ತಮ್ಮದೇ ಹಾಡನ್ನೂ ಎಂದಿಗೂ ಕೇಳುತ್ತಿರಲಿಲ್ಲ ಲತಾ ಮಂಗೇಶ್ಕರ್; ಇಲ್ಲಿದೆ ಅಪರೂಪದ ವಿಚಾರ

Latha Mangeshkar Birth Anniversary: ತಾವೇ ಹಾಡಿದ ಹಾಡನ್ನು ಲತಾ ಅವರು ಎಂದಿಗೂ ಕೇಳುವುದಿಲ್ಲ. ಇದಕ್ಕೆ ಕಾರಣವೂ ಇದೆ. ‘ನಾನು ಹಾಡಿದ ಹಾಡನ್ನು ಕೇಳಿದರೆ ನನಗೆ ಸಾಕಷ್ಟು ತಪ್ಪುಗಳು ಕಾಣಿಸುತ್ತವೆ’ ಎಂದು ಲತಾ ಹೇಳಿದ್ದರು.

ತಮ್ಮದೇ ಹಾಡನ್ನೂ ಎಂದಿಗೂ ಕೇಳುತ್ತಿರಲಿಲ್ಲ ಲತಾ ಮಂಗೇಶ್ಕರ್; ಇಲ್ಲಿದೆ ಅಪರೂಪದ ವಿಚಾರ
ಲತಾ ಮಂಗೇಶ್ಕರ್
Follow us
ರಾಜೇಶ್ ದುಗ್ಗುಮನೆ
|

Updated on: Sep 28, 2023 | 11:14 AM

ಲತಾ ಮಂಗೇಶ್ಕರ್ (Latha Mangeshkar) ಅವರು 2022ರಲ್ಲಿ ನಮ್ಮನ್ನು ಅಗಲಿದರು. ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಇಂದು (ಸೆಪ್ಟೆಂಬರ್ 28) ಲತಾ ಮಂಗೇಶ್ಕರ್ ಅವರ ಜನ್ಮದಿನ. ಅವರನ್ನು ಎಲ್ಲರೂ ನೆನಪಿಸಿಕೊಳ್ಳುತ್ತಿದ್ದಾರೆ. ಅವರ ಬಗ್ಗೆ ಹಲವು ಅಪರೂಪದ ವಿಚಾರಗಳನ್ನು ಹುಡುಕಿ ತೆಗೆಯಲಾಗುತ್ತಿದೆ. ಹಲವು ಸೂಪರ್ ಹಿಟ್ ಹಾಡುಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಅವರನ್ನು ‘ನೈಟಿಂಗೇಲ್ ಆಫ್ ಇಂಡಿಯಾ’ ಎಂದು ಕೂಡ ಕರೆಯಲಾಗುತ್ತಿತ್ತು. ಅವರ ಕುರಿತ ಅಪರೂಪದ ವಿಚಾರಗಳು.

ಸಂಗೀತ ಹಿನ್ನೆಲೆ

ಲತಾ ಮಂಗೇಶ್ಕರ್ ಅವರ ತಂದೆ ರಂಗಭೂಮಿ ತಂಡವೊಂದನ್ನು ಕಟ್ಟಿದ್ದರು. ಇದರ ಜೊತೆ ಲತಾ ಬೆಳೆದರು. ಈ ಕಾರಣದಿಂದ ಅವರಿಗೆ ಸಂಗೀತದ ಬಗ್ಗೆ ಆಸಕ್ತಿ ಬೆಳೆಯಿತು. ಆ ಬಳಿಕ ಅವರು ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಂಡರು.

ಮೊದಲ ಹಾಡು

ಲತಾ ಮಂಗೇಶ್ಕರ್ ಅವರು ಸಿನಿಮಾಗಾಗಿ ಹಾಡಿದ ಮೊದಲ ಸಾಂಗ್ ‘ನಾಚು ಯಾ..’. ಮರಾಠಿ ಸಿನಿಮಾ ‘ಕಿತಿ ಹಾಸಲ್’ ಚಿತ್ರದ ಹಾಡು ಇದು. 1942ರಲ್ಲಿ ಸಿನಿಮಾ ರಿಲೀಸ್ ಆಯಿತು. ಆದರೆ, ಈ ಹಾಡನ್ನು ಸಿನಿಮಾದಿಂದ ತೆಗೆಯಲಾಯಿತು.

