
ಯಶ್ ರಾಜ್ ಫಿಲಮ್ಸ್, ಬಾಲಿವುಡ್ನ (Bollywood) ಬಹು ದೊಡ್ಡ ನಿರ್ಮಾಣ ಸಂಸ್ಥೆ. ದೊಡ್ಡ ಸ್ಟಾರ್ ನಟರುಗಳೊಟ್ಟಿಗೆ ಭಾರಿ ಬಜೆಟ್ನ ಸಿನಿಮಾಗಳನ್ನು ಯಶ್ ರಾಜ್ ಫಿಲಮ್ಸ್ ನಿರ್ಮಿಸುತ್ತಾ ಬಂದಿದೆ. ಸಲ್ಮಾನ್ ಖಾನ್ ಜೊತೆಗೆ ‘ಟೈಗರ್’ ಸರಣಿ, ಹೃತಿಕ್ ರೋಷನ್ ಜೊತೆಗೆ ‘ವಾರ್’ ಸರಣಿ, ಶಾರುಖ್ ಖಾನ್ ಜೊತೆಗೆ ‘ಪಠಾಣ್’ ಸರಣಿ ಹೀಗೆ ಸ್ಪೈ ಸಿನಿಮಾಗಳದ್ದೇ ಪ್ರತ್ಯೇಕ ಯೂನಿವರ್ಸ್ ಪ್ರಾರಂಭಿಸಿದೆ ಯಶ್ ರಾಜ್ ಫಿಲಮ್ಸ್ (ವೈಆರ್ಎಫ್). ಆದರೆ ವೈಆರ್ಎಫ್ ನಿರ್ಮಿಸಿದ ಈ ಹಿಂದಿನ ಸ್ಪೈ ಆಕ್ಷನ್ ಸಿನಿಮಾ ‘ವಾರ್ 2’ ಫ್ಲಾಪ್ ಆಗಿದೆ. ಆದರೂ ಸಹ ಸ್ಪೈ ಯೂನಿವರ್ಸ್ ಮೇಲೆ ನಂಬಿಕೆ ಕಳೆದುಕೊಂಡಿಲ್ಲ ನಿರ್ಮಾಣ ಸಂಸ್ಥೆ. ಇದೀಗ ‘ಪಠಾಣ್ 2’ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ.
ಯಶ್ ರಾಜ್ ಫಿಲಮ್ಸ್ ಇದೀಗ ‘ಪಠಾಣ್ 2’ ಸಿನಿಮಾ ನಿರ್ಮಿಸಲು ಮುಂದಾಗಿದೆ. ‘ಪಠಾಣ್’ ಸಿನಿಮಾ 2023ರ ಜನವರಿಯಲ್ಲಿ ಬಿಡುಗಡೆ ಆಗಿತ್ತು. ಶಾರುಖ್ ಖಾನ್ ಈ ಸಿನಿಮಾನಲ್ಲಿ ಗೂಢಚಾರಿಯ ಪಾತ್ರದಲ್ಲಿ ನಟಿಸಿದ್ದರು. ದೀಪಿಕಾ ಪಡುಕೋಣೆ ಸಿನಿಮಾದ ನಾಯಕಿ. ಜಾನ್ ಅಬ್ರಹಾಂ ಸಿನಿಮಾದ ವಿಲನ್. ಇನ್ನು ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಸಲ್ಮಾನ್ ಖಾನ್ರ ಅತಿಥಿ ಪಾತ್ರ ಭಾರಿ ದೊಡ್ಡ ಹಿಟ್ ಆಗಿತ್ತು. ಇದೀಗ ಈ ಸಿನಿಮಾದ ಸೀಕ್ವೆಲ್ ನಿರ್ಮಾಣಕ್ಕೆ ಮುಂದಾಗಿ ವೈಆರ್ಎಫ್.
