ರಾ ಏಜೆಂಟ್​ ಆಗಲಿರುವ ರಣವೀರ್​ ಸಿಂಗ್​ಗೆ ಸಂಜಯ್​ ದತ್​ ವಿಲನ್; ಇದು ‘ಕೆಜಿಎಫ್​ 2’ ಎಫೆಕ್ಟ್​

|

Updated on: Jul 28, 2024 | 7:36 PM

ಸಂಜಯ್​ ದತ್​ ಅವರನ್ನು ವಿಲನ್​ ಪಾತ್ರದಲ್ಲಿ ನೋಡಲು ಪ್ರೇಕ್ಷಕರು ಇಷ್ಟಪಡುತ್ತಿದ್ದಾರೆ. ಹಾಗಾಗಿ ಅವರಿಗೆ ಅಂಥ ಪಾತ್ರಗಳೇ ಹೆಚ್ಚಾಗಿ ಸಿಗುತ್ತಿವೆ. ಈಗ ಅವರು ಬಾಲಿವುಡ್​ನ ಸ್ಟಾರ್​ ಹೀರೋಗಳ ಎದುರಲ್ಲೂ ನೆಗೆಟಿವ್​ ಪಾತ್ರ ಮಾಡಲು ಸಜ್ಜಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ರಣವೀರ್​ ಸಿಂಗ್​ ಅವರ ಹೊಸ ಚಿತ್ರಕ್ಕೆ ಸಂಜಯ್​ ದತ್​ ಖಳನಾಯಕ ಎಂದು ಹೇಳಲಾಗುತ್ತಿದೆ.

ರಾ ಏಜೆಂಟ್​ ಆಗಲಿರುವ ರಣವೀರ್​ ಸಿಂಗ್​ಗೆ ಸಂಜಯ್​ ದತ್​ ವಿಲನ್; ಇದು ‘ಕೆಜಿಎಫ್​ 2’ ಎಫೆಕ್ಟ್​
ರಣವೀರ್​ ಸಿಂಗ್​, ಸಂಜಯ್​ ದತ್​
Follow us on

ನಟ ಸಂಜಯ್​ ಸತ್​ ಅವರಿಗೆ ವೃತ್ತಿ ಬದುಕಿನಲ್ಲಿ ಇದು ಸೆಕೆಂಡ್​ ಇನ್ನಿಂಗ್ಸ್​ ಎಂದೇ ಹೇಳಬೇಕು. ಮೊದಲು ಹೀರೋ ಆಗಿ ಮಿಂಚುತ್ತಿದ್ದ ಅವರಿಗೆ ಈಗ ವಿಲನ್​ ಪಾತ್ರಗಳು ಹೆಚ್ಚಾಗಿ ಸಿಗುತ್ತಿವೆ. ಅದಕ್ಕೆಲ್ಲ ಕಾರಣ ಆಗಿದ್ದು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಎಂದರೆ ತಪ್ಪಿಲ್ಲ. ಕನ್ನಡದ ಆ ಸಿನಿಮಾದಲ್ಲಿ ಸಂಜಯ್​ ದತ್​ ಅವರು ಖಳನಾಯಕನ ಪಾತ್ರ ಮಾಡಿ ಸೈ ಎನಿಸಿಕೊಂಡರು. ಅವರು ಮಾಡಿದ ಅಧೀರನ ಪಾತ್ರ ಸಖತ್​ ಫೇಮಸ್​ ಆಯಿತು. ಈಗ ಅವರಿಗೆ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಬಾಲಿವುಡ್​ನಲ್ಲೂ ವಿಲನ್​ ಪಾತ್ರಗಳು ಹೇರಳವಾಗಿ ಸಿಗುತ್ತಿವೆ.

