ರಣವೀರ್-ಬನ್ಸಾಲಿ ಕಿತ್ತಾಟದ ವಿಚಾರ ಕೊನೆಗೂ ಹೊರಬಂತು; ಹೊಸ ಚಿತ್ರದಿಂದ ನಟ ಹೊರಕ್ಕೆ
Ranveer Singh-Ranbir Kapoor: ರಣವೀರ್ ಸಿಂಗ್ ಮತ್ತು ಸಂಜಯ್ ಲೀಲಾ ಬನ್ಸಾಲಿ ನಡುವಿನ ಭಿನ್ನಾಭಿಪ್ರಾಯದಿಂದಾಗಿ, ರಣವೀರ್ 'ಬೈಜು ಬಾವ್ರಾ' ಸಿನಿಮಾದಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಈಗ ರಣಬೀರ್ ಕಪೂರ್ ಆಯ್ಕೆಯಾಗುವ ಸಾಧ್ಯತೆ ಇದೆ. 'ಲವ್ ಆ್ಯಂಡ್ ವಾರ್' ಸೇರಿದಂತೆ ರಣವೀರ್ ಇತರ ಕೆಲವು ಯೋಜನೆಗಳಿಂದಲೂ ಹೊರಗುಳಿದಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ರಣಬೀರ್ ಕಪೂರ್ ಮತ್ತು ರಣವೀರ್ ಸಿಂಗ್ ಇಬ್ಬರೂ ಹಿಂದಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ರಣಬೀರ್ ಕಪೂರ್ ಹಾಗೂ ರಣವೀರ್ ಸಿಂಗ್ ಇಬ್ಬರೂ ದೊಡ್ಡ ದೊಡ್ಡ ಸಿನಿಮಾ ಮಾಡುತ್ತಿದ್ದಾರೆ. ರಣವೀರ್ ಸಿಂಗ್ ಅವರ ‘ಧುರಂಧರ್’ ಈ ವರ್ಷ ಬಿಡುಗಡೆಯಾಗಲಿದೆ. ರಣಬೀರ್ ‘ರಾಮಾಯಣ’ದಲ್ಲಿ ಬ್ಯುಸಿ ಇದ್ದಾರೆ. ಅವರನ್ನು ರಣವೀರ್ ಅವರನ್ನು ಈಗಾಗಲೇ ಹಲವಾರು ಯೋಜನೆಗಳಿಂದ ಕೈಬಿಡಲಾಗಿದೆ. ಈಗ, ರಣವೀರ್ ಸಿಂಗ್ ಅವರನ್ನು ಮತ್ತೊಂದು ಯೋಜನೆಯಿಂದ ಕೈಬಿಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ರಣಬೀರ್ ಇದಕ್ಕೆ ಆಯ್ಕೆ ಆಗಿದ್ದಾರಂತೆ.
ರಣಬೀರ್ ಕಪೂರ್ ಪ್ರಸ್ತುತ ‘ಲವ್ ಅಂಡ್ ವಾರ್’ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು 2026ರ ಈದ್ಗೆ ಬಿಡುಗಡೆಯಾಗಲಿದೆ. ಸಂಜಯ್ ಲೀಲಾ ಬನ್ಸಾಲಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ರಣಬೀರ್, ವಿಕ್ಕಿ ಕೌಶಲ್ ಮತ್ತು ಆಲಿಯಾ ಭಟ್ ಕೂಡ ನಟಿಸಿದ್ದಾರೆ. ಚಿತ್ರ ಪೂರ್ಣಗೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಈ ಸಿನಿಮಾದಲ್ಲಿ ರಣವೀರ್ ಅವರು ನಟಿಸಬೇಕಿತ್ತು. ಎರಡನೇ ಹೀರೋ ಪಾತ್ರಕ್ಕೆ ಸಿಕ್ಕಿದ್ದಕ್ಕೆ ಅವರು ನಟಿಸಿಲ್ಲ. ರಣವೀರ್ ಹಾಗೂ ಬನ್ಸಾಲಿ ಮಧ್ಯೆ ವೈಮನಸ್ಸು ಮೂಡಿದೆ ಎನ್ನಲಾಗುತ್ತಿದೆ. ಇದು ಈಗ ಮತ್ತಷ್ಟು ಸ್ಪಷ್ಟವಾಗುತ್ತಿದೆ.
