‘ಶಿವ ಕಾರ್ತಿಕೇಯ ಸೆಟ್​ಗೆ ಬೇಗ ಬಂದರೂ ಸಿನಿಮಾ ಫ್ಲಾಪ್ ಆಯ್ತು’; ಮುರುಗದಾಸ್​ಗೆ ಸಲ್ಲು ಟಾಂಗ್

ಬಿಗ್ ಬಾಸ್ 19 ರಲ್ಲಿ ಸಲ್ಮಾನ್ ಖಾನ್ ವೈಯಕ್ತಿಕ ವಿವಾದಗಳಿಗೆ ಸ್ಪಷ್ಟನೆ ನೀಡುತ್ತಿದ್ದಾರೆ. ವೀಕೆಂಡ್ ಕಾ ವಾರ್ ಸಂಚಿಕೆಯಲ್ಲಿ, ಅವರು ದಬಾಂಗ್ ನಿರ್ದೇಶಕ ಅಭಿನವ್ ಕಶ್ಯಪ್, ಗಾಯಕ ಅರಿಜಿತ್ ಸಿಂಗ್ ಮತ್ತು ಸಿಕಂದರ್ ನಿರ್ದೇಶಕ ಎ.ಆರ್. ಮುರುಗದಾಸ್ ಅವರೊಂದಿಗಿನ ಭಿನ್ನಾಭಿಪ್ರಾಯಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

‘ಶಿವ ಕಾರ್ತಿಕೇಯ ಸೆಟ್​ಗೆ ಬೇಗ ಬಂದರೂ ಸಿನಿಮಾ ಫ್ಲಾಪ್ ಆಯ್ತು’; ಮುರುಗದಾಸ್​ಗೆ ಸಲ್ಲು ಟಾಂಗ್
ಸಲ್ಮಾನ್-ಮುರುಗದಾಸ್
Edited By:

Updated on: Oct 15, 2025 | 7:54 AM

‘ಬಿಗ್ ಬಾಸ್ ಹಿಂದಿ ಸೀಸನ್ 19′ ಆರಂಭವಾದಾಗಿನಿಂದ, ನಿರೂಪಕ ಸಲ್ಮಾನ್ ಖಾನ್ ವಿವಿಧ ಕಾರಣಗಳಿಗಾಗಿ ಸುದ್ದಿಯಲ್ಲಿದ್ದಾರೆ. ‘ವೀಕೆಂಡ್ ಕಾ ವಾರ್’ ಸಂಚಿಕೆ ಪ್ರೇಕ್ಷಕರಲ್ಲಿ ವಿಶೇಷ ಕುತೂಹಲ ಮೂಡಿಸಿದೆ. ಏಕೆಂದರೆ ಈ ಸಂಚಿಕೆಯಲ್ಲಿ, ಸಲ್ಮಾನ್ (Salman Khan) ಸ್ಪರ್ಧಿಗಳಿಂದ ಉತ್ತಮ ಪಾಠ ಕಲಿಯುತ್ತಾರೆ ಮತ್ತು ಕೆಲವರು ಪ್ರಮುಖ ಸಲಹೆ ನೀಡುತ್ತಾರೆ. ಸಲ್ಮಾನ್ ಅವರ ಈ ವಿಶೇಷ ಸಂಚಿಕೆಯನ್ನು ವೀಕ್ಷಿಸಲು ಪ್ರೇಕ್ಷಕರು ಉತ್ಸುಕರಾಗಿದ್ದಾರೆ. ಆದರೆ ಕಳೆದ ಕೆಲವು ವಾರಗಳಿಂದ, ಸಲ್ಮಾನ್ ‘ವೀಕೆಂಡ್ ಕಾ ವಾರ್’ನಲ್ಲಿ ತಮ್ಮ ವೈಯಕ್ತಿಕ ವಿವಾದಗಳ ಬಗ್ಗೆ ಪ್ರತಿಕ್ರಿಯಿಸಿಲು ಬಳಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

‘ದಬಾಂಗ್’ ನಿರ್ದೇಶಕ ಅಭಿನವ್ ಕಶ್ಯಪ್, ಗಾಯಕ ಅರಿಜಿತ್ ಸಿಂಗ್ ನಂತರ, ಈಗ ಅವರು ‘ಸಿಕಂದರ್’ ನಿರ್ದೇಶಕ ಎ.ಆರ್. ಮುರುಗದಾಸ್ ಅವರೊಂದಿಗಿನ ವಿವಾದಕ್ಕೆ ಬಿಗ್ ಬಾಸ್ ಸೆಟ್‌ಗಳಿಂದ ಪ್ರತಿಕ್ರಿಯಿಸಿದ್ದಾರೆ.

‘ದಬಾಂಗ್’ ನಿರ್ದೇಶಕ ಅಭಿನವ್ ಕಶ್ಯಪ್ ಸಲ್ಮಾನ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು . ‘ಸಲ್ಮಾನ್ ಒಬ್ಬ ಗ್ಯಾಂಗ್‌ಸ್ಟರ್, ಅವನು ಜನರ ವೃತ್ತಿಜೀವನವನ್ನು ಹಾಳುಮಾಡಿದ್ದಾನೆ’ ಎಂದು ಅವರು ಹೇಳಿದ್ದರು. ‘ವೀಕೆಂಡ್ ಕಾ ವಾರ್’ನ ಒಂದು ಸಂಚಿಕೆಯಲ್ಲಿ ಸಲ್ಮಾನ್ ಈ ಬಗ್ಗೆ ಮೌನ ಮುರಿದಿದ್ದರು. ‘ಅನೇಕ ಜನರ ವೃತ್ತಿಜೀವನವನ್ನು ಹಾಳುಮಾಡಿದ್ದಾನೆ ಎಂದು ನನ್ನ ಮೇಲೆ ಆರೋಪವಿದೆ. ಇದು ನನ್ನ ಕೈಯಲ್ಲಿಲ್ಲ’ ಎಂದು ಹೇಳಿದ್ದರು.

