ಶಾರುಖ್ ಖಾನ್ ಬಳಿ ಇದೆ ನೂರಾರು ಅವಾರ್ಡ್ಸ್​; ಇದರಲ್ಲಿ ಖರೀದಿಸಿದ್ದೆಷ್ಟು?

ಶಾರುಖ್ ಖಾನ್ ಅವರ ಬಳಿ 150ಕ್ಕೂ ಅಧಿಕ ಅವಾರ್ಡ್​ಗಳು ಇವೆ. ಅವರ ಸಿನಿಮಾಗಳು ಸಾವಿರಾರು ಕೋಟಿ ರೂಪಾಯಿ ಗಳಿಕೆ ಮಾಡಿದ ಉದಾಹರಣೆ ಇದೆ. ಅವರಿಗೆ ಈ ಮೊದಲು ಪ್ರಶಸ್ತಿಗಳ ಬಗ್ಗೆ ಸಖತ್ ಕ್ರೇಜ್ ಇತ್ತು. ಆ ಬಗ್ಗೆ ಅವರು ಓಪನ್ ಆಗಿಯೇ ಹೇಳಿಕೊಂಡಿದ್ದರು.

ಶಾರುಖ್ ಖಾನ್ ಬಳಿ ಇದೆ ನೂರಾರು ಅವಾರ್ಡ್ಸ್​; ಇದರಲ್ಲಿ ಖರೀದಿಸಿದ್ದೆಷ್ಟು?
ಶಾರುಖ್ ಖಾನ್
Edited By:

Updated on: Aug 06, 2024 | 7:45 AM

ಶಾರುಖ್ ಖಾನ್ ಅವರು ಬಾಲಿವುಡ್​ನಲ್ಲಿ ಸ್ಟಾರ್ ಹೀರೋ ಆಗಿ ಬೆಳೆದಿದ್ದಾರೆ. ಅವರ ಒಟ್ಟೂ ಆಸ್ತಿ ಆರು ಸಾವಿರ ಕೋಟಿಗೂ ಅಧಿಕವಾಗಿದೆ. ಶಾರುಖ್ ಖಾನ್ ಅವರು ಇಷ್ಟೆಲ್ಲ ಸಾಧನೆ ಮಾಡಿದ್ದು ಸ್ವಂತ ಶ್ರಮದಿಂದ. ಅವರು ಜೀರೋದಿಂದ ಸೂಪರ್​ಸ್ಟಾರ್ ಆಗಿದ್ದಾರೆ. ಶಾರುಖ್ ಖಾನ್ ಅವರ ಬಳಿ ನೂರಾರು ಅವಾರ್ಡ್​​ಗಳು ಕೂಡ ಇವೆ. ಅಚ್ಚರಿ ವಿಷಯ ಎಂದರೆ ಈ ಪೈಕಿ ಕೆಲ ಅವಾರ್ಡ್​ಗಳನ್ನು ಅವರು ಖರೀದಿ ಮಾಡಿದ್ದರು. ಇದನ್ನು ವಿದ್ಯಾ ಬಾಲನ್ ಅವರು ಎಕ್ಸ್​ಪೋಸ್​ ಮಾಡಿದ್ದರು.

ಅದೊಂದು ಅವಾರ್ಡ್ ಫಂಕ್ಷನ್. ಈ ಕಾರ್ಯಕ್ರಮದಲ್ಲಿ ವಿದ್ಯಾ ಬಾಲನ್ ಅವರ ಕಾಲೆಳೆಯೋ ಪ್ರಯತ್ನ ಮಾಡಿದರು ಶಾರುಖ್. ‘ನಿಮ್ಮ ಬಳಿ ಎಷ್ಟು ಅವಾರ್ಡ್​ ಇದೆ’ ಎಂದು ಶಾರುಖ್ ಖಾನ್ ಅವರು ವಿದ್ಯಾ ಬಾಲನ್ ಬಳಿ ಕೇಳಿದರು. ಇದಕ್ಕೆ ಉತ್ತರಿಸಿದ ವಿದ್ಯಾ, ‘47’ ಎಂದರು. ಶಾರುಖ್ ಖಾನ್ ‘ಓಹ್ 47’ ಎಂದು ಉದ್ಘರಿಸಿದರು. ಕೇವಲ ಇಷ್ಟೇ ಪ್ರಶಸ್ತಿಗಳಾ​ ಅನ್ನೋ ರೀತಿಯಲ್ಲಿ ಶಾರುಖ್ ಖಾನ್ ಅವರ ರಿಯಾಕ್ಷನ್ ಇತ್ತು.

