Katrina Kaif- Vicky Kaushal: ಕತ್ರೀನಾ- ವಿಕ್ಕಿ ಕೌಶಲ್​ಗೆ ಒಟಿಟಿಯಿಂದ 100 ಕೋಟಿ ರೂಪಾಯಿಯ ಆಫರ್​; ಏಕೆ ಗೊತ್ತಾ?

ಡಿಸೆಂಬರ್​ 9ರಂದು ರಾಜಸ್ಥಾನದಲ್ಲಿ ಮದುವೆ ಆಗಲಿರುವ ಕತ್ರೀನಾ ಕೈಫ್- ವಿಕ್ಕಿ ಕೌಶಲ್​ಗೆ ಒಟಿಟಿಯಿಂದ 100 ಕೋಟಿ ರೂಪಾಯಿಯ ಆಫರ್ ಬಂದಿದೆ. ಅದು ಏಕೆ ಗೊತ್ತೆ? ಈ ಲೇಖದಲ್ಲಿದೆ ವಿವರ.

Katrina Kaif- Vicky Kaushal: ಕತ್ರೀನಾ- ವಿಕ್ಕಿ ಕೌಶಲ್​ಗೆ ಒಟಿಟಿಯಿಂದ 100 ಕೋಟಿ ರೂಪಾಯಿಯ ಆಫರ್​; ಏಕೆ ಗೊತ್ತಾ?
ವಿಕ್ಕಿ ಕೌಶಲ್- ಕತ್ರೀನಾ ಕೈಫ್
Follow us
TV9 Web
| Updated By: Digi Tech Desk

Updated on:Dec 07, 2021 | 2:50 PM

ಬಾಲಿವುಡ್ ತಾರೆಗಳಾದ ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ಡಿಸೆಂಬರ್ 9ನೇ ತಾರೀಕಿನಂದು ರಾಜಸ್ಥಾನದಲ್ಲಿ ಅದ್ಧೂರಿ ವಿವಾಹ ಆಗಲಿದ್ದಾರೆ ಎಂಬ ವದಂತಿ ಇದೆ. ಅವರು ತಮ್ಮ ಮದುವೆಯ ದೃಶ್ಯಗಳಿಗೆ ವಿಶೇಷ ಪ್ರವೇಶ ನೀಡುವುದಕ್ಕಾಗಿ ಒಟಿಟಿ (OTT- ಓವರ್ ದ ಟಾಪ್) ಪ್ಲಾಟ್‌ಫಾರ್ಮ್‌ನಿಂದ 100 ಕೋಟಿ ರೂಪಾಯಿಗಳನ್ನು ಆಫರ್ ಮಾಡಲಾಗಿದೆ ಎಂದು ಪಿಂಕ್ ವಿಲ್ಲಾ ವರದಿ ಮಾಡಿದೆ. ಸವಾಯಿ ಮಾಧೋಪುರದ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ವಿವಾಹ ಆಗಲಿರುವ ಈ ಸೆಲೆಬ್ರಿಟಿ ಜೋಡಿಗಳು ಪ್ರಸ್ತಾಪವನ್ನು ಸ್ವೀಕರಿಸುತ್ತಾರೆಯೇ ಮತ್ತು ತಮ್ಮ ವಿವಾಹದ ತುಣುಕನ್ನು ಪ್ರಸಾರ ಮಾಡಲು OTT ಪ್ಲಾಟ್‌ಫಾರ್ಮ್​ಗೆ ಅನುಮತಿಸುತ್ತಾರೆಯೇ ಎಂಬುದು ಇನ್ನೂ ತಿಳಿದಿಲ್ಲ. ಆದರೆ ಇದು ಸೆಲೆಬ್ರಿಟಿ ಜೋಡಿಗಳಲ್ಲಿ ಸಾಮಾನ್ಯವಾಗಿದೆ ಎಂದು ಮೂಲಗಳು ತಿಳಿಸಿವೆ. ಪಾಶ್ಚಾತ್ಯರು ತಮ್ಮ ಮದುವೆಯ ದೃಶ್ಯದ ತುಣುಕನ್ನು ಪಾಪರಾಜಿಗಳಿಗೆ ಮಾರುತ್ತಾರೆ.

