ಕತ್ರಿನಾ ಕೈಫ್ – ವಿಕ್ಕಿ ಕೌಶಲ್​ ಮದುವೆಗೆ ಸೆಕ್ಯುರಿಟಿ ಒದಗಿಸಲಿರುವ ಸಲ್ಮಾನ್​ ಖಾನ್​ ಬಾಡಿಗಾರ್ಡ್

| Updated By: Pavitra Bhat Jigalemane

Updated on: Dec 07, 2021 | 4:23 PM

ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್ ಮದುವೆಗೆ ಬಾಲಿವುಡ್ ಬಾದ್​ಶಾ ಸಲ್ಮಾನ್​ ಖಾನ್​ ಅವರ ವಯಕ್ತಿಕ ಬಾಡಿಗಾರ್ಡ್ ಗುರ್ಮಿತ್​ ಸಿಂಗ್(ಶೇರಾ) ಭದ್ರತೆ ಒದಗಿಸುತ್ತಿದ್ದಾರೆ. ರಾಜಸ್ಥಾನದ ಸಾವಿ ಮಾಧೊಪುರದಲ್ಲಿರುವ ಸಿಕ್ಸ್ ಸೆನ್ಸಸ್ ಪೋರ್ಟ್​ನಲ್ಲಿ ಕತ್ರಿನಾ ವಿಕ್ಕಿ ಕೌಶಲ್ ಮದುವೆ ನಡೆಯಲಿದೆ.

ಕತ್ರಿನಾ ಕೈಫ್ - ವಿಕ್ಕಿ ಕೌಶಲ್​ ಮದುವೆಗೆ ಸೆಕ್ಯುರಿಟಿ ಒದಗಿಸಲಿರುವ ಸಲ್ಮಾನ್​ ಖಾನ್​ ಬಾಡಿಗಾರ್ಡ್
ಬಾಡಿಗಾರ್ಡ್​ ಶೇರಾನೊಂದಿಗೆ ಸಲ್ಮಾನ್​ ಖಾನ್​
Follow us on

ಹಸಮಣೆ ಏರಲು ಸಜ್ಜಾದ ಬಾಲಿವುಡ್​ ಜೋಡಿ ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್ ಮದುವೆಗೆ ಬಾಲಿವುಡ್ ಬ್ಯಾಡ್​ಬಾಯ್​ ಸಲ್ಮಾನ್​ ಖಾನ್​ ಅವರ ವಯಕ್ತಿಕ ಬಾಡಿಗಾರ್ಡ್ ಗುರ್ಮಿತ್​ ಸಿಂಗ್(ಶೇರಾ) ಭದ್ರತೆ ಒದಗಿಸುತ್ತಿದ್ದಾರೆ. ರಾಜಸ್ಥಾನದ ಸಾವಿ ಮಾಧೊಪುರದಲ್ಲಿರುವ ಸಿಕ್ಸ್ ಸೆನ್ಸಸ್ ಪೋರ್ಟ್​ನಲ್ಲಿ ಕತ್ರಿನಾ ವಿಕ್ಕಿ ಕೌಶಲ್ ಮದುವೆ ನಡೆಯಲಿದೆ. ಡಿ.9ರಂದು ಮದುವೆ ನಡೆಯಲಿದೆ. ಈಗಾಗಲೇ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್​ ಸೇರಿದಂತೆ ಅವರ ಕುಟುಂಬ ರಾಜಸ್ಥಾನಕ್ಕೆ ತೆರಳಿದೆ. ರಾಜಸ್ಥಾನದ ಸಿಕ್ಸ್ ಸೆನ್ಸಸ್ ಪೋರ್ಟ್ ಖಾಸಗಿ ಹೊಟೇಲ್​ನಲ್ಲಿ ಮದುವೆಗೆ ಅದ್ದೂರಿ ತಯಾರಿ ನಡೆದಿದೆ.

