ಖ್ಯಾತ ನಿರ್ದೇಶಕನ ಮೊಬೈಲ್ಅನ್ನು ದಾಲ್ನಲ್ಲಿ ಮುಳುಗಿಸಿದ ಶಾರುಖ್ ಖಾನ್; ವಿಡಿಯೋ ವೈರಲ್
ಶಾರುಖ್ ಹಾಗೂ ಅನುರಾಗ್ ಕಶ್ಯಪ್ ಇಬ್ಬರೂ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಜಾಹೀರಾತು ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು. ಈಗ ಹೊಸ ಜಾಹೀರಾತು ರಿಲೀಸ್ ಆಗಿದೆ.

ನಟ ಶಾರುಖ್ ಖಾನ್ (Shah Rukh Khan) ಅವರ ಕೊನೆಯ ಸಿನಿಮಾ ತೆರೆಗೆ ಬಂದು ಸುಮಾರು ನಾಲ್ಕು ವರ್ಷಗಳೇ ಕಳೆದಿವೆ. ಈಗ ಅವರು ಮತ್ತೆ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇದರ ಜತೆಗೆ ಶಾರುಖ್ ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಎಸ್ಆರ್ಕೆ+ (SRK+) ಹೆಸರಿನ ಒಟಿಟಿ ತರುವುದಾಗಿಯೂ ಅವರು ಘೋಷಣೆ ಮಾಡಿದ್ದರು. ಅದು ಡಿಸ್ನಿ ಪ್ಲಸ್ ಹಾಟ್ಸ್ಟಾರ್ಗಾಗಿ ಮಾಡಿದ ಜಾಹೀರಾತು ಎಂಬುದು ಆ ಬಳಿಕ ಗೊತ್ತಾಗಿತ್ತು. ಈ ಮಧ್ಯೆ, ಶಾರುಖ್ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ (Anurag Kashyap) ಅವರ ಮೊಬೈಲ್ಅನ್ನು ದಾಲ್ನಲ್ಲಿ ಮುಳುಗಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಶಾರುಖ್ ಹಾಗೂ ಅನುರಾಗ್ ಕಶ್ಯಪ್ ಇಬ್ಬರೂ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಜಾಹೀರಾತು ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು. ಈಗ ಹೊಸ ಜಾಹೀರಾತು ರಿಲೀಸ್ ಆಗಿದೆ. ಈ ಜಾಹೀರಾತಿನಲ್ಲಿ ಶಾರುಖ್, ಅನುರಾಗ್ ಊಟ ಮಾಡುತ್ತಿರುತ್ತಾರೆ. ಈ ವೇಳೆ ಶಾರುಖ್ ಪಿ.ಎ. ‘ಒಟಿಟಿ ಪ್ಲಾಟ್ಫಾರ್ಮ್ಗೆ ಹೊಹೊಸ ಆಲೋಚನೆಗಳು ಬೇಕು’ ಎಂದು ಹೇಳುತ್ತಾರೆ. ಆದರೆ, ಅನುರಾಗ್ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ಒಂದೇ ಸಮನೆ ಊಟ ಮಾಡುತ್ತಲೇ ಇರುತ್ತಾರೆ. ಈ ವೇಳೆ ಸಿಟ್ಟಾದ ಶಾರುಖ್ ಅವರು ಅನುರಾಗ್ ಮೊಬೈಲ್ಅನ್ನು ದಾಲಿನ ಪಾತ್ರೆಯಲ್ಲಿ ಹಾಕುತ್ತಾರೆ. ಆ ಬಳಿಕ ಕ್ಷಮೆ ಕೇಳುತ್ತಾರೆ.