ಇದನ್ನೂ ಓದಿ:‘ಬ್ಯಾಡ್ಸ್ ಆಫ್ ಬಾಲಿವುಡ್’ ಹಾಡು ಹಾಡಿದ ಅನಿರುದ್ಧ್ ರವಿಚಂದ್ರನ್
ರಣವೀರ್ ಸಿಂಗ್ ಅವರನ್ನು ಯಾವ ಚಿತ್ರದಿಂದ ಕೈಬಿಡಲಾಯಿತು?
ಪ್ರಶಾಂತ್ ವರ್ಮಾ ಅವರ ಚಿತ್ರದಿಂದ ರಣವೀರ್ ಸಿಂಗ್ ಈಗಾಗಲೇ ಹೊರನಡೆಯಲು ನಿರ್ಧರಿಸಿದ್ದಾರೆ. ಅವರನ್ನು ‘ಲವ್ ಆ್ಯಂಡ್ ವಾರ್’ ಚಿತ್ರದಿಂದ ಕೈಬಿಡಲಾಗಿತ್ತು. ‘ಶಕ್ತಿಮಾನ್’ ಬಗ್ಗೆ ಮಾತುಕತೆಗಳು ಸಹ ವಿಫಲವಾಗುತ್ತಿವೆ ಎಂಬ ಸುದ್ದಿ ಹೊರಬಿದ್ದಿವೆ. ಇತ್ತೀಚಿನ ವರದಿ ಪ್ರಕಾರ ಸಂಜಯ್ ಲೀಲಾ ಬನ್ಸಾಲಿ ಮತ್ತು ರಣವೀರ್ ಸಿಂಗ್ ಭನ್ಸಾಲಿಯವರ ಕನಸಿನ ಯೋಜನೆಯಾದ ‘ಬೈಜು ಬಾವ್ರಾ’ದಿಂದ ರಣವೀರ್ ಹೊರಕ್ಕೆ ಹೋಗಿದ್ದಾರಂತೆ.
ಹೊಸ ವರದಿಗಳ ಪ್ರಕಾರ, ಬೈಜು ಬಾವ್ರಾ ಚಿತ್ರದಲ್ಲಿ ರಣಬೀರ್ ಕಪೂರ್ ಅವರನ್ನು ನಾಯಕನ ಪಾತ್ರದಲ್ಲಿ ನಟಿಸಲು ಆಯ್ಕೆ ಮಾಡಲಾಗಿದೆ. ಮೂಲತಃ ಈ ಚಿತ್ರಕ್ಕೆ ರಣವೀರ್ ಸಿಂಗ್ ಅವರನ್ನು ಪರಿಗಣಿಸಲಾಗಿತ್ತು. ಆದರೆ, ಇಬ್ಬ ಮಧ್ಯೆ ಆದ ಕಿರಿಕ್ನಿಂದ ಈ ಆಫರ್ ರಣಬೀರ್ ಕೈ ಸೇರಿದೆ.
‘ರಣಬೀರ್ ಕಪೂರ್’ ಪ್ರಸ್ತುತ ಲವ್ ಅಂಡ್ ವಾರ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅದಾದ ನಂತರ, ಅವರು ‘ರಾಮಾಯಣ 2’ನಲ್ಲಿ ಕೆಲಸ ಮಾಡಬೇಕು. ‘ಅನಿಮಲ್ ಪಾರ್ಕ್’ ಕೂಡ ಮಾಡಬೇಕಿದೆ. ಹೀಗಾಗಿ, ಈ ಸಿನಿಮಾ ವಿಳಂಬ ಆಗಬಹುದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



