ಕಾಸ್ಟಿಂಗ್ ಕೌಚ್ ತನಿಖೆಗೆ ಬಾಲಿವುಡ್ನಲ್ಲಿ ರಚನೆ ಆಗಲಿದೆ ಸಮಿತಿ? ದೊಡ್ಡ ತಲೆಗಳಿಗೆ ಆಗಿದೆ ಭಯ
ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಸ್ಥಿತಿ-ಗತಿ ಅರಿಯಲು ರಚಿಸಲಾಗಿದ್ದ ಹೇಮಾ ಸಮಿತಿಯ ವರದಿಯನ್ನು ಕೊನೆಗೂ ಕೇರಳ ಸರ್ಕಾರ ಪ್ರಕಟಿಸಿದ್ದು, ಕೆಲವು ಆಘಾತಕಾರಿ ಅಂಶಗಳು ಹೊರಬಂದಿವೆ. ಈ ಬೆನ್ನಲ್ಲೇ ಬಾಲಿವುಡ್ನ ಚಿತ್ರರಂಗದ ಬಗ್ಗೆ ತನಿಖೆ ನಡೆಸಲು ಸಮಿತಿ ಒಂದನ್ನು ರಚನೆ ಮಾಡಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ.
ಮಲಯಾಳಂ ಚಿತ್ರರಂಗದಲ್ಲಿ ಜಸ್ಟೀಸ್ ಹೇಮಾ ಸಮಿತಿ ವರದಿ ಸಾಕಷ್ಟು ಸಂಚಲನ ಸೃಷ್ಟಿ ಮಾಡಿದೆ. ಸಿನಿಮಾಗಳ ಮೂಲಕ ಗಮನ ಸೆಳೆಯುತ್ತಿರುವ ಮಲಯಾಳಂ ಚಿತ್ರರಂಗದ ಆಂತರಿಕ ಮುಖ ಈ ರೀತಿ ಇಲ್ಲ ಎನ್ನಲಾಗುತ್ತಿದೆ. ಹೇಮಾ ವರದಿಯಲ್ಲಿ ಮಲಯಾಳಂ ಚಿತ್ರರಂಗದಲ್ಲಿ ನಟಿಯರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೇಳಲಾಗಿದೆ. ಈ ಬೆನ್ನಲ್ಲೇ ಬಾಲಿವುಡ್ ಚಿತ್ರರಂಗದಲ್ಲಿ ನಡೆಯುತ್ತಿರುವ ಕಾಸ್ಟಿಂಗ್ ಕೌಚ್ ಬಗ್ಗೆ ತನಿಖೆ ನಡೆಸಲು ಸಮಿತಿ ಒಂದನ್ನು ರಚನೆ ಮಾಡಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ.
ಆಶಾ ಪಾರೇಖ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಉನ್ನತ ಮಟ್ಟದಲ್ಲಿ ಈ ತನಿಖೆ ಆಗಬೇಕು. ಕೆಲಸದ ಸ್ಥಳದಲ್ಲಿ ಮಹಿಳೆಯರ ಸುರಕ್ಷತೆಯು ಸರ್ಕಾರದ ಆದ್ಯತೆಯಾಗಿರಬೇಕು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕೆಲ ವರ್ಷಗಳ ಹಿಂದೆ ಬಾಲಿವುಡ್ನಲ್ಲಿ ನಡೆದ MeToo ಆಂದೋಲನ ಸಂಚಲನ ಸೃಷ್ಟಿ ಮಾಡಿತ್ತು.
MeToo ಆಂದೋಲನದ ವೇಳೆ ಅನೇಕ ಹೀರೋಯಿನ್ಗಳು ವಿವಿಧ ರೀತಿಯ ಆರೋಪಗಳನ್ನು ಮಾಡಿದರು. ಇದರಲ್ಲಿ ಸಂತ್ರಸ್ತೆಯರು ನಿರ್ಮಾಪಕರು, ನಿರ್ದೇಶಕರ ಹೆಸರನ್ನು ಹೇಳಿದ್ದರು. ಆದರೆ, ಯಾರಿಗೂ ಶಿಕ್ಷೆ ಆಗಿಲ್ಲ. ಸಣ್ಣ ಮೀನುಗಳು ಮಾತ್ರ ಇದರಲ್ಲಿ ಸಿಕ್ಕಿ ಬಿದ್ದವು. ದೊಡ್ಡವರು ಆರಾಮಾಗಿ ಓಡಾಡಿಕೊಂಡಿದ್ದಾರೆ ಅನ್ನೋದು ಅನೇಕರ ಅಭಿಪ್ರಾಯ. ಸಮಿತಿ ರಚನೆ ಆದರೆ ಈ ವಿಚಾರಗಳು ಹೊರಗೆ ಬರುತ್ತವೆ ಅನ್ನೋದು ಅನೇಕರ ನಂಬಿಕೆ.
ಉಳಿದ ಚಿತ್ರರಂಗಗಳಿಗೆ ಹೋಲಿಕೆ ಮಾಡಿದರೆ ಬಾಲಿವುಡ್ನಲ್ಲಿ ಕಾಸ್ಟಿಂಗ್ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅನೇಕ ನಟಿಯರು ತಮ್ಮ ಕಹಿ ಅನುಭವ ಹಂಚಿಕೊಂಡಿದ್ದಾರೆ. ಆದರೆ, ಯಾರಿಗೂ ಶಿಕ್ಷೆ ಮಾತ್ರ ಆಗಿಲ್ಲ. ಈ ಬಗ್ಗೆ ಮಾತನಾಡಿದ ಹೀರೋಯಿನ್ಗಳೇ ಈಗ ಟೀಕೆ ಎದುರಿಸುವಂಥ ಪರಿಸ್ಥಿತಿ ಬಂದೊದಗಿದೆ.
ಇದನ್ನೂ ಓದಿ: ಮಲಯಾಳಂ ಚಿತ್ರರಂಗದ ಕರಾಳ ಮುಖ ತೆರೆದಿಟ್ಟ ಹೇಮಾ ಸಮಿತಿ ವರದಿ
ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಸಮಿತಿಯ ವರದಿಯನ್ನು ಅನೇಕರು ಒಪ್ಪಿದ್ದಾರೆ. ಕೆಲವು ಹೀರೋಯಿನ್ಗಳೇ ಈ ವಿಚಾರವನ್ನು ಅಲ್ಲಗಳೆದಿದ್ದಾರೆ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.