ಶಾರುಖ್ ನಟನೆಯ ಐದು ಸಿನಿಮಾಗಳಿಗೆ ಐಶ್ವರ್ಯಾ ನಾಯಕಿ ಆಗಬೇಕಿತ್ತು; ಆದರೆ..

| Updated By: ರಾಜೇಶ್ ದುಗ್ಗುಮನೆ

Updated on: Aug 27, 2024 | 8:43 AM

‘ವೀರ್ ಜರಾ’ ಚಿತ್ರದಲ್ಲಿ ಐಶ್ವರ್ಯಾ ರೈ ಅಭಿನಯಿಸಬೇಕಿತ್ತು. ಆದರೆ ಅವರನ್ನು ಈ ಸಿನಿಮಾದಿಂದ ಹೊರಗೆ ಹಾಕಲಾಗಿತ್ತು. ಶಾರುಖ್ ಖಾನ್ ಅವರ ಐದು ಸಿನಿಮಾಗಳಲ್ಲಿ ಐಶ್ವರ್ಯಾ ಅವರನ್ನು ಕಾಸ್ಟ್ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಆದರೆ, ಯಾವುದೇ ವಿವರಣೆ ನೀಡದೆ ಅವರನ್ನು ಹೊರಕ್ಕೆ ಇಟ್ಟರು.

ಶಾರುಖ್ ನಟನೆಯ ಐದು ಸಿನಿಮಾಗಳಿಗೆ ಐಶ್ವರ್ಯಾ ನಾಯಕಿ ಆಗಬೇಕಿತ್ತು; ಆದರೆ..
ಶಾರುಖ್​-ಐಶ್ವರ್ಯಾ
Follow us on

ಐಶ್ವರ್ಯಾ ರೈ ಅವರ ಬಗ್ಗೆ ಇತ್ತೀಚೆಗೆ ಸಾಕಷ್ಟು ಚರ್ಚೆ ಆಗುತ್ತಿದೆ. ವೈಯಕ್ತಿಕ ವಿಚಾರದಿಂದ ಅವರು ಆಗಾಗ ಸುದ್ದಿ ಆಗುತ್ತಾ ಇದ್ದಾರೆ. ಸಿನಿಮಾ ರಂಗದ ಆರಂಭದಲ್ಲಿ ಅವರು ಸಾಕಷ್ಟು ಚಾಲೆಂಜ್​​ಗಳನ್ನು ಎದುರಿಸಿದ್ದರು. ಸಿನಿಮಾ ರಂಗಕ್ಕೆ ಎಂಟ್ರಿ ಆದಾಗಲೇ ನಟಿಗೆ ದೊಡ್ಡ ಆಘಾತ ಸಿಕ್ಕ ಸಮಯವಿತ್ತು. ನಟಿಗೆ ಈ ಶಾಕ್ ಆಗಿದ್ದು ನಟ ಸಲ್ಮಾನ್ ಖಾನ್ ಅವರಿಂದ ಅಲ್ಲ, ಬದಲಿಗೆ ಶಾರುಖ್ ಖಾನ್ ಅವರಿಂದ. ಶಾರುಖ್ ಖಾನ್ ಅವರು ಐಶ್ವರ್ಯಾ ಅವರನ್ನು ಐದು ಸಿನಿಮಾಗಳಿಂದ ತೆಗೆದು ಹಾಕಿದ್ದರು.

ಐಶ್ವರ್ಯಾ ಮತ್ತು ನಟ ಶಾರುಖ್ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇವರಿಬ್ಬರ ಜೋಡಿಯನ್ನು ಅಭಿಮಾನಿಗಳು ಕೂಡ ಇಷ್ಟಪಟ್ಟಿದ್ದಾರೆ. ‘ದೇವದಾಸ್’ ಚಿತ್ರದಲ್ಲಿ ಶಾರುಖ್-ಐಶ್ವರ್ಯಾ ಜೋಡಿ ಅಭಿಮಾನಿಗಳಿಂದ ಸಾಕಷ್ಟು ಪ್ರೀತಿಯನ್ನು ಪಡೆದುಕೊಂಡಿದೆ. ಆದರೆ ಒಂದು ಹಂತದ ನಂತರ ಈ ಜೋಡಿ ಹಿರಿತೆರೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಶಾರುಖ್ ಖಾನ್ ಅವರೇ ಐಶ್ವರ್ಯಾನ ಹೊರಗೆ ಇಟ್ಟರು ಎನ್ನಲಾಗಿದೆ.