‘ಪಠಾಣ್’ ಸಿನಿಮಾದ ಸೀಕ್ವೆಲ್ ಅನ್ನು ಸಿದ್ಧಾರ್ಥ್ ಆನಂದ್ ಅವರೇ ನಿರ್ದೇಶನ ಮಾಡಲಿದ್ದಾರೆ. ‘ಪಠಾಣ್’ ಸಿನಿಮಾದ ಮೊದಲ ಭಾಗವನ್ನು ಇವರೇ ನಿರ್ದೇಶಿಸಿದ್ದರು. ‘ಪಠಾಣ್’ ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ಪಾಕಿಸ್ತಾನಿ ಐಎಸ್ಐ ಏಜೆಂಟ್ ಆಗಿ ನಟಿಸಿದ್ದರು. ಹೊಸ ಸಿನಿಮಾನಲ್ಲಿ ಅವರ ಬದಲು ಮತ್ತೊಬ್ಬ ನಾಯಕಿ ಇರಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ಮತ್ತೊಂದು ವಿಶೇಷವೆಂದರೆ ಈ ಸಿನಿಮಾನಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಲ್ಲ, ಬದಲಿಗೆ ಪೂರ್ಣ ಪ್ರಮಾಣದ ಸಹ ನಾಯಕನ ಪಾತ್ರದಲ್ಲಿ ನಟಿಸಲಿದ್ದಾರಂತೆ.
ಇದನ್ನೂ ಓದಿ:ತೆಲಂಗಾಣದಲ್ಲಿ 10 ಸಾವಿರ ಕೋಟಿ ಹೂಡಿಕೆ ಮಾಡಲಿರುವ ಸಲ್ಮಾನ್ ಖಾನ್
ಸಲ್ಮಾನ್ ಖಾನ್ ನಟನೆಯ ‘ಟೈಗರ್’ ಸರಣಿಯ ಸಿನಿಮಾಗಳನ್ನು ಯಶ್ ರಾಜ್ ಫಿಲಮ್ಸ್ ಹಲವು ವರ್ಷಗಳಿಂದಲೂ ನಿರ್ಮಾಣ ಮಾಡುತ್ತಲೇ ಬರುತ್ತಿದೆ. ಮೊದಲ ‘ಪಠಾಣ್’ನಲ್ಲಿ ಸಲ್ಮಾನ್ ಖಾನ್ ಟೈಗರ್ ಪಾತ್ರದಲ್ಲಿಯೇ ನಟಿಸಿದ್ದರು. ಆದರೆ ಈಗ ‘ಪಠಾಣ್’ ಮತ್ತು ‘ಟೈಗರ್’ ಎರಡೂ ಪಾತ್ರಗಳು ಒಂದೇ ಸಿನಿಮಾನಲ್ಲಿ ನಟಿಸಲಿವೆ. ಮಾತ್ರವಲ್ಲದೆ, ಮುಂದಿನ ‘ಟೈಗರ್’ ಸರಣಿಯ ಸಿನಿಮಾನಲ್ಲಿ ಸಲ್ಮಾನ್ ಖಾನ್ ಜೊತೆಗೆ ಶಾರುಖ್ ಖಾನ್ ಸಹ ನಟಿಸಲಿದ್ದಾರಂತೆ.
ಶಾರುಖ್ ಖಾನ್ ಪ್ರಸ್ತುತ ‘ಕಿಂಗ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ‘ಕಿಂಗ್’ ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ನಾಯಕಿ. ಶಾರುಖ್ ಖಾನ್ ಪುತ್ರಿ ಸುಹಾನಾ ಸಹ ‘ಕಿಂಗ್’ ಸಿನಿಮಾನಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ‘ಕಿಂಗ್’ ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಲಿದ್ದಾರೆ. ಇದೇ ಸಿನಿಮಾನಲ್ಲಿ ಅಭೀಷೇಕ್ ಬಚ್ಚನ್, ಜಾಕಿ ಶ್ರಾಫ್, ಅನಿಲ್ ಕಪೂರ್, ಅರ್ಷದ್ ವಾರ್ಸಿ, ರಾಣಿ ಮುಖರ್ಜಿ, ರಾಘವ್ ಜುರೆಲ್ ಇನ್ನೂ ಹಲವರು ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