ನಟ ರಣವೀರ್​ ಸಿಂಗ್ ಅಭಿನಯಿಸಲಿರುವ ಹೊಸ ಸಿನಿಮಾದಲ್ಲಿ ಸಂಜಯ್​ ದತ್​ ಅವರು ವಿಲನ್​ ಆಗಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ರಣವೀರ್​ ಸಿಂಗ್​ ಅವರು ಇತ್ತೀಚೆಗಷ್ಟೇ ಹೊಸ ಸಿನಿಮಾ ಘೋಷಿಸಿದರು. ‘ಉರಿ’ ಖ್ಯಾತಿಯ ನಿರ್ದೇಶಕ ಆದಿತ್ಯ ಧಾರ್​ ಜೊತೆ ಅವರು ಹೊಸ ಸಿನಿಮಾ ಮಾಡುವುದು ಖಚಿತ ಆಗಿದೆ. ಇದೇ ಸಿನಿಮಾದಲ್ಲಿ ಸಂಜಯ್​ ದತ್​ ಕೂಡ ಇರಲಿದ್ದಾರೆ. ಪಾತ್ರಗಳ ವಿವರಗಳು ಹೊರಬರುತ್ತಿವೆ.

ರಣವೀರ್​ ಸಿಂಗ್​ಗೆ ಕಿಸ್ ಮಾಡಿದ್ರಾ ಕರಣ್ ಜೋಹರ್? ವೈರಲ್ ಆಗಿದೆ ವಿಡಿಯೋ

ಕೆಲವು ಮಾಧ್ಯಮಗಳಲ್ಲಿ ವರದಿ ಆಗಿರುವ ಪ್ರಕಾರ, ಹೊಸ ಸಿನಿಮಾದಲ್ಲಿ ರಣವೀರ್​ ಸಿಂಗ್ ಅವರು ರಾ ಏಜೆಂಟ್​ ಆಗಿ ನಟಿಸಲಿದ್ದಾರೆ. ರಿಯಲ್​ ಲೈಫ್​ ಘಟನೆಗಳನ್ನು ಆಧರಿಸಿ ಈ ಸಿನಿಮಾ ನಿರ್ಮಾಣ ಆಗಲಿದೆ. ಇದರಲ್ಲಿ ಸಂಜಯ್​ ದತ್​ ಅವರಿಗೆ ವಿಲನ್​ ಪಾತ್ರವನ್ನು ನೀಡಲು ನಿರ್ಧರಿಸಲಾಗಿದೆಯಂತೆ. ಆದರೆ ಈ ವಿಚಾರಗಳ ಬಗ್ಗೆ ಚಿತ್ರತಂಡದವರು ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಇನ್ನೂ ಹಂಚಿಕೊಂಡಿಲ್ಲ. ಸದ್ಯಕ್ಕೆ ಎಲ್ಲವೂ ಅಂತೆ-ಕಂತೆಗಳ ಹಂತದಲ್ಲೇ ಇವೆ.

ರಣವೀರ್ ಸಿಂಗ್​ ಅವರು ಇತ್ತೀಚಿನ ದಿನಗಳಲ್ಲಿ ಸಿನಿಮಾಗಳನ್ನು ಆಯ್ಕೆ ಮಾಡಲು ಸಖತ್​ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಒಂದಷ್ಟು ಪ್ರಾಜೆಕ್ಟ್​ಗಳನ್ನು ಮಾತುಕಥೆ ಹಂತದಲ್ಲೇ ಕೈಬಿಟ್ಟ ಬಳಿಕ ಅವರು ಈಗ ಆದಿತ್ಯ ಧಾರ್​ ಜೊತೆ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ. ಈ ಸಿನಿಮಾ ತುಂಬ ಡಿಫರೆಂಟ್​ ಆಗಿರಲಿದೆ ಎಂದು ಅವರು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ. ಇದೇ ಚಿತ್ರದಲ್ಲಿ ಖ್ಯಾತ ನಟರಾದ ಆರ್​. ಮಾಧವನ್​, ಅಕ್ಷಯ್​ ಖನ್ನಾ, ಅರ್ಜುನ್​ ರಾಮ್​ಪಾಲ್​ ಕೂಡ ನಟಿಸಲಿದ್ದಾರೆ. ಹಾಗಾಗಿ ಪ್ರೇಕ್ಷಕರಲ್ಲಿ ಕೌತುಕ ಹೆಚ್ಚಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.