‘ವೀರ್ ಜರಾ’ ಚಿತ್ರದಲ್ಲಿ ಐಶ್ವರ್ಯಾ ರೈ ನಟಿಸಬೇಕಿತ್ತು. ಆದರೆ ಅವರನ್ನು ಹೊರಗೆ ಇಡಲಾಗಿತ್ತು. ಶಾರುಖ್ ಖಾನ್ ಅವರ ಐದು ಸಿನಿಮಾಗಳಲ್ಲಿ ಐಶ್ವರ್ಯಾ ಅವರನ್ನು ಹಾಕಿಕೊಳ್ಳುವ ಮಾತುಕತೆ ನಡೆಯುತ್ತಿತ್ತು. ಆದರೆ, ಯಾವುದೇ ವಿವರಣೆ ನೀಡದೆ ಅವರನ್ನು ಹೊರಕ್ಕೆ ಇಟ್ಟರು. ಇದು ಐಶ್ವರ್ಯಾಗೆ ಬೇಸರ ಮೂಡಿಸಿತ್ತು. ಈ ಬಗ್ಗೆ ಮಾತನಾಡಿದ್ದ ಐಶ್ವರ್ಯಾ, ‘ಈ ಬಗ್ಗೆ ನನ್ನ ಬಳಿ ಉತ್ತರ ಇಲ್ಲ’ ಎಂದು ಹೇಳಿದ್ದರು.

ಶಾರುಖ್ ಖಾನ್ ಅವರು ಈ ಮೊದಲು ಈ ಬಗ್ಗೆ ಮಾತನಾಡಿದ್ದರು. ‘ಅದು ನನ್ನ ತಪ್ಪು. ಐಶ್ವರ್ಯಾ ಅವರ ಬದಲು ಬೇರೆಯವರು ಬರೋದು ಕಷ್ಟವೇ. ಅವರು ನನಗೆ ಒಳ್ಳೆಯ ಫ್ರೆಂಡ್. ನಿರ್ಮಾಪಕರ ಪ್ರಕಾರ ಅದು ಉತ್ತಮ ನಿರ್ಧಾರ ಆಗಿತ್ತು. ಆ ಸಮಯದಲ್ಲಿ ಅದು ನನಗೆ ಸರಿ ಎನಿಸಿತು. ನಾನು ಆ ಬಗ್ಗೆ ಅವರಿಗೆ ಕ್ಷಮೆ ಕೇಳಿದ್ದೆ’ ಎಂದಿದ್ದರು ಶಾರುಖ್.

‘ಚಲ್ತೇ’, ‘ಕಲ್ ಹೋ ನಾ ಹೋ’ ಮತ್ತು ‘ವೀರ್ ಜರಾ’ ನಂತಹ ಬ್ಲಾಕ್‌ಬಸ್ಟರ್ ಚಲನಚಿತ್ರಗಳನಲ್ಲಿ ಐಶ್ವರ್ಯಾ ನಟಿಸಬೇಕಿತ್ತು. ಐಶ್ವರ್ಯಾ ಬದಲಿಗೆ ಇತರ ನಟಿಯರನ್ನು ಸಿನಿಮಾಗೆ ಸೇರಿಸಲಾಯಿತು ಮತ್ತು ಈ ಸಿನಿಮಾಗಳು ದೊಡ್ಡ ಪರದೆಯ ಮೇಲೆ ಸೂಪರ್ ಹಿಟ್ ಆದವು.

ಇದನ್ನೂ ಓದಿ: ನಿಜಕ್ಕೂ ಐಶ್ವರ್ಯಾ ರೈ ವಿರುದ್ಧ ದ್ವೇಷ ಸಾಧಿಸಿದ್ದರಾ ಸಲ್ಲು? ತಮ್ಮ ಕೊಟ್ಟಿದ್ದ ಸ್ಪಷ್ಟನೆಯಲ್ಲಿ ಏನಿತ್ತು?

ಸದ್ಯ ಐಶ್ವರ್ಯಾ ರೈ ಅವರು ವಿಚ್ಛೇದನದ ಕಾರಣಕ್ಕೆ ಸುದ್ದಿಯಲ್ಲಿ ಇದ್ದಾರೆ. ಅವರು ಅಭಿಷೇಕ್ ಬಚ್ಚನ್ ಜೊತೆ ವಿಚ್ಛೇದನ ಪಡೆದಿದ್ದಾರೆ ಎಂದು ಸುದ್ದಿ ಆಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಸದ್ಯ ಅವರು ಸಿನಿಮಾಗಳಲ್ಲೂ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.