ಅಪ್ಪನಂತೆ ನಟಿಸಿದ ಶಾರುಖ್ ಪುತ್ರ ಅಬ್ರಾಮ್, ವಿಡಿಯೋ ಸಖತ್ ವೈರಲ್

Shah Rukh Khan: ಅಪ್ಪನಂತೆ ರೊಮ್ಯಾಂಟಿಕ್ ಆಗಿ ಸ್ಟೈಲ್ ಮಾಡಿ ವೈರಲ್ ಆದ ಶಾರುಖ್ ಖಾನ್ ಪುತ್ರ ಅಬ್​ರಾಮ್.

ಅಪ್ಪನಂತೆ ನಟಿಸಿದ ಶಾರುಖ್ ಪುತ್ರ ಅಬ್ರಾಮ್, ವಿಡಿಯೋ ಸಖತ್ ವೈರಲ್
ಶಾರುಖ್
Follow us
ಮಂಜುನಾಥ ಸಿ.
|

Updated on: Dec 16, 2023 | 5:26 PM

ಶಾರುಖ್ ಖಾನ್ (Shah Rukh Khan), ಭಾರತದ ಟಾಪ್ ರೊಮ್ಯಾಂಟಿಕ್ ಹೀರೋ, ಅವರು ತಮ್ಮ ಎರಡೂ ಬಾಹುಗಳನ್ನು ಚಾಚಿಸಿ ಮೆಲ್ಲಗೆ ನಸು ನಕ್ಕರೆ ಯುವತಿಯರೆಲ್ಲ ಫಿದಾ ಆಗಿಬಿಡುತ್ತಿದ್ದರು. ಇತ್ತೀಚೆಗೆ ತುಸು ಆಕ್ಷನ್​ ಕಡೆಗೆ ಹೊರಳಿದ್ದಾರಾದರೂ, ಅವರ ಬಾಹುಗಳನ್ನು ಚಾಚುವ ಸ್ಟೈಲ್, ಇಂದಿಗೂ ಐಕಾನಿಕ್ ಎನ್ನಿಸಿಕೊಂಡಿದೆ. ಇದೀಗ ಅವರ ಕೊನೆಯ ಮಗ ಅಬ್ರಾಮ್ ಅಪ್ಪನ ಅದೇ ಸ್ಟೈಲ್ ಅನ್ನು ನಕಲು ಮಾಡಿದ್ದಾರೆ. ಅಪ್ಪನಂತೆ ರೊಮ್ಯಾಂಟಿಕ್ ಆಗಲು ಪ್ರಯತ್ನಿಸಿ ಸಖತ್ ವೈರಲ್ ಸಹ ಆಗಿದ್ದಾರೆ.

