‘ಮನಿ ಹೈಸ್ಟ್’ ಸೀರಿಸ್​ ಆಧರಿಸಿ ಸಿದ್ಧಗೊಂಡಿತಾ ‘ಜವಾನ್’? ಹೊರಬಿತ್ತು ಅಸಲಿ ವಿಚಾರ

ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾದ ಪ್ರಿವ್ಯೂ ವಿಡಿಯೋ ನೋಡಿದ ಬಳಿಕ ಕೆಲವರು ಇದನ್ನು ಸ್ಪಾನಿಶ್ ವೆಬ್ ಸೀರಿಸ್ ‘ಮನಿ ಹೈಸ್ಟ್’ಗೆ ಹೋಲಿಕೆ ಮಾಡಿದ್ದರು. ‘ಜವಾನ್’ ಸಿನಿಮಾದಲ್ಲಿ ಶಾರುಖ್ ಖಾನ್ ಅವರದ್ದು ಪ್ರೊಫೆಸರ್ ಪಾತ್ರ ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು. ಆದರೆ, ಆ ರೀತಿ ಇಲ್ಲ ಎಂಬುದು ಚಿತ್ರತಂಡದ ಸ್ಪಷ್ಟನೆ.

‘ಮನಿ ಹೈಸ್ಟ್’ ಸೀರಿಸ್​ ಆಧರಿಸಿ ಸಿದ್ಧಗೊಂಡಿತಾ ‘ಜವಾನ್’? ಹೊರಬಿತ್ತು ಅಸಲಿ ವಿಚಾರ
ಜವಾನ್-ಶಾರುಖ್ ಖಾನ್

Updated on: Aug 26, 2023 | 9:06 AM

ಶಾರುಖ್ ಖಾನ್ (Shah Rukh Khan) ನಟನೆಯ ‘ಜವಾನ್’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಸೆಪ್ಟೆಂಬರ್ 7ರಂದು ಈ ಚಿತ್ರ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಈ ಚಿತ್ರವನ್ನು ಅಟ್ಲಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ‘ಪಠಾಣ್’ (Pathaan Movie) ರಿಲೀಸ್ ಬಳಿಕ ತೆರೆಗೆ ಬರುತ್ತಿರುವ ಅವರ ಮುಂದಿನ ಸಿನಿಮಾ ಇದು ಎನ್ನುವ ಕಾರಣಕ್ಕೂ ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ ಎಂಬುದಕ್ಕೆ ಪ್ರಿವ್ಯೂ ವಿಡಿಯೋದಲ್ಲಿ ಸಾಕ್ಷಿ ಸಿಕ್ಕಿತ್ತು. ಈ ವಿಡಿಯೋ ನೋಡಿದ ಬಳಿಕ ಎಲ್ಲರಲ್ಲೂ ಒಂದು ಅನುಮಾನ ಸೃಷ್ಟಿ ಆಗಿತ್ತು. ಆ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.

ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾದ ಪ್ರಿವ್ಯೂ ವಿಡಿಯೋ ನೋಡಿದ ಬಳಿಕ ಕೆಲವರು ಇದನ್ನು ಸ್ಪಾನಿಶ್ ವೆಬ್ ಸೀರಿಸ್ ‘ಮನಿ ಹೈಸ್ಟ್’ಗೆ ಹೋಲಿಕೆ ಮಾಡಿದ್ದರು. ಇಡೀ ಬ್ಯಾಂಕ್​ನ ದರೋಡೆ ಮಾಡಲು ಪ್ರೊಫೆಸರ್ ಸಿದ್ಧನಾಗುತ್ತಾನೆ. ಆತ ಬೇರೆಯವರಿಗೆ ತರಬೇತಿ ನೀಡಿ ಬ್ಯಾಂಕ್​ನ ಕೊಳ್ಳೆ ಹೊಡೆಯುತ್ತಾನೆ. ‘ಜವಾನ್’ ಸಿನಿಮಾದಲ್ಲಿ ಶಾರುಖ್ ಖಾನ್ ಅವರದ್ದು ಪ್ರೊಫೆಸರ್ ಪಾತ್ರ ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು. ಆದರೆ, ಆ ರೀತಿ ಇಲ್ಲ ಎಂಬುದು ಚಿತ್ರತಂಡದ ಸ್ಪಷ್ಟನೆ.

‘ಜವಾನ್’ ಸಿನಿಮಾದಲ್ಲಿ ಕಾಸ್ಟಿಂಗ್ ಡೈರೆಕ್ಟರ್ ಆಗಿರುವ ಮುಕೇಶ್ ಛಬ್ರಾ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ಯಾರಿಗೆ ಯಾವ ರೀತಿಯಲ್ಲಿ ಊಹೆ ಮಾಡಬೇಕನಿಸಿತೋ ಮಾಡಿಕೊಳ್ಳಿ. ಆದರೆ, ಜವಾನ್ ರಿಲೀಸ್ ಆದಾಗ ನಿಮಗೆ ಸಿನಿಮಾ ಏನೆಂಬುದು ತಿಳಿಯುತ್ತದೆ. ಟ್ರೇಲರ್ ರಿಲೀಸ್ ಆದ ಬಳಿಕ ನನಗೆ ಸಾಕಷ್ಟು ಮೆಸೇಜ್​ಗಳು ಬಂದವು. ಆದರೆ, ನಾನು ಏನನ್ನೂ ಬಿಟ್ಟುಕೊಟ್ಟಿಲ್ಲ. ಇದನ್ನು ದೊಡ್ಡ ಪರದೆಮೇಲೆ ನೋಡಿ ಕಣ್ತುಂಬಿಕೊಳ್ಳಲಿ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಜವಾನ್​ ಚಿತ್ರ 500 ಕೋಟಿ ರೂಪಾಯಿ ಕಲೆಕ್ಷನ್​​ ಮಾಡಲಿದೆ’: ಭವಿಷ್ಯ ನುಡಿದ ಮನೋಜ್​ ದೇಸಾಯಿ

‘ಜವಾನ್’ ಸಿನಿಮಾ ಸೆಪ್ಟೆಂಬರ್ 7ರಂದು ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ತಮಿಳು ನಿರ್ದೇಶಕ ಅಟ್ಲಿ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ನಯನಾತಾರಾ, ದೀಪಿಕಾ ಪಡುಕೋಣೆ, ವಿಜಯ್ ಸೇತುಪತಿ ಮೊದಲಾದವರು ನಟಿಸಿದ್ದಾರೆ. ರೆಡ್ ಚಿಲ್ಲೀಸ್ ಎಂಟರ್​ಟೇನ್​ಮೆಂಟ್ ಮೂಲಕ ಗೌರಿ ಖಾನ್ ಚಿತ್ರ ನಿರ್ಮಾಣ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:11 am, Sat, 26 August 23