ಮಗಳ ಚಿತ್ರಕ್ಕಾಗಿ ತೂಕ ಇಳಿಸಿಕೊಳ್ಳಲಿದ್ದಾರೆ ಶಾರುಖ್ ಖಾನ್; ಮಾಹಿತಿಕೊಟ್ಟ ‘ಕಿಂಗ್’

|

Updated on: Aug 12, 2024 | 8:32 AM

‘ಕಿಂಗ್’ ಸಿನಿಮಾ ಬಗ್ಗೆ ಅನೇಕ ಸುದ್ದಿಗಳು ಹರಿದಾಡಿವೆ. ಆದರೆ, ಈ ವರೆಗೆ ಸಿನಿಮಾ ಬಗ್ಗೆ ಅಧಿಕೃತ ಮಾಹಿತಿ ರಿವೀಲ್ ಆಗಿರಲಿಲ್ಲ. ಈಗ ಈ ಬಗ್ಗೆ ಸ್ವತಃ ಶಾರುಖ್ ಖಾನ್ ಅವರೇ ಮಾಹಿತಿ ರಿವೀಲ್ ಮಾಡಿದ್ದಾರೆ. ಅವರು ‘ಕಿಂಗ್’ ಸಿನಿಮಾದಲ್ಲಿ ನಟಿಸೋದು ಪಕ್ಕಾ ಎಂದು ಹೇಳಿದ್ದಾರೆ.

ಮಗಳ ಚಿತ್ರಕ್ಕಾಗಿ ತೂಕ ಇಳಿಸಿಕೊಳ್ಳಲಿದ್ದಾರೆ ಶಾರುಖ್ ಖಾನ್; ಮಾಹಿತಿಕೊಟ್ಟ ‘ಕಿಂಗ್’
ಶಾರುಖ್ ಖಾನ್
Follow us on

ಶಾರುಖ್ ಖಾನ್ ಅವರು ಬಾಲಿವುಡ್​ನ ಖ್ಯಾತ ಹೀರೋಗಳಲ್ಲಿ ಒಬ್ಬರು. ಅವರು ಕೆಲವು ಚಿತ್ರಗಳಿಗಾಗಿ ತೂಕ ಹೆಚ್ಚಿಸಿಕೊಂಡಿದ್ದು ಹಾಗೂ ಇಳಿಸಿಕೊಂಡಿದ್ದು ಇದೆ. ಈಗ ಅವರು ಮಗಳ ಚಿತ್ರಕ್ಕಾಗಿ ತೂಕ ಇಳಿಸಿಕೊಳ್ಳುತ್ತಿದ್ದಾರೆ. ಹಾಗಂತ ಇದು ವದಂತಿ ಅಲ್ಲ. ಯಾರೋ ಊಹಿಸಿ ಬರೆದ ಕಥೆಯೂ ಅಲ್ಲ. ಸ್ವತಃ ಶಾರುಖ್ ಖಾನ್​ ಅವರೇ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ.

ಶಾರುಖ್ ಖಾನ್ ಅವರು ಸ್ವಿಜರ್​ಲೆಂಡ್​ನಲ್ಲಿ ನಡೆದ ‘ಲೊಕಾರ್ನೋ ಫಿಲ್ಮ್​ ಫೆಸ್ಟಿವಲ್’ಗೆ ತೆರಳಿದ್ದಾರೆ. ಅಲ್ಲಿ ಅವರು ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಆಧರಿಸಿ ಈ ಗೌರವ ನೀಡಲಾಗಿದೆ. ಅವರು ಈ ಗೌರವ ಸ್ವೀಕರಿಸಲು ಸ್ವಿಜರ್​ಲೆಂಡ್​ಗೆ ತೆರಳಿದ್ದರು. ಈ ವೇಳೆ ಅವರು ಮುಂದಿನ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ.

ಸುಜಯ್ ಘೋಷ್ ನಿರ್ದೇಶನದ ‘ಕಿಂಗ್’ ಸಿನಿಮಾದಲ್ಲಿ ನಟಿಸೋದಾಗಿ ಶಾರುಖ್ ಖಾನ್ ಹೇಳಿದ್ದಾರೆ. ಇದಕ್ಕಾಗಿ ಅವರು ತೂಕ ಇಳಿಸಿಕೊಳ್ಳಲಿದ್ದಾರೆ. ‘ಆ್ಯಕ್ಷನ್ ಸಿನಿಮಾಗಳನ್ನು ಮಾಡೋದು ಕಷ್ಟ. ನೀವು ಪ್ರ್ಯಾಕ್ಟಿಸ್ ಮಾಡಬೇಕು, ಕಲಿಯಬೇಕು. ಇದರ ಜೊತೆಗೆ ಅಪಾಯಕಾರಿ ಸ್ಟಂಟ್​ಗಳನ್ನು ಮಾಡಬೇಕು. ನಮ್ಮ ಜೊತೆ ಅನೇಕ ನುರಿತ ತಂತ್ರಜ್ಞರು ಇದ್ದಾರೆ. ಆದರೆ, ಶೇ.80ರಷ್ಟು ಶ್ರಮ ನಾವೇ ಹಾಕಬೇಕು. ಇಲ್ಲದಿದ್ದರೆ ಸರಿ ಕಾಣುವುದಿಲ್ಲ’ ಎಂದಿದ್ದಾರೆ ಶಾರುಖ್.

ಇದನ್ನೂ ಓದಿ: ದಕ್ಷಿಣ ಭಾರತದ ಸಿನಿಮಾಕ್ಕೆ ನೋ ಎಂದರೆ ಶಾರುಖ್ ಖಾನ್ ಪುತ್ರಿ

‘ನಾನು ಮಾಡುತ್ತಿರುವ ಮುಂದಿನ ಸಿನಿಮಾ ಕಿಂಗ್. ಇದರ ಕೆಲಸ ಆರಂಭಿಸಬೇಕಿದೆ. ನಾನು ಸ್ವಲ್ಪ ತೂಕ ಇಳಿಸಿಕೊಳ್ಳಬೇಕು’ ಎಂದು ಅವರು ಹೇಳಿದ್ದಾರೆ. ಜೊತೆಗೆ ಈ ಅವಾರ್ಡ್​ನ ನೀಡಿದವರಿಗೆ ಅವರು ಧನ್ಯವಾದ ಹೇಳಿದ್ದಾರೆ. ಶಾರುಖ್ ಖಾನ್ ಬಳಿ ನೂರಾರು ಪ್ರಶಸ್ತಿಗಳು ಇವೆ. ಅವರಿಗೆ ಈ ಮೊದಲು ಪ್ರಶಸ್ತಿ ಬಗ್ಗೆ ಘೀಳು ಇತ್ತು. ಹೀಗಾಗಿ ಅವರು ಹಣ ಕೊಟ್ಟು ಪ್ರಶಸ್ತಿ ಸ್ವೀಕರಿಸಿದ್ದೂ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:28 am, Mon, 12 August 24