ಎಲ್ಲರೂ ಶಾರುಖ್ ಖಾನ್ ಅವರು ವಿದ್ಯಾ ಬಾಲನ್ ಅವರ ಕಾಲೆಳೆದರು ಎಂದೇ ಭಾವಿಸಿದ್ದರು. ಆದರೆ, ವಿದ್ಯಾ ವಾಪಸ್ ತಿರುಗೇಟು ಕೊಟ್ಟಿದ್ದು ನೋಡಿ ಎಲ್ಲರೂ ಶಾಕ್ ಆದರು. ‘ನಿಮ್ಮ ಬಳಿ ಎಷ್ಟು ಅವಾರ್ಡ್​ಗಳು ಇವೆ’ ಎಂದು ವಿದ್ಯಾ ಅವರು ಶಾರುಖ್​ಗೆ ಕೇಳಿದರು. ಇದಕ್ಕೆ ಉತ್ತರಿಸಿದ ಶಾರುಖ್ ಖಾನ್ ಅವರು ಹೆಮ್ಮೆಯಿಂದ 155 ಎಂದರು. ‘ಇದರಲ್ಲಿ ಖರೀದಿ ಮಾಡಿದ್ದೆಷ್ಟು’ ಎಂದು ವಿದ್ಯಾ ನೇರವಾಗಿ ಪ್ರಶ್ನೆ ಮಾಡಿದರು. ಇದನ್ನು ಕೇಳಿ ಶಾರುಖ್ ಖಾನ್ ಅವರು ನಿಜಕ್ಕೂ ಶಾಕ್ ಆದರು. ಅವರ ಬಳಿ ಉತ್ತರವೇ ಬಂದಿಲ್ಲ.


ಶಾರುಖ್ ಖಾನ್ ಅವರಿಗೆ ಪ್ರಶಸ್ತಿಗಳ ಬಗ್ಗೆ ಅಪಾರ ಸೆಳೆತ ಇತ್ತು. ಹಣಕ್ಕಿಂತ ಅವರು ಅವಾರ್ಡ್​ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು. ‘ನನಗೆ ಪ್ರಶಸ್ತಿಗಳ ಬಗ್ಗೆ ಸಾಕಷ್ಟು ದುರಾಸೆ ಇತ್ತು. ದುರಾಸೆ ಇದ್ದಾಗ ನೀವು ಕೆಟ್ಟವರಾಗುತ್ತೀರಿ. ನನಗೆ ಒಂದು ಪ್ರಶಸ್ತಿ ಬೇಕಿತ್ತು. ಹೀಗಾಗಿ, ನಾನು ಎಡಿಟರ್ ಆಫೀಸ್​ಗೆ ಹೋಗಿ ಹಣ ಕೊಡ್ತೀನಿ ಅವಾರ್ಡ್ ಕೊಡಿ ಎಂದು ಕೇಳಿದ್ದೆ’ ಎಂಬುದಾಗಿ ಶಾರುಖ್ ಖಾನ್ ಕಾರ್ಯಕ್ರಮ ಒಂದರಲ್ಲಿ ಹೇಳಿಕೊಂಡಿದ್ದರು.

ಇದನ್ನೂ ಓದಿ: ಶಾರುಖ್ ಖಾನ್ ಮಗಳು ಸುಹಾನಾ ತಲೆ ಕೂದಲಿಗೆ ಧರಿಸಿರುವ ಕ್ಲಿಪ್ಪಿನ ಬೆಲೆ ಎಷ್ಟು ಸಾವಿರ ಗೊತ್ತೆ?

ಶಾರುಖ್ ಖಾನ್ ಅವರಿಗೆ ಈವರೆಗೆ ಒಂದೇ ಒಂದು ರಾಷ್ಟ್ರ ಪ್ರಶಸ್ತಿ ಕೂಡ ಬಂದಿಲ್ಲ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಹೊರತಾಗಿಯೂ ಅವರಿಗೆ ಸರ್ಕಾರ ಕೊಡೋ ಈ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗಿಲ್ಲ. ಇತ್ತೀಚೆಗೆ ಶಾರುಖ್​ಗೆ ಪ್ರಶಸ್ತಿಗಳ ಬಗ್ಗೆ ಇರೋ ಕ್ರೇಜ್ ಕಡಿಮೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.