
ಶಾರುಖ್ ಖಾನ್, ಬಾಲಿವುಡ್ನ ಟಾಪ್ ನಟ. ಅವರಷ್ಟು ದೊಡ್ಡ ಸಂಭಾವನೆ ಪಡೆವ ನಟ ಭಾರತದಲ್ಲಿ ಇಲ್ಲ ಎನ್ನಲಾಗುತ್ತದೆ. ಭಾರತದ ಅತಿ ಶ್ರೀಮಂತ ನಟರೂ ಸಹ ಹೌದು ಶಾರುಖಾ ಖಾನ್. ತಮ್ಮ ಶ್ರೀಮಂತಿಕೆಗೆ ತಕ್ಕಂತೆ ಜೀವನ ಶೈಲಿಯೂ ಬಲು ಐಶಾರಾಮಿಯಾಗಿಟ್ಟುಕೊಂಡಿದ್ದಾರೆ ಕಿಂಗ್ ಖಾನ್. ಇತ್ತೀಚೆಗೆ ಶಾರುಖ್ ಖಾನ್, ಗ್ಲೋಬಲ್ ಪೀಸ್ ಹಾನರ್ಸ್ 2026 ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಕಾರ್ಯಕ್ರಮದಲ್ಲಿ ಅವರು ಧರಿಸಿದ್ದ ದುಬಾರಿ ವಾಚು ಗಮನ ಸೆಳೆಯಿತು. ಅದೇ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ನಟ ರಣ್ವೀರ್ ಸಿಂಗ್ ವಾಚು ಸಹ ಸಖತ್ ಗಮನ ಸೆಳೆಯಿತು.
ಮುಂಬೈನ ಐತಿಹಾಸಿಕ ಗೇಟ್‌ವೇ ಆಫ್ ಇಂಡಿಯಾನಲ್ಲಿ ನವೆಂಬರ್ 21ರಂದು ಗ್ಲೋಬಲ್ ಪೀಸ್ ಹಾನರ್ಸ್ 2026 ಕಾರ್ಯಕ್ರಮ ನಡೆದಿತ್ತು ಕಾರ್ಯಕ್ರಮದಲ್ಲಿ ಶಾರುಖ್ ಖಾನ್, ಅನಂತ್ ಅಂಬಾನಿ, ರಣ್ವೀರ್ ಸಿಂಗ್, ಸದ್ಗುರು ಸೇರಿದಂತೆ ಇನ್ನೂ ಹಲವಾರು ತಾರೆಯರು, ಉದ್ಯಮಿಗಳು, ಕ್ರೀಡಾಪಟುಗಳು ಭಾಗಿ ಆಗಿದ್ದರು. ಹಲವರು ಅಂದು ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದರು. ಅವರಲ್ಲಿ ಶಾರುಖ್ ಖಾನ್ ಸಹ ಒಬ್ಬರು. ಈ ವೇಳೆ ಅವರು ಧರಿಸಿದ್ದ ವಾಚನ್ನು ಹಲವರು ಗುರುತಿಸಿದ್ದು, ವಾಚಿನ ಬೆಲೆ ಸೇರಿದಂತೆ ಇನ್ನಿತರೆ ಮಾಹಿತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಶಾರುಖ್ ಖಾನ್, ‘ಆಡೆಮಾರ್ಸ್ ಪಿಗ್ವೆಟ್’ (Audemars Piguet) ಸಂಸ್ಥೆಯ ವಿಶೇಷ ವಿನ್ಯಾಸದ ವಾಚನ್ನು ಧರಿಸಿದ್ದರು. ‘ಆಡೆಮಾರ್ಸ್ ಪಿಗ್ವೆಟ್’ನ ‘ರಾಯಲ್ ಓಕ್ ಜಂಬೋ ಎಕ್ಸ್‌ಟ್ರಾ-ಥಿನ್ ಟೈಟಾನಿಯಂ ಬಿಎಂಜಿ ಓಪನ್‌ವರ್ಕ್ಡ್ ಡಯಲ್’ ವಾಚ್ ಅನ್ನು ಶಾರುಖ್ ಖಾನ್ ಕಾರ್ಯಕ್ರಮದಲ್ಲಿ ಧರಿಸಿದ್ದರು. ಓಪನ್‌ವರ್ಕ್ಡ್ ವಿನ್ಯಾಸ ಮತ್ತು ವಿಶಿಷ್ಟ ಟೈಟಾನಿಯಂ ನಿರ್ಮಾಣವನ್ನು ಹೊಂದಿರುವ ಈ ಈ ವಾಚ್‌ನ ಮಾರುಕಟ್ಟೆ ಬೆಲೆ ಸುಮಾರು 3.49 ಕೋಟಿ ರೂಪಾಯಿಗಳು.
ಇದನ್ನೂ ಓದಿ:ವಿಶ್ವದ ಶ್ರೇಷ್ಠ ಸಿನಿಮಾ ತಾರೆಯರ ಪಟ್ಟಿಯಲ್ಲಿ ಏಕೈಕ ಭಾರತೀಯನಾಗಿ ಮಿಂಚಿದ ಶಾರುಖ್ ಖಾನ್
ಅದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ‘ಧುರಂಧರ್’ ಸ್ಟಾರ್ ರಣ್ವೀರ್ ಸಿಂಗ್ ಸಹ ದುಬಾರಿ ವಾಚು ಧರಿಸಿ ಕಾಣಿಸಿಕೊಂಡರು. ಕಂದು ಬಣ್ಣದ ಡಯಲ್ ಹೊಂದಿರುವ ರೋಸ್ ಗೋಲ್ಡ್ ‘ಪ್ಯಾಟೆಕ್ ಫಿಲಿಪ್ ಅಕ್ವಾನಾಟ್ ಕ್ರೋನೋಗ್ರಾಫ್’ (ರೆಫರೆನ್ಸ್ 5968R-001) ವಾಚ್ ಧರಿಸಿ ಕಾಣಿಸಿಕೊಂಡರು. ಅಪರೂಪದ ಬಣ್ಣ ಮತ್ತು ವಿನ್ಯಾಸ ಹೊಂದಿರುವ ಈ ವಾಚಿನ ಮಾರುಕಟ್ಟೆ ಬೆಲೆ ಸುಮಾರು 1.47 ಕೋಟಿ ರೂಪಾಯಿಗಳು. ಈ ಇಬ್ಬರು ಬಾಲಿವುಡ್ ತಾರೆಯರು ಧರಿಸಿದ್ದ ವಾಚ್‌ಗಳ ಒಟ್ಟು ಮಾರುಕಟ್ಟೆ ಮೌಲ್ಯ ಸುಮಾರು 4.96 ಕೋಟಿ ರೂಪಾಯಿ.
ಅದೇ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಉದ್ಯಮಿ ಅನಂತ್ ಅಂಬಾನಿ ಅವರ ವಿಶ್ವದಲ್ಲೇ ಅಪರೂಪದ ಮತ್ತು ವಿಶ್ವದಲ್ಲೇ ಅತ್ಯಂತ ದುಬಾರಿ ವಾಚುಗಳ ಸಂಗ್ರಹ ಹೊಂದಿರುವ ವ್ಯಕ್ತಿ ಆಗಿದ್ದಾರೆ. ಅವರ ಬಳಿ ಇರುವಷ್ಟು ದುಬಾರಿ ಮತ್ತು ವಿಶಿಷ್ಟವಾದ ವಾಚುಗಳ ಸಂಗ್ರಹ ಇನ್ಯಾರ ಬಳಿಯೂ ಇಲ್ಲ ಎನ್ನಲಾಗುತ್ತದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