ಇದನ್ನೂ ಓದಿ
ಗಿಲ್ಲಿ ಜೊತೆಗಿನ ಗೆಳೆತನಕ್ಕಾಗಿ ಫಿನಾಲೆ ಚಾನ್ಸ್ ತ್ಯಾಗ ಮಾಡಿದ ಚಂದ್ರಪ್ರಭ?
ಮಂಗಳವಾರವೂ ‘ಕಾಂತಾರ: ಚಾಪ್ಟರ್ 1’ ಅಧಿಕ ಕಲೆಕ್ಷನ್; 500 ಕೋಟಿ ಇನ್ನೂ ಸನಿಹ
ಸ್ಪರ್ಧಿಗಳಿಗೆ ಕೊನೆಯ ಅವಕಾಶ ಕೊಟ್ಟ ‘ಬಿಗ್ ಬಾಸ್​’; ಮಾಡು ಇಲ್ಲವೇ ಮಡಿ
‘ಕಾಂತಾರ: ಚಾಪ್ಟರ್ 2’ ಯಾವಾಗ? ಕೊನೆಗೂ ಉತ್ತರಿಸಿದ ರಿಷಬ್ ಶೆಟ್ಟಿ

ಗಾಯಕ ಅರಿಜಿತ್ ಸಿಂಗ್ ಅವರೊಂದಿಗಿನ ತಮ್ಮ ವಾದಕ್ಕೆ ಅವರು ಪ್ರತಿಕ್ರಿಯಿಸಿದರು. 2014 ರಿಂದ ಇಬ್ಬರೂ ಭಿನ್ನಾಭಿಪ್ರಾಯ ಹೊಂದಿದ್ದರು. ‘ಅರಿಜಿತ್ ಮತ್ತು ನಾನು ಈಗ ಒಳ್ಳೆಯ ಸ್ನೇಹಿತರಾಗಿದ್ದೇವೆ. ನಮ್ಮ ನಡುವೆ ಸ್ವಲ್ಪ ತಪ್ಪು ತಿಳುವಳಿಕೆ ಇತ್ತು ಮತ್ತು ಆ ತಪ್ಪು ತಿಳುವಳಿಕೆ ನನ್ನಿಂದಲೇ ಉಂಟಾಗಿದೆ’ ಎಂದು ಸಲ್ಮಾನ್ ಸಾರ್ವಜನಿಕವಾಗಿ ಒಪ್ಪಿಕೊಂಡರು.

ಇದನ್ನೂ ಓದಿ: ‘ದಬಾಂಗ್’ ನಿರ್ದೇಶಕನ ಲೆಕ್ಕ ಚುಕ್ತ ಮಾಡಿದ ಸಲ್ಮಾನ್ ಖಾನ್

‘ಸಿಕಂದರ್’ ಚಿತ್ರದ ನಿರ್ದೇಶಕರು ಮಾಡಿದ ಟೀಕೆಗೆ ಸಲ್ಮಾನ್ ಪ್ರತಿಕ್ರಿಯಿಸಿದರು. ನಿರ್ದೇಶಕ ಎ.ಆರ್. ಮುರುಗದಾಸ್ ಅವರು ಸಲ್ಮಾನ್ ಸೆಟ್‌ಗೆ ತಡವಾಗಿ ಬರುತ್ತಿದ್ದರು, ಇದರಿಂದ ಸಿನಿಮಾ ಫ್ಲಾಪ್ ಆಯಿತು ಎಂದು ಆರೋಪಿಸಿದ್ದರು. ‘ಸಿಕಂದರ್ ವಿಫಲವಾಯಿತು ಎಂದು ಜನರು ಹೇಳುತ್ತಾರೆ. ಆದರೆ ನಾನು ಅದನ್ನು ನಂಬುವುದಿಲ್ಲ. ಅದರ ಕಥೆ ಚೆನ್ನಾಗಿತ್ತು. ನಾನು ತಡವಾಗಿ ಬಂದಿದ್ದರಿಂದ ಸಿನಿಮಾ ಫ್ಲಾಪ್ ಆಯಿತು ಎಂದು ಅವರು ಹೇಳುತ್ತಾರೆ. ಅವರ ಒಂದು ಚಿತ್ರ (ಮದರಾಸಿ) ಇತ್ತೀಚೆಗೆ ಬಿಡುಗಡೆಯಾಯಿತು. ಅದರ ನಟ ಬೆಳಿಗ್ಗೆ 6 ಗಂಟೆಗೆ ಸೆಟ್‌ಗೆ ಬರುತ್ತಿದ್ದರು. ಆದಾಗ್ಯೂ ಸಿನಿಮಾ ದೊಡ್ಡ ಮಟ್ಟದಲ್ಲಿ ಫ್ಲಾಪ್ ಆಯಿತು’ ಎಂದು ಅಣಕಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.