್ಮಿಕಾ ಹಣಕ್ಕಾಗಿ ಬಂದಿದ್ದಾರೆ ಎಂಬಂತೆ ತಮಾಷೆಯ ಸನ್ನೆ ಮಾಡಿದರು. ಸಲ್ಮಾನ್ ಅವರ ಈ ತಮಾಷೆಯ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಅಭಿಮಾನಿಗಳು ಈ ವಿಡಿಯೋವನ್ನು ನೋಡಿ ನಕ್ಕಿದ್ದಾರೆ.
A fun bunter between Salman Khan and rashmika mandanna at #IIFA2027
Reporter – Rashmika this is your first time and why you took so long to actually join iifa family?
#SalmanKhan – Tell that because of Sikandar🤣
#RashmikaMandanna – This is my first season and I’m excited..
Salman – For Money? 😭
— MASS (@Freak4Salman) October 22, 2026
ಇನ್ನು ಈ ಬಾರಿಯ ಐಫಾ ಡಿಜಿಟಲ್ ಅವಾರ್ಡ್ಸ್ ನಿರೂಪಣೆಯ ಜವಾಬ್ದಾರಿಯನ್ನು ನಟ ಪಂಕಜ್ ತ್ರಿಪಾಠಿ ವಹಿಸಿಕೊಂಡಿದ್ದಾರೆ. ಮಿರ್ಜಾಪುರ್ ಖ್ಯಾತಿಯ ಅಲಿ ಫಜಲ್ ಮತ್ತು ಅಭಿಷೇಕ್ ಬ್ಯಾನರ್ಜಿ ಜೊತೆಗೂಡಿ ಅವರು ಮೊದಲ ಬಾರಿಗೆ ಹೋಸ್ಟ್ ಮಾಡಲಿದ್ದಾರೆ.
ಇದನ್ನೂ ಓದಿ: ‘ಮದುವೆ ಆಗು ಪ್ಲೀಸ್’ ಅಂತ ವಿಜಯ್ ಬಳಿ 100 ಬಾರಿ ಕೇಳಿಕೊಂಡಿದ್ದ ರಶ್ಮಿಕಾ ಮಂದಣ್ಣ
ಅಬುಧಾಬಿಯ ಯಸ್ ಐಲ್ಯಾಂಡ್‌ನಲ್ಲಿರುವ ಇತಿಹಾದ್ ಅರೆನಾದಲ್ಲಿ ಜನವರಿ 22 ಮತ್ತು 23 ರಂದು ಈ ಮಹಾಸಂಗಮ ನಡೆಯಲಿದೆ. ಸಲ್ಮಾನ್, ಕರೀನಾ, ಶಾಹಿದ್ ಹಾಗೂ ರಶ್ಮಿಕಾ ಅವರ ಅದ್ಭುತ ನೃತ್ಯ ಪ್ರದರ್ಶನಗಳು ಈ ಬಾರಿಯ ವೇದಿಕೆಯ ಮುಖ್ಯ ಆಕರ್ಷಣೆಯಾಗಲಿವೆ. ಬಾಲಿವುಡ್‌ನ ಈ ಅತಿ ದೊಡ್ಡ ಚಿತ್ರೋತ್ಸವಕ್ಕಾಗಿ ಸಿನಿಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




