ಯಾರೇ ಬಂದರೂ ‘ಡಂಕಿ’ ಕ್ರಿಸ್​​ಮಸ್ ರಿಲೀಸ್ ಫಿಕ್ಸ್; ಸ್ಪಷ್ಟನೆ ನೀಡಿದ ಶಾರುಖ್ ಖಾನ್

ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾದ ರಿಲೀಸ್ ದಿನಾಂಕ ವಿಳಂಬ ಆಗಿತ್ತು. ಅಂದುಕೊಂಡಿದ್ದಕ್ಕಿಂತಲೂ ಎರಡು ತಿಂಗಳು ತಡವಾಗಿ ಚಿತ್ರ ಬಿಡುಗಡೆ ಆಯಿತು. ‘ಡಂಕಿ’ ಸಿನಿಮಾದ ಕಥೆಯೂ ಹಾಗೆಯೇ ಆಗಬಹುದು ಎಂದು ಅನೇಕರು ಊಹಿಸಿದ್ದರು.

ಯಾರೇ ಬಂದರೂ ‘ಡಂಕಿ’ ಕ್ರಿಸ್​​ಮಸ್ ರಿಲೀಸ್ ಫಿಕ್ಸ್; ಸ್ಪಷ್ಟನೆ ನೀಡಿದ ಶಾರುಖ್ ಖಾನ್
ಶಾರುಖ್ ಖಾನ್

Updated on: Sep 28, 2023 | 7:02 AM

ಶಾರುಖ್ ಖಾನ್ ಈ ವರ್ಷ ಬ್ಯಾಕ್ ಟು ಬ್ಯಾಕ್ ಎರಡು ಹಿಟ್ ನೀಡಿದ್ದಾರೆ. ‘ಪಠಾಣ್’ (Pathan Movie) ಹಾಗೂ ‘ಜವಾನ್’ ಎರಡೂ ಚಿತ್ರಗಳು ಯಶಸ್ಸು ಕಂಡಿವೆ. ಈ ವರ್ಷ ಮೂರನೇ ಯಶಸ್ಸನ್ನು ಪಡೆಯಲು ಅವರು ರೆಡಿ ಆಗಿದ್ದಾರೆ. ‘ಡಂಕಿ’ ಸಿನಿಮಾ (Dunki Movie) ಕ್ರಿಸ್​​ಮಸ್ ಪ್ರಯುಕ್ತ ಡಿಸೆಂಬರ್​ನಲ್ಲಿ ರಿಲೀಸ್ ಆಗಲಿದೆ ಎಂದು ಮೊದಲೇ ಘೋಷಣೆ ಆಗಿತ್ತು. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಶಾರುಖ್ ಖಾನ್ ಸ್ಪಷ್ಟನೆ ನೀಡಿದ್ದಾರೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದೆ. ಡಿಸೆಂಬರ್ ಸಂದರ್ಭದಲ್ಲಿ ಹಲವು ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗಲಿವೆ.

ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾದ ರಿಲೀಸ್ ದಿನಾಂಕ ವಿಳಂಬ ಆಗಿತ್ತು. ಸಿನಿಮಾ ಕೆಲಸಗಳು ಪೂರ್ಣಗೊಳ್ಳದ ಕಾರಣ ಅವರು ಚಿತ್ರದ ರಿಲೀಸ್ ದಿನಾಂಕವನ್ನು ಮುಂದೂಡಿಕೊಂಡಿದ್ದರು. ಅಂದುಕೊಂಡಿದ್ದಕ್ಕಿಂತಲೂ ಎರಡು ತಿಂಗಳು ತಡವಾಗಿ ಚಿತ್ರ ಬಿಡುಗಡೆ ಆಯಿತು. ‘ಡಂಕಿ’ ಸಿನಿಮಾದ ಕಥೆಯೂ ಹಾಗೆಯೇ ಆಗಬಹುದು ಎಂದು ಅನೇಕರು ಊಹಿಸಿದ್ದರು. ಆದರೆ, ಹಾಗಾಗುವುದಿಲ್ಲವಂತೆ. ‘ಡಂಕಿ’ ಸಿನಿಮಾದ ಬಿಡುಗಡೆ ದಿನಾಂಕ ವಿಳಂಬ ಆಗುವುದಿಲ್ಲ ಎನ್ನುವ ಸ್ಪಷ್ಟನೆ ಸಿಕ್ಕಿದೆ.

ಶಾರುಖ್ ಖಾನ್ ಅವರು ಆಗಾಗ #AskSRK ಸೆಷನ್ ನಡೆಸುತ್ತಾರೆ. ಇತ್ತೀಚೆಗೆ ಅವರು ‘ಜವಾನ್’ ಸಿನಿಮಾ ಗೆದ್ದ ಖುಷಿಯಲ್ಲಿ ಇದನ್ನು ನಡೆಸಿದ್ದರು. ಈ ವೇಳೆ ‘ಡಂಕಿ ರಿಲೀಸ್ ಡೇಟ್ ಫಿಕ್ಸ್’ ಎಂದು ಶಾರುಖ್ ಖಾನ್​ಗೆ ಕೇಳಲಾಯಿತು. ಇದಕ್ಕೆ ಅವರು ‘ಡಂಕಿ ಡೇಟ್ ಫಿಕ್ಸ್ ಇದೆ’ ಎಂದಿದ್ದಾರೆ. ಈ ವಿಚಾರ ಫ್ಯಾನ್ಸ್​ಗೆ ಖುಷಿ ನೀಡಿದೆ.

ಇದನ್ನೂ ಓದಿ: ಪ್ರಭಾಸ್, ಶಾರುಖ್ ಖಾನ್ ಅಭಿಮಾನಿಗಳಿಂದ ವಿವೇಕ್ ಅಗ್ನಿಹೋತ್ರಿಗೆ ನಿಂದನೆ; ಬೇಸರ ಹೊರಹಾಕಿದ ನಿರ್ದೇಶಕ

ಡಿಸೆಂಬರ್ 22ರಂದು ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ಕೂಡ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಶೀಘ್ರದಲ್ಲೇ ಘೋಷಣೆ ಆಗಲಿದೆ. ಒಂದೊಮ್ಮೆ ಹಾಗಾದಲ್ಲಿ ಬಾಕ್ಸ್ ಆಫೀಸ್​ನಲ್ಲಿ ‘ಸಲಾರ್’ Vs ‘ಡಂಕಿ’ ಆಗಲಿದೆ. ಈ ಪೈಕಿ ಯಾವ ಸಿನಿಮಾ ಗೆಲ್ಲುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಇದರ ಜೊತೆಗೆ ರೇಸ್​ಗೆ ಮತ್ತೊಂದಷ್ಟು ಸಿನಿಮಾ ಸೇರ್ಪಡೆ ಆಗಬಹುದು. ‘ಸಲಾರ್’ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಇದೆ. ‘ಹೊಂಬಾಳೆ ಫಿಲ್ಮ್ಸ್’ ಚಿತ್ರವನ್ನು ನಿರ್ಮಾಣ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