ಬಾಲಿವುಡ್ನ ಹಿರಿಯ ಮತ್ತು ಖ್ಯಾತ ನಟ ಶರದ್ ಕಪೂರ್ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. 32 ವರ್ಷದ ಬಾಲಿವುಡ್ ನಟಿಯೊಬ್ಬರು ಶರದ್ ಕಪೂರ್ ವಿರುದ್ಧ ದೂರು ದಾಖಲಿಸಿದ್ದು, ದೂರಿನ ಆಧಾರದ ಮೇಲೆ ಶರದ್ ಕಪೂರ್ ಮೇಲೆ ಎಫ್ಐಆರ್ ದಾಖಲಾಗಿದೆ. ನವೆಂಬರ್ 27 ರಂದು ಶರದ್ ಕಪೂರ್, ದೂರು ನೀಡಿರುವ ಮಹಿಳೆಯ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ನಟಿ ನೀಡಿರುವ ದೂರಿನನ್ವಯ, ಸಾಮಾಜಿಕ ಜಾಲತಾಣ ಮತ್ತು ಯೂಟ್ಯೂಬ್ನಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡುವ 32 ವರ್ಷದ ನಟಿಯೊಬ್ಬರಿಗೆ ಶರದ್ ಕಪೂರ್ ಮೂರು ತಿಂಗಳ ಹಿಂದೆ ಮೆಸೇಜ್ ಮಾಡಿದ್ದರಂತೆ. ಆದರೆ ನಟಿ ಇತ್ತೀಚೆಗೆ ಪ್ರತಿಕ್ರಿಯೆ ನೀಡಿ ವಿಡಿಯೋ ಕಾಲ್ ಮಾಡಲು ಹೇಳಿದ್ದರಂತೆ. ಅದರಂತೆ ಶರದ್ ವಿಡಿಯೋ ಕಾಲ್ ಮಾಡಿ, ಮೆಸೆಜ ಮಾಡಿದ್ದು ತಾನೇ ಎಂದು ಕನ್ಫರ್ಮ್ ಮಾಡಿದ್ದಾರೆ. ಅಲ್ಲದೆ ತಮ್ಮೊಟ್ಟಿಗೆ ಸೇರಿ ವಿಡಿಯೋ ಮಾಡುವಂತೆ ಹೇಳಿದ್ದಾರೆ.
ಈ ಬಗ್ಗೆ ಚರ್ಚಿಸಲು ಕಚೇರಿಗೆ ಬರುವಂತೆ ಹೇಳಿ ಗೂಗಲ್ ಮ್ಯಾಪ್ನಲ್ಲಿ ಲೊಕೇಶನ್ ಸಹ ಕಳಿಸಿದ್ದಾರೆ. ಆದರೆ ನಟಿ ಲೊಕೇಶನ್ ತಲುಪಿ ನೋಡಿದರೆ ಅದು ಶರದ್ ಕಪೂರ್ ಮನೆಯಾಗಿತ್ತಂತೆ. ಮನೆಯ ಒಳಗೆ ಹೋದಾಗ ನಟಿಯನ್ನು ಶರದ್ ಕಪೂರ್ರ ರೂಂಗೆ ಹೋಗುವಂತೆ ಸಿಬ್ಬಂದಿ ಹೇಳಿದ್ದಾರೆ. ಅಲ್ಲಿ ಹೋಗಿ ನೋಡಿದರೆ ಶರದ್ ಕಪೂರ್ ಬೆತ್ತಲೆಯಾಗಿದ್ದರಂತೆ. ಇದನ್ನು ನೋಡಿ ಶಾಕ್ ಆದ ನಟಿ, ಹೀಗಿದ್ದರೆ ನನಗೆ ಸರಿ ಆಗುವುದಿಲ್ಲ. ಬಟ್ಟೆ ಹಾಕಿಕೊಂಡರಷ್ಟೆ ಮಾತನಾಡುವೆ ಎಂದರಂತೆ.
ಇದನ್ನೂ ಓದಿ:ಬಾಲಿವುಡ್ ನಾಯಕಿಯಂತಿರುವ ಬಚ್ಚನ್ ಮೊಮ್ಮಗಳಿಗೆ ಸಿನಿಮಾಗಳ ಬಗ್ಗೆ ಆಸಕ್ತಿಯಿಲ್ಲ
ಆದರೆ ಶರದ್ ಕಪೂರ್, ಅದಕ್ಕೆ ಒಪ್ಪದೆ, ಬಲವಂತದಿಂದ ನಟಿಯನ್ನು ತಬ್ಬಿಕೊಂಡು ಮುತ್ತು ಕೊಟ್ಟಿದ್ದಾರೆ. ಆ ನಟಿ ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾರೆ. ಅದಾದ ಬಳಿಕವೂ ಸಹ ಶರದ್ ಕಪೂರ್, ನಟಿಯ ವಾಟ್ಸ್ಆಪ್ಗೆ ಸಂದೇಶ ಕಳಿಸಿ, ಕೆಲವು ಅಶ್ಲೀಲ ವಿಡಿಯೋಗಳನ್ನು ಕಳಿಸಿದ್ದರಂತೆ. ಇದೀಗ ನಟಿ ಶರದ್ ಕಪೂರ್ ವಿರುದ್ಧ ದೂರು ನೀಡಿದ್ದು, ಶರದ್ ವಿರುದ್ಧ ಲೈಂಗಿಕ ದೌರ್ಜನ್ಯ ಇನ್ನಿತರೆ ಪ್ರಕರಣಗಳು ದಾಖಲಾಗಿವೆ.
1995 ರಿಂದಲೂ ಶರದ್ ಕಪೂರ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಲವಾರು ಸಿನಿಮಾಗಳಲ್ಲಿ ಅವರು ವಿಲನ್ ಆಗಿಯೇ ನಟಿಸಿರುವುದು ಹೆಚ್ಚು. ಶಾರುಖ್ ಖಾನ್ ನಟನೆಯ ‘ಜೋಶ್’, ಹೃತಿಕ್ ನಟನೆಯ ‘ಲಕ್ಷ್ಯ’ ಇನ್ನೂ ಕೆಲವು ಸಿನಿಮಾಗಳಲ್ಲಿ ಶರದ್ ನಿರ್ವಹಿಸಿರುವ ಪಾತ್ರ ಬಹಳ ಗಮನ ಸೆಳೆದಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