ಮೂರ್ಛೆ ಹೋಗಿದ್ದರು..

ಲತಾ ಮಂಗೇಶ್ಕರ್ ಅವರು ಹಾಡೊಂದನ್ನು ರೆಕಾರ್ಡ್ ಮಾಡುವಾಗ ಮೂರ್ಛೆ ಹೋಗಿದ್ದರು. ಅಂದಿನ ಕಾಲದಲ್ಲಿ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಎಸಿ ಇರುತ್ತಿರಲಿಲ್ಲ. ಇರುವ ಒಂದು ಫ್ಯಾನ್​ನ ರೆಕಾರ್ಡಿಂಗ್ ಸಂದರ್ಭದಲ್ಲಿ ಆಫ್ ಮಾಡಲಾಗುತ್ತಿತ್ತು. ತಾಪಮಾನ ಹೆಚ್ಚಾಗಿ ಉಸಿರಾಡಲು ಆಗದೇ ಅವರು ಮೂರ್ಛೆ ಹೋಗಿದ್ದರು.

ತಮ್ಮದೇ ಹಾಡನ್ನು ಕೇಳಲ್ಲ

ತಾವೇ ಹಾಡಿದ ಹಾಡನ್ನು ಲತಾ ಅವರು ಎಂದಿಗೂ ಕೇಳುವುದಿಲ್ಲ. ಇದಕ್ಕೆ ಕಾರಣವೂ ಇದೆ. ‘ನಾನು ಹಾಡಿದ ಹಾಡನ್ನು ಕೇಳಿದರೆ ನನಗೆ ಸಾಕಷ್ಟು ತಪ್ಪುಗಳು ಕಾಣಿಸುತ್ತವೆ’ ಎಂದು ಲತಾ ಹೇಳಿದ್ದರು.

ಫೇವರಿಟ್ ಮ್ಯೂಸಿಕ್ ಡೈರೆಕ್ಟರ್

ಲತಾ ಅವರ ಫೇವರಿಟ್ ಮ್ಯೂಸಿಕ್ ಡೈರೆಕ್ಟರ್​ ಎಂದರೆ ಅದು ಮದನ್ ಮೋಹನ್. ‘ಅವರು ನನಗೆ ಸಹೊದರ ಇದ್ದಂತೆ’ ಎಂದು ಲತಾ ಹೇಳಿಕೊಂಡಿದ್ದರು.

ಇದನ್ನೂ ಓದಿ: Lata Mangeshkar: ಲತಾ ಮಂಗೇಶ್ಕರ್​ ಜನ್ಮದಿನ; ಗಾನ ಕೋಗಿಲೆಗೆ ಕೋಟ್ಯಂತರ ಅಭಿಮಾನಿಗಳ ನಮನ

ರಾಜ್ಯ ಸಭಾ ಸದಸ್ಯೆ

ಲತಾ ಅವರು ರಾಜ್ಯಸಭಾ ಸದಸ್ಯೆ ಆಗಿದ್ದರು. 1999ರಿಂದ 2005ರವರೆಗೆ ಲತಾ ಅವರು ರಾಜ್ಯಸಭಾ ಸದಸ್ಯೆ ಆಗಿ ಸೇವೆ ಸಲ್ಲಿಸಿದ್ದರು.

2019 ಕೊನೆಯ ಹಾಡು

ಲತಾ ಮಂಗೇಶ್ಕರ್ ಅವರು ಕೊನೆಯದಾಗಿ ರೆಕಾರ್ಡ್ ಮಾಡಿದ್ದು ಮಾರ್ಚ್​ 30, 2019ರಲ್ಲಿ. ‘ಸೌಗಂಧ್ ಮುಜೆ ಇಸ್ ಮಿಟ್ಟೀ ಕಿ’ ಅವರು ರೆಕಾರ್ಡ್ ಮಾಡಿದ ಕೊನೆಯ ಹಾಡು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