ನಾಳೆ ಮೆಹಂದಿ ಕಾರ್ಯಕ್ರಮ ನಡೆಯಲಿದೆ.  ಇಂದು ಸಂಗೀತ ಕಾರ್ಯಕ್ರಮ ನಡೆಯಲಿದ್ದು, ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧವಾಗಿರುವ ಕತ್ರಿನಾ ಕೈಪ್​ ಹಾಘೂ ವಿಕ್ಕಿ ಕೌಶಲ್​ ಹೆಜ್ಜೆ ಹಾಕಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ನಟ ಸಲ್ಮಾನ್​ ಖಾನ್ ವಯಕ್ತಿಕ ಬಾಡಿಗಾರ್ಡ್​ ಸೆಕ್ಯುರಿಟಿ ನೀಡಲಿದ್ದಾರೆ. ಶೇರಾ ತಮ್ಮದೇ ಆದ ಸೆಕ್ಯುರಿಟಿ ತಂಡವನ್ನು ಹೊಂದಿದ್ದಾರೆ. ಆ ಮೂಲಕ ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ಮದುವೆಗೆ ಭದ್ರತೆ ನೀಡುತ್ತಿದ್ದಾರೆಇದರ ಜತೆಗೆ  ಡಿ.9ರವರೆಗೆ ವಿವಾಹ ನಡೆಯುವ ಸ್ಥಳದ ಸುತ್ತಮುತ್ತ ಭದ್ರತೆ ಒದಗಿಸಲಾಗಿದೆ. ಕತ್ರಿನಾ ವಿಕ್ಕಿ ಮದುವೆಗೆ 120 ಜನರನ್ನು ಮಾತ್ರ ಆಹ್ವಾನಿಸಲಾಗಿದೆ. ಮದುವೆಯ ಬಳಿಕ ಮುಂಬೈನಲ್ಲಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕತ್ರಿನಾ ಕೈಫ್ ಹಾಗೂ ಅವರ ಕುಟುಂಬ ಸಲ್ಮಾನ್​ ಖಾನ್​ ಜತೆ ಉತ್ತಮ ಬಾಂದವ್ಯ ಹೊಂದಿದ್ದಾರೆ. ಆದರೂ ತಮಗೆ ಮದುವೆಗೆ ಆಹ್ವಾನ ನೀಡಲಿಲ್ಲ ಎಂದು ಸಲ್ಮಾನ್​ ಸಹೋದರಿ ಅರ್ಪಿತಾ ಆರೋಪಿಸಿದ್ದಾರೆ. ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ಮದುವೆಗೆ ಇಟಲಿಯಂದ ವಿಶೇಷವಾಗಿ​ ವೆಡ್ಡಿಂಗ್​ ಕೇಕ್​ ತರಿಸಲಾಗುತ್ತಿದೆ.

ಇನ್ನು ಇವರ ಮದುವೆಯ ವಿಶೇಷವೆಂದರೆ, ಆಹ್ವಾನಿತರಿಗೆ  ಸಮಾರಂಭದಲ್ಲಿ ಮೊಬೈಲ್​ ಬಳಸುವಂತಿಲ್ಲ ಎಂದು ನಿಯಮ ಜಾರಿ ಮಾಡಲಾಗಿದೆ. ಜತೆಗೆ ಯಾವುದೇ ರೀತಿಯ ಫೋಟೋ ಅಥವಾ ವೀಡಿಯೋಗಳನ್ನು ತೆಗೆಯುವುವಂತಿಲ್ಲ , ಯಾವುದೇ ರೀತಿಯ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವಂತಿಲ್ಲ ಹಾಗೂ ಸಮಾರಂಭದಲ್ಲಿ ಇರುವಷ್ಟು ಹೊತ್ತು ಹೊರಗಿನವರೊಂದಿಗೆ ಸಂಪರ್ಕದಲ್ಲಿ ಇರುವಂತಿಲ್ಲ ಎಂದು ಆದೇಶಿಸಲಾಗಿದೆ. ​​

ಇದನ್ನೂ ಓದಿ:

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜು: ರಾಜಸ್ಥಾನ ತೆರಳಿದ ಬಾಲಿವುಡ್​ ಜೋಡಿ ಕತ್ರಿನಾ -ವಿಕ್ಕಿ ಕೌಶಲ್

Katrina Kaif- Vicky Kaushal: ಕತ್ರೀನಾ- ವಿಕ್ಕಿ ಕೌಶಲ್​ಗೆ ಒಟಿಟಿಯಿಂದ 100 ಕೋಟಿ ರೂಪಾಯಿಯ ಆಫರ್​; ಏಕೆ ಗೊತ್ತಾ?