Shah Rukh Khan: ಶಾರುಖ್ ಖಾನ್ ಅವರು ಒಂದುಸಲಕ್ಕೆ ಎಷ್ಟು ಸಿಗರೇಟು ಸೇದುತ್ತಾರೆ ಗೊತ್ತಾ?

|

Updated on: May 20, 2024 | 7:58 AM

80 ಹಾಗೂ 90ರ ದಶಕದಲ್ಲಿ ಹಿಂದಿಯಲ್ಲಿ ನೆಗೆಟಿವ್ ಪಾತ್ರಗಳನ್ನು ಮಾಡಿ ಗಮನ ಸೆಳೆದವರು ಪ್ರದೀಪ್ ರಾವತ್. ಶಾರುಖ್ ಖಾನ್ ಅವರು ‘ಕೊಯ್ಲಾ’ ಸಿನಿಮಾದಲ್ಲಿ ನಟಿಸಿದ್ದರು. ಸಿನಿಮಾದ ಸೆಟ್​ನಲ್ಲಿ ಶಾರುಖ್ ಖಾನ್ ಓರ್ವ ಚೈನ್ ಸ್ಮೋಕರ್ ಅನ್ನೋದು ಪ್ರದೀಪ್ ರಾವತ್​ಗೆ ಗೊತ್ತಾಗಿತ್ತು.

Shah Rukh Khan: ಶಾರುಖ್ ಖಾನ್ ಅವರು ಒಂದುಸಲಕ್ಕೆ ಎಷ್ಟು ಸಿಗರೇಟು ಸೇದುತ್ತಾರೆ ಗೊತ್ತಾ?
ಶಾರುಖ್
Follow us on

ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅವರ ಖ್ಯಾತಿ ತುಂಬಾನೇ ದೊಡ್ಡದು. ಅವರು ಕೆಲವೊಮ್ಮೆ ಬೇಡದ ಕಾರಣಕ್ಕೆ ಸುದ್ದಿ ಆಗುತ್ತಾ ಇರುತ್ತಾರೆ. ಅವರ ಕೆಟ್ಟ ಹವ್ಯಾಸಗಳಲ್ಲಿ ಸಿಗರೇಟ್ ಸೇದುವುದು ಕೂಡ ಒಂದು. ಅವರು ಸಿಗರೇಟ್ ಬಿಡುವ ಪ್ರಯತ್ನವನ್ನು ಈ ಮೊದಲು ಮಾಡಿದ್ದರು. ಆದರೆ, ಅದು ಸಾಧ್ಯವಾಗಲೇ ಇಲ್ಲ. ಶಾರುಖ್ ಖಾನ್ ಅವರು ಸಿಗರೇಟ್ ಸೇದೋಕೆ ನಿಂತರೆ ನಿರಂತರವಾಗಿ ಸೇದುತ್ತಲೇ ಇರುತ್ತಾರಂತೆ. ಈ ಬಗ್ಗೆ  ನಟ ಪ್ರದೀಪ್ ರಾವತ್ ಮಾತನಾಡಿದ್ದಾರೆ.

80 ಹಾಗೂ 90ರ ದಶಕದಲ್ಲಿ ಹಿಂದಿಯಲ್ಲಿ ನೆಗೆಟಿವ್ ಪಾತ್ರಗಳನ್ನು ಮಾಡಿ ಗಮನ ಸೆಳೆದವರು ಪ್ರದೀಪ್ ರಾವತ್. ರಾಕೇಶ್ ರೋಶನ್ ನಿರ್ದೇಶನದ ‘ಕೊಯ್ಲಾ’ ಸಿನಿಮಾದ ಶೂಟಿಂಗ್ ದಿನಗಳನ್ನು ಇತ್ತೀಚೆಗೆ ಅವರು ನೆನಪಿಸಿಕೊಂಡರು. ಈ ಚಿತ್ರದಲ್ಲಿ ಶಾರುಖ್ ಖಾನ್ ಹಾಗೂ ಮಾಧುರಿ ದೀಕ್ಷಿತ್ ಮುಖ್ಯಭೂಮಿಕೆ ನಿರ್ವಹಿಸಿದ್ದರು. ಸಿನಿಮಾದ ಸೆಟ್​ನಲ್ಲಿ ಶಾರುಖ್ ಖಾನ್ ಓರ್ವ ಚೈನ್ ಸ್ಮೋಕರ್ ಅನ್ನೋದು ಪ್ರದೀಪ್ ರಾವತ್​ಗೆ ಗೊತ್ತಾಗಿತ್ತು.

‘ಶೂಟಿಂಗ್ ಸಮಯದಲ್ಲಿ ನಾನು ಶಾರುಖ್ ಖಾನ್ ಜೊತೆ ಕ್ಲೋಸ್ ಆಗಿ ಇರಲಿಲ್ಲ. ಅವರು ಒಳ್ಳೆಯ ವ್ಯಕ್ತಿ. ಯಾವ ನಟರೂ ಶಾರುಖ್ ಖಾನ್ ಸಿಗರೇಟ್ ಸೇದಿದಷ್ಟು ಸೇದಿಲ್ಲ. ಶಾರುಖ್ ಅವರು ಸಿಗರೇಟ್ ಸೇದೋಕೆ ನಿಂತರೆ ಒಂದಾದ ಮೇಲೆ ಒಂದರಂತೆ ಸಿಗರೇಟ್ ಹಚ್ಚುತ್ತಲೇ ಇರುತ್ತಿದ್ದರು. ಅವರು ನಿಜವಾಗಲೂ ಚೈನ್ ಸ್ಮೋಕರ್. ಅದೇ ರೀತಿ ಸಿನಿಮಾದ ಕಡೆ ಅವರು ತೋರುವ ಶ್ರದ್ಧೆ ನಿಜಕ್ಕೂ ದೊಡ್ಡದು’ ಎಂದಿದ್ದಾರೆ ಅವರು.

ಇದನ್ನೂ ಓದಿ:  ಗುಟ್ಕಾ ತಿಂದು ಶಾರುಖ್ ಖಾನ್ ಇನ್ನು ಸತ್ತಿಲ್ಲ ಮತ್ತೆ ನಾವು ಹೇಗೆ ಸಾಯ್ತೀವಿ, ಈ ಬಾಲಕನ ಉತ್ತರ ಕೇಳಿ

ಶಾರುಖ್ ಖಾನ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್​ನ ಒಡೆತನ ಹೊಂದಿದ್ದಾರೆ. ಅವರು ಇತ್ತೀಚೆಗೆ ನಡೆದ ಐಪಿಎಲ್ ಪಂದ್ಯದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ಸಿಗರೇಟ್ ಸೇದುತ್ತಿರುವ ವಿಡಿಯೋ ಲೀಕ್ ಆಗಿತ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿ ಸದ್ದು ಮಾಡಿತ್ತು. ಶಾರುಖ್ ಖಾನ್ ಅವರು ಸದ್ಯ ಬ್ರೇಕ್​ನಲ್ಲಿದ್ದಾರೆ. ಐಪಿಎಲ್ ಮುಗಿದ ಬಳಿಕ ಅವರು ಹೊಸ ಸಿನಿಮಾ ಘೋಷಿಸೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.