ನಿನ್ನೆ (ಡಿಸೆಂಬರ್ 15) ರಂದು ಮುಂಬೈನ ಅತ್ಯಂತ ಪ್ರತಿಷ್ಠಿತ ಧೀರೂಭಾಯಿ ಅಂಬಾನಿ ಶಾಲೆಯ ಶಾಲಾ ವಾರ್ಷಿಕೋತ್ಸವ. ಮುಂಬೈನ ಅತ್ಯಂತ ದೊಡ್ಡ ದೊಡ್ಡ ಸೆಲೆಬ್ರಿಟಿಗಳ ಮಕ್ಕಳೆಲ್ಲ ಓದುವುದು ಇದೇ ಧೀರುಬಾಯ್ ಅಂಬಾನಿ ಶಾಲೆಯಲ್ಲಿ. ಶಾರುಖ್ ಖಾನ್ ಕೊನೆಯ ಪುತ್ರ ಅಬ್​ರಾಮ್ ಸಹ ಇದೇ ಶಾಲೆಯಲ್ಲಿ ಪ್ರಾಥಮಿಕ ತರಗತಿಗಳನ್ನು ಕಲಿಯುತ್ತಿದ್ದಾರೆ. ನಿನ್ನೆ ನಡೆದ ವಾರ್ಷಿಕೋತ್ಸವದ ನಾಟಕದಲ್ಲಿ ಅಬ್​ರಾಮ್ ಪುಟ್ಟ ಪಾತ್ರವೊಂದನ್ನು ಮಾಡಿದ್ದರು. ಅವರ ನಾಟಕದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಇಂಗ್ಲೀಷ್​ ನಾಟಕವೊಂದರಲ್ಲಿ ನಟಿಸಿರುವ ಅಬ್​ರಾಮ್, ‘‘ನನಗೆ ಅಪ್ಪುಗೆ ಎಂದರೆ ಇಷ್ಟ ಎಂದು ಅಪ್ಪನಂತೆ ಕೈ ಚಾಚಿ ನಿಲ್ಲುತ್ತಾರೆ, ಆ ಸಮಯಕ್ಕೆ ಸರಿಯಾಗಿ ಶಾರುಖ್ ಖಾನ್​ರ ಡಿಡಿಎಲ್​ಜೆ ಸಿನಿಮಾದ ಸಂಗೀತ ಹಿನ್ನೆಲೆಯಲ್ಲಿ ಮೊಳಗುತ್ತದೆ. ಆಗ ಹುಡುಗಿಯೊಬ್ಬಾಕೆ ಬಂದು ಅಬ್​ರಾಮ್​ ಅನ್ನು ಅಪ್ಪಿಕೊಳ್ಳುತ್ತಾಳೆ. ಮಗನ ಶೋ ನೋಡಲು ಆಗಮಿಸಿ ಮುಂದೆಯೇ ಕೂತಿದ್ದ ಶಾರುಖ್ ಖಾನ್, ಗೌರಿ ಖಾನ್​​ ಅವರುಗಳು ಮಗನ ಫರ್ಮಾರ್ಪೆನ್ಸ್ ನೋಡಿ ನಗುತ್ತಾ ಚಪ್ಪಾಳೆ ತಟ್ಟಿದ್ದಾರೆ. ಶಾರುಖ್, ಗೌರಿ ಖಾನ್ ಜೊತೆಗೆ ಪುತ್ರಿ ಸುಹಾನಾ ಖಾನ್ ಸಹ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಇದನ್ನೂ ಓದಿ:ಶಾರುಖ್ ಖಾನ್ ಪುತ್ರಿಯ ಬಗ್ಗೆ ಕರಣ್ ಜೋಹರ್ ಮಾತು

ಶಾರುಖ್ ಖಾನ್ ಪುತ್ರ ಮಾತ್ರವೇ ಅಲ್ಲದೆ, ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ಪುತ್ರಿ ಆದ್ಯಾ ಸೇರಿದಂತೆ ಇನ್ನೂ ಹಲವು ಸೆಲೆಬ್ರಿಟಿಗಳ ಮಕ್ಕಳು ಧೀರೂಬಾಯ್ ಅಂಬಾನಿ ಶಾಲೆಯಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದು, ನಿನ್ನೆಯ ಶಾಲಾ ವಾರ್ಷಿಕೋತ್ಸವದಲ್ಲಿ ಅವರೆಲ್ಲ ಭಾಗಿಯಾಗಿದ್ದರು. ಐಶ್ವರ್ಯಾ ರೈ ಪುತ್ರಿ ಸಹ ನಿನ್ನೆಯ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಪ್ರದರ್ಶನ ನೀಡಿದ್ದರು.

ಶಾರುಖ್ ಖಾನ್ ಹಾಗೂ ಗೌರಿ ಖಾನ್​ರ ಮೂರನೇ ಮಗ ಅಬ್​ರಾಮ್, ಮೊದಲ ಮಗ ಆರ್ಯನ್ ಖಾನ್ ಸಿನಿಮಾ ಕುರಿತ ಪದವಿ ಪಡೆದಿದ್ದು ನಿರ್ದೇಶಕನಾಗುವ ಉಮೇದಿನಲ್ಲಿದ್ದಾರೆ. ಶಾರುಖ್ ಖಾನ್​ರ ಪುತ್ರಿ ಸುಹಾನಾ ಖಾನ್ ಸಹ ನ್ಯೂಯಾರ್ಕ್​ನಲ್ಲಿಯೇ ಸಿನಿಮಾ ಶಿಕ್ಷಣ ಪಡೆದಿದ್ದು, ಈಗಾಗಲೇ ಒಂದು ಕಿರು ಚಿತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ‘ದಿ ಆರ್ಚಿಸ್’ ಸಿನಿಮಾದಲ್ಲಿ ನಾಯಕಿಯಾಗಿಯೂ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