ಪಿಂಕ್ ವಿಲ್ಲಾ ವರದಿಯು ಮೂಲಗಳನ್ನು ಉಲ್ಲೇಖಿಸಿ, ಸೆಲೆಬ್ರಿಟಿಗಳು ತಮ್ಮ ಮದುವೆಯ ದೃಶ್ಯಗಳು ಮತ್ತು ಚಿತ್ರಗಳನ್ನು ನಿಯತಕಾಲಿಕೆಗಳಿಗೆ ಮತ್ತು ಕೆಲವೊಮ್ಮೆ ಚಾನಲ್‌ಗಳಿಗೆ ಮಾರಾಟ ಮಾಡುವುದು ಪಾಶ್ಚಿತ್ಯ ದೇಶಗಳಲ್ಲಿ ಸಾಮಾನ್ಯ ಟ್ರೆಂಡ್ ಆಗಿದೆ. ಏಕೆಂದರೆ ಆ ಮದುವೆಗಳನ್ನು ನೋಡಲು ಬಯಸುವ ಬಹಳಷ್ಟು ಅಭಿಮಾನಿಗಳು ಇದ್ದಾರೆ. ಇದೀಗ ಒಟಿಟಿಗಳು ಭಾರತದಲ್ಲಿಯೂ ಅದೇ ಟ್ರೆಂಡ್​ ತರಲು ಯೋಜಿಸುತ್ತಿವೆ ಮತ್ತು ವಿವಾಹದ ದೃಶ್ಯಾವಳಿಗಳನ್ನು ಸೆರೆ ಹಿಡಿಯಲು ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್‌ಗೆ 100 ಕೋಟಿ ರೂಪಾಯಿ ಆಫರ್ ಮಾಡಲಾಗಿದೆ ಎಂದು ತಿಳಿಸಿದೆ.

ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ಇಬ್ಬರೂ 100 ಕೋಟಿ ರೂಪಾಯಿ ಒಪ್ಪಂದಕ್ಕೆ ಒಪ್ಪಿಕೊಂಡರೆ, ಅವರ ವಿವಾಹವನ್ನು OTT ಪ್ಲಾಟ್​ಫಾರ್ಮ್​ನಲ್ಲಿ ಚಲನಚಿತ್ರವಾಗಿ ಪ್ರಸ್ತುತಪಡಿಸಲಾಗುತ್ತದೆ ಎಂದು ವರದಿಯಾಗಿದೆ. ಮದುವೆ ಸಮಾರಂಭದ ತುಣುಕನ್ನು ಒಳಗೊಂಡಿರುವುದರ ಹೊರತಾಗಿ, ಕುಟುಂಬ, ಸ್ನೇಹಿತರು ಇತ್ಯಾದಿಗಳ ವಿಶೇಷ ಸಂದರ್ಶನಗಳನ್ನು ಸಹ ಒಳಗೊಂಡಿರುತ್ತದೆ.

ಬಾಲಿವುಡ್​ನ ತಾರಾ ದಂಪತಿಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು 2018ರಲ್ಲಿ ಮದುವೆ ಆದಾಗ ಇದೇ ರೀತಿಯ ಪ್ರಸ್ತಾಪವನ್ನು ನೀಡಲಾಯಿತು. ಆದರೆ ಅವರು ತಮ್ಮ ಮದುವೆಯನ್ನು ಖಾಸಗಿಯಾಗಿಡಲು ಬಯಸುವುದಾಗಿ ಹೇಳಿ, ಆಫರ್ ನಿರಾಕರಿಸಿದ್ದರು.

ಇದನ್ನೂ ಓದಿ: ಕತ್ರಿನಾ ಮದುವೆಗೆ ಗಾಜಿನ ಮಂಟಪ; 7 ಕುದುರೆಗಳ ಜತೆ ಎಂಟ್ರಿ ನೀಡಲಿರುವ ಮದುಮಗ ವಿಕ್ಕಿ ಕೌಶಲ್

Published On - 11:18 pm, Mon, 6 December 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