ಶಾರುಖ್ ಖಾನ್ ಬಾಲಿವುಡ್ನಲ್ಲಿ ಬಹುಬೇಡಿಕೆಯ ನಟ. ‘ಪಠಾಣ್’ ಸಿನಿಮಾ ಕೆಲಸದಲ್ಲಿ ಅವರು ಬ್ಯುಸಿ ಇದ್ದಾರೆ. ಈ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಇದರ ಜತೆಗೆ ನಿರ್ಮಾಣದಲ್ಲೂ ಶಾರುಖ್ ಖಾನ್ ಬ್ಯುಸಿ ಆಗಿದ್ದಾರೆ. ‘ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್’ ಸ್ಟುಡಿಯೋಸ್ ಅಡಿಯಲ್ಲಿ ಹಲವು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈಗ ಅವರು ಎಸ್ಆರ್ಕೆ+ ಹೆಸರಿನ ಒಟಿಟಿ ಪ್ಲಾಟ್ಫಾರ್ಮ್ ಲಾಂಚ್ ಮಾಡೋಕೆ ರೆಡಿ ಆಗಿದ್ದಾರೆ ಎನ್ನಲಾಗಿತ್ತು. ಖುದ್ದು ಶಾರುಖ್ ಅವರೇ ಹೊಸ ಪೋಸ್ಟರ್ ಹಂಚಿಕೊಂಡು ಈ ಬಗ್ಗೆ ಅಪ್ಡೇಟ್ ನೀಡಿದ್ದರು. ಆದರೆ, ಇದು ಡಿಸ್ನಿ+ ಸ್ಟಾರ್ ಜತೆಗೆ ಮಾಡಿಕೊಂಡಿದ್ದ ಒಪ್ಪಂದ ಎಂಬುದು ಆ ಬಳಿಕ ಗೊತ್ತಾಗಿತ್ತು. ಈ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.
Dil toh pagal tha, ab dimaag bhi kharaab kar diya @DisneyPlusHS walon ne ? pic.twitter.com/N2d59xoqcL
— Shah Rukh Khan (@iamsrk) March 24, 2022
‘ಪಠಾಣ್’ ಸಿನಿಮಾದಿಂದ ಒಂದು ಗೆಲುವು ಕಾಣುವುದು ಶಾರುಖ್ ಖಾನ್ ಅವರಿಗೆ ತುಂಬ ಅನಿವಾರ್ಯ ಆಗಿದೆ. ಹಾಗಾಗಿ ಅವರು ಈ ಚಿತ್ರಕ್ಕಾಗಿ ಎಲ್ಲಿಲ್ಲದಂತೆ ಕಷ್ಟಪಡುತ್ತಿದ್ದಾರೆ ಎನ್ನಲಾಗಿದೆ. 8 ಪ್ಯಾಕ್ ಆ್ಯಬ್ಸ್ ಮೂಲಕ ಅಭಿಮಾನಿಗಳ ಮುಂದೆ ಬಂದು ಮನರಂಜನೆ ನೀಡಲು ಅವರು ತೀರ್ಮಾನಿಸಿದಂತಿದೆ. ಅದಕ್ಕಾಗಿ ದೇಹ ದಂಡಿಸಿ ತಯಾರಾಗಿದ್ದಾರೆ. ಆದರೆ ಶೂಟಿಂಗ್ ಸಂದರ್ಭದಲ್ಲಿಯೇ ಈ ಫೋಟೋಗಳು ಲೀಕ್ ಆಗಿರುವುದರಿಂದ ಅಭಿಮಾನಿಗಳಿಗೆ ಮತ್ತು ಚಿತ್ರತಂಡಕ್ಕೆ ಬೇಸರ ಮೂಡಿಸಿದೆ.
ಇದನ್ನೂ ಓದಿ: ಶಾರುಖ್ ನಟನೆಯ ‘ಪಠಾಣ್’ ರಿಲೀಸ್ ಡೇಟ್ ಬಗ್ಗೆ ಹೊಸ ಅಪ್ಡೇಟ್ ನೀಡಿದ ದೀಪಿಕಾ ಪಡುಕೋಣೆ
ಶಾರುಖ್ ಖಾನ್ 8 ಪ್ಯಾಕ್ ಬಾಡಿ ಫೋಟೋ ವೈರಲ್; ‘ಪಠಾಣ್’ ಚಿತ್ರದಲ್ಲಿ ಹೊಸ ಗೆಟಪ್




