ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜು: ರಾಜಸ್ಥಾನ ತೆರಳಿದ ಬಾಲಿವುಡ್​ ಜೋಡಿ ಕತ್ರಿನಾ -ವಿಕ್ಕಿ ಕೌಶಲ್​

Katrina Kaif - Vicky Kaushal Wedding: ಮದುವೆಯ ಪೂರ್ವ ತಯಾರಿಯಾಗಿ ಇಂದು ಮೆಹಂದಿ ಕಾರ್ಯಕ್ರಮಗಳು ನಡೆಯಲಿದೆ. ಬಾಲಿವುಡ್​ ಕ್ಯೂಟ್ ಜೋಡಿಯ ವಿವಾಹಕ್ಕೆ 120 ಜನರನ್ನು ಮಾತ್ರ ಆಹ್ವಾನಿಸಲಾಗಿದೆ. ಕರಣ್​ ಜೋಹರ್, ನೇಹಾ ದೂಪಿಯಾ, ಸಲ್ಮಾನ್ ಖಾನ್​ ಸೇರಿದಂತೆ ಒಟ್ಟು 120 ಮಂದಿಗೆ ಮಾತ್ರ ಮದುವೆಯಲ್ಲಿ ಭಾಗವಹಿಸಲು ಆಮಂತ್ರಿಸಲಾಗಿದೆ.

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜು: ರಾಜಸ್ಥಾನ ತೆರಳಿದ ಬಾಲಿವುಡ್​ ಜೋಡಿ ಕತ್ರಿನಾ -ವಿಕ್ಕಿ ಕೌಶಲ್​
ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​
Follow us
TV9 Web
| Updated By: Pavitra Bhat Jigalemane

Updated on:Dec 07, 2021 | 1:21 PM

ಮುಂಬೈ:ಸಪ್ತತುದಿ ತುಳಿಯಲು ಸಿದ್ಧವಾಗಿರುವ ಬಾಲಿವುಡ್​ ನಟಿ ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ರಾಜಸ್ಥಾನಕ್ಕೆ ತೆರಳಿದ್ದಾರೆ. ಮುಂಬೈ ಏರ್ಪೋಟ್​ನಿಂದ ಹೆಲಿಕಾಪ್ಟರ್​ ಮೂಲಕ ನಿನ್ನೆ ರಾತ್ರಿ ಕತ್ರಿನಾ ಹಾಗೂ ವಿಕ್ಕಿಕೌಶಲ್​ ಕುಟುಂಬದೊಂದಿಗೆ ತೆರಳಿದ್ದಾರೆ. ಕತ್ರಿನಾ ನಿನ್ನೆ ವಿಮಾನ ನಿಲ್ದಾಣದಲ್ಲಿ ಹಳದಿ ಬಣ್ಣದ ಶರಾರಾ ಉಡುಗೆಯಲ್ಲಿ ಸಖತ್​ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಪ್ಯಾಷನ್​ ಡಿಸೈನರ್ ಅನಾಮಿಕ ಖನ್ನಾ ಅವರು ತಯಾರಿಸಿದ  ಉಡುಗೆಯಲ್ಲಿ ಕತ್ರಿನಾ ನಿನ್ನೆ ಕಾಣಿಸಿಕೊಂಡಿದ್ದರು. ರಾಜಸ್ಥಾನದ ಜೈಪುರ ಬಳಿಯ ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್ ಸೆನ್ಸಸ್​ ಪೋರ್ಟ್ ಖಾಸಗಿ ಹೋಟೆಲ್​ನಲ್ಲಿ ಬಾಲಿವುಡ್​ನ ಕ್ಯೂಟ್​ ಗರ್ಲ್ ಕತ್ರಿನಾ ಹಾಗೂ ಹ್ಯಾಂಡಸಮ್​ ಬಾಯ್​ ವಿಕ್ಕಿ ಕೌಶಲ್​ ಮದುವೆ ಡಿ.9ರಂದು ನಡೆಯಲಿದೆ. ಇದಕ್ಕಾಗಿ ರಾಜಸ್ಥಾನ ದಲ್ಲಿ ಅದ್ದೂರಿಯಾಗಿ ತಯಾರಿ ನಡೆಯುತ್ತಿದೆ.

ಮದುವೆಯ ಪೂರ್ವ ತಯಾರಿಯಾಗಿ ಇಂದು ಮೆಹಂದಿ ಹಾಗೂ ಅರಿಶಿನ ಕಾರ್ಯಕ್ರಮಗಳು ನಡೆಯಲಿದೆ. ಬಾಲಿವುಡ್​ ಕ್ಯೂಟ್ ಜೋಡಿಯ ವಿವಾಹಕ್ಕೆ 120 ಜನರನ್ನು ಮಾತ್ರ ಆಹ್ವಾನಿಸಲಾಗಿದೆ. ಕರಣ್​ ಜೋಹರ್, ನೇಹಾ ದೂಪಿಯಾ, ಸಲ್ಮಾನ್ ಖಾನ್​ ಸೇರಿದಂತೆ ಒಟ್ಟು 120 ಮಂದಿಗೆ ಮಾತ್ರ ಮದುವೆಯಲ್ಲಿ ಭಾಗವಹಿಸಲು ಆಮಂತ್ರಿಸಲಾಗಿದೆ.

ಹಲವು ದಿನಗಳ ಕಾಲ ಕತ್ರಿನಾ ಹಾಗೂ ವಿಕ್ಕಿ ಕೌಶಲ್​ ನಡುವಿನ ಸಂಬಂಧಗಳ ಬಗ್ಗೆ ಬಾಲಿವುಡ್​ ಅಂಗಳದಲ್ಲಿ ಗುಸುಗುಸು ಆರಂಭವಾಗಿತ್ತು. ಇದರ ನಡುವೆಯೇ ತಾವು ಪ್ರೀತಿಸಿರುವುದು ನಿಜ ಎಂದು ಹೇಳಿಕೊಂಡಿದ್ದರು. ಎಂದು ಕತ್ರಿನಾ ಹಾಗೂ ವಿಕ್ಕಿ ಕೌಶಲ್​ ಘೊಷಿಸಿ, ಹರಿದಾಡುತ್ತಿದ್ದ ವದಂತಿಗಳಿಗೆ ತೆರೆ ಎಳೆದಿದ್ದರು. ಇದೀಗ ಡಿ.9ರಂದು ಹಸೆಮಣೆ ಏರಲಿರುವ ಕತ್ರಿನಾ ಹಾಗೂ ವಿಕ್ಕಿಕೌಶಲ್​ ಮದುವೆ ತಯಾರಿ ಭರದಿಂದಲೇ ಸಾಗಿದೆ.

ಇಂದು ಮೆಹಂದಿ ಕಾರ್ಯಕ್ರಮದ ಬಳಿಕ ಸಂಗೀತ ಕಾರ್ಯಕ್ರಮ ಇರಲಿದ್ದು, ಕಾಲಾ ಚಶ್ಮಾ ಹಾಡಿಗೆ ಹಸಮಣೆ ಏರಲಿರುವ ಜೋಡಿ ಹೆಜ್ಜೆ ಹಾಕಲಿದ್ದಾರೆ. ವಿಕ್ಕಿ ಕತ್ರಿನಾ ಮದುವೆಗೆ ಇಟಲಿಯಿಂದ 5 ಹಂತದ ಕೇಕ್​ ತರಿಸಲಾಗಿದೆ. ಇಟಲಿಯ ಬಾಣಸಿಗರು ವಿಶೇಷವಾಗಿ ತಯಾರಿಸಿದ ನೀಲಿ ಮತ್ತು ಬಿಳಿ ಬಣ್ಣದ ಟಿಫಾನಿ ವೆಡ್ಡಿಂಗ್​ ಕೇಕ್​ ಅನ್ನು ವಿಕ್ಕಿ ಹಾಗೂ ಕತ್ರಿನಾ ಕತ್ತರಿಸಲಿದ್ದಾರೆ ಎಂದು ತಿಳಿದುಬಂದಿದೆ. ಮದುವೆಗೆ ಆಗಮಿಸುತ್ತಿರುವವರಿಗೆ ಕೋವಿಡ್​ ವ್ಯಾಕ್ಸಿನ್​ ಕಡ್ಡಾಯವಾಗಿದ್ದು, ಆರ್​ ಟಿ ಪಿಸಿಆರ್​ ನೆಗೆಟಿವ್​ ವರದಿ ತೆಗೆದುಕೊಂಡು ಬರುವಂತೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ:

ಹಣ ದ್ವಿಗುಣಗೊಳಿಸಿ ಕೊಡುವುದಾಗಿ ವಂಚನೆ! ಚಿತ್ರದುರ್ಗ ನಗರಸಭೆ ಸದಸ್ಯನ ವಿರುದ್ಧ ಎಫ್ಐಆರ್ ದಾಖಲು

ಕತ್ರೀನಾ- ವಿಕ್ಕಿ ಕೌಶಲ್​ಗೆ ಒಟಿಟಿಯಿಂದ 100 ಕೋಟಿ ರೂಪಾಯಿಯ ಆಫರ್​; ಏಕೆ ಗೊತ್ತಾ?

Published On - 11:17 am, Tue, 7 December 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