AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಣ್ಣವರಿದ್ದಾಗಲೇ ಮದುವೆ ಆಗುವ ಕನಸು ಕಂಡಿದ್ದ ಲತಾ ಮಂಗೇಶ್ಕರ್; ಆ ವ್ಯಕ್ತಿ ಯಾರು?

ಅದು 1930ರ ಸಂದರ್ಭ. ಲತಾ ಕುಟುಂಬಕ್ಕೆ ಕೆ.ಎಲ್. ಸೈಗಲ್ ಮಾದರಿ ಆಗಿದ್ದರು. ಅವರ ಕುಟುಂಬದಲ್ಲಿ ಸೈಗಲ್ ಹಾಡುಗಳು ಸಖತ್ ಫೇಮಸ್ ಆಗಿದ್ದವು. ಲತಾ ಮನೆಯಲ್ಲಿ ಸೈಗಲ್ ಹಾಡುಗಳನ್ನು ಮಾತ್ರ ಕೇಳಲು, ಹಾಡಲು ಅವಕಾಶ ಇತ್ತು. ಈ ಕಾರಣಕ್ಕೆ ಲತಾಗೆ ಸೈಗಲ್ ಮೇಲೆ ಪ್ರೀತಿ ಹುಟ್ಟಿತು.

ಸಣ್ಣವರಿದ್ದಾಗಲೇ ಮದುವೆ ಆಗುವ ಕನಸು ಕಂಡಿದ್ದ ಲತಾ ಮಂಗೇಶ್ಕರ್; ಆ ವ್ಯಕ್ತಿ ಯಾರು?
ಲತಾ ಮಂಗೇಶ್ಕರ್
ರಾಜೇಶ್ ದುಗ್ಗುಮನೆ
|

Updated on: Sep 28, 2023 | 11:46 AM

Share

ಲತಾ ಮಂಗೇಶ್ಕರ್ (Lata Mangeshkar) ಅವರಿಗೆ ಇಂದು (ಸೆಪ್ಟೆಂಬರ್ 28) ಜನ್ಮದಿನ. ಅವರನ್ನು ಎಲ್ಲರೂ ನೆನಪಿಸಿಕೊಳ್ಳುತ್ತಿದ್ದಾರೆ. ಅವರು ನಮ್ಮನ್ನು ಅಗಲಿದರೂ ಅವರ ಧ್ವನಿ ಸದಾ ನಮ್ಮೊಂದಿಗೆ ಇರುತ್ತದೆ ಎನ್ನುವ ಭಾವನೆ ಅನೇಕರದ್ದು. ಅವರ ಜೀವನದಲ್ಲಿ ಅನೇಕ ರೋಚಕ, ವಿಚಿತ್ರ ಘಟನೆಗಳು ನಡೆದಿವೆ. ಆ ಪೈಕಿ ಕೆಎಲ್ ಸೈಗಲ್ ವಿಚಾರವೂ ಒಂದು. ಲತಾ ಮಂಗೇಶ್ಕರ್ ಅವರು ಈ ಬಗ್ಗೆ ಕೆಲವು ಬಾರಿ ಹೇಳಿಕೊಂಡಿದ್ದರು. ಏನಿದು ಘಟನೆ? ಕೆಎಲ್ ಸೈಗಲ್​ನ ಮದುವೆ ಆಗಬೇಕು ಎಂದು ಲತಾ ಕನಸು ಕಂಡಿದ್ದೇಕೆ? ಇಲ್ಲಿದೆ ಮಾಹಿತಿ.

ಅದು 1930ರ ಸಂದರ್ಭ. ಲತಾ ಕುಟುಂಬಕ್ಕೆ ಕೆ.ಎಲ್. ಸೈಗಲ್ ಮಾದರಿ ಆಗಿದ್ದರು. ಅವರ ಕುಟುಂಬದಲ್ಲಿ ಸೈಗಲ್ ಹಾಡುಗಳು ಸಖತ್ ಫೇಮಸ್ ಆಗಿದ್ದವು. ಲತಾ ಮನೆಯಲ್ಲಿ ಸೈಗಲ್ ಹಾಡುಗಳನ್ನು ಮಾತ್ರ ಕೇಳಲು, ಹಾಡಲು ಅವಕಾಶ ಇತ್ತು. ಈ ಕಾರಣಕ್ಕೆ ಲತಾಗೆ ಸೈಗಲ್ ಮೇಲೆ ಪ್ರೀತಿ ಹುಟ್ಟಿತು. ಅವರನ್ನು ಮದುವೆ ಆಗುವ ಕನಸು ಕಂಡರು ಲತಾ.

‘ನನಗೆ ಸೈಗಲ್ ಅವರನ್ನು ಭೇಟಿ ಮಾಡಬೇಕು ಎಂದಿತ್ತು. ನಾನು ಅವರನ್ನೇ ಮದುವೆ ಆಗುತ್ತೇನೆ ಎಂದು ಸಣ್ಣವಳಿದ್ದಾಗ ಹೇಳುತ್ತಿದ್ದೆ. ನನ್ನ ಮದುವೆ ವಯಸ್ಸು ಬರುವ ವೇಳೆಗೆ ಅವರಿಗೆ ವಯಸ್ಸಾಗಿರುತ್ತದೆ ಎಂದು ಅಪ್ಪ ತಿಳಿ ಹೇಳಲು ಪ್ರಯತ್ನಿಸುತ್ತಿದ್ದರು’ ಎಂದಿದ್ದರು ಲತಾ.

ಸೈಗಲ್ ಅವರನ್ನು ಭೇಟಿ ಮಾಡಲು ಲತಾಗೆ ಸಾಧ್ಯವೇ ಆಗಿಲ್ಲ. ‘ನಾನು ಸೈಗಲ್​ ಅವರನ್ನು ಭೇಟಿ ಮಾಡಿಲ್ಲ ಎನ್ನುವ ಬೇಸರ ಯಾವಾಗಲೂ ಇರುತ್ತದೆ. ಅವರ ಪತ್ನಿ ಆಶಾ ಅವರನ್ನು ಭೇಟಿ ಮಾಡಲು ಅವಕಾಶ ಸಿಕ್ಕಿತ್ತು. ಅವರ ಮಕ್ಕಳು ಸೈಗಲ್ ಧರಿಸುತ್ತಿದ್ದ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದರು’ ಎಂದು ವಿವರಿಸಿದ್ದರು ಲತಾ.

ಇದನ್ನೂ ಓದಿ: ತಮ್ಮದೇ ಹಾಡನ್ನೂ ಎಂದಿಗೂ ಕೇಳುತ್ತಿರಲಿಲ್ಲ ಲತಾ ಮಂಗೇಶ್ಕರ್; ಇಲ್ಲಿದೆ ಅಪರೂಪದ ವಿಚಾರ

18 ವರ್ಷ ಇದ್ದಾಗ ಲತಾ ಟ್ರಾನ್ಸಿಸ್ಟರ್ ರೇಡಿಯೋ ಖರೀದಿ ಮಾಡಿ ತಂದರು. ಅವರು ಅದನ್ನು ಆನ್ ಮಾಡಿದಾಗ ಕೆಎಲ್ ಸೈಗಲ್ ಮೃತಪಟ್ಟ ಸುದ್ದಿ ಪ್ರಸಾರ ಆಯಿತು. ಆಬಳಿಕ ಅವರು ರೆಡಿಯೋನ ಮರಳಿ ಅಂಗಡಿಗೆ ನೀಡಿ ಬಂದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