ಬಾಲಿವುಡ್ಗೆ ಮತ್ತೊಂದು ಶಾಕ್; ಕುಸಿದುಬಿದ್ದು ಆಸ್ಪತ್ರೆ ಸೇರಿದ ನಟ ಗೋವಿಂದ
Govinda Hospitalized: ಬಾಲಿವುಡ್ ನಟ ಧರ್ಮೇಂದ್ರ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಈ ಮಧ್ಯೆ ನಟ ಗೋವಿಂದ ಸಹ ನಿವಾಸದಲ್ಲಿ ಕುಸಿದು ಬಿದ್ದು ಆಸ್ಪತ್ರೆ ಸೇರಿದ್ದಾರೆ. ಧರ್ಮೇಂದ್ರರನ್ನು ಭೇಟಿಯಾಗಿ ಗೋವಿಂದ ಬಂದಿದ್ದರು. ಇದಾದ ಒಂದೇ ದಿನದಲ್ಲಿ ಗೋವಿಂದ ಕೂಡ ಆಸ್ಪತ್ರೆ ಸೇರುವಂತೆ ಆಗಿದೆ.

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ (Dharmendra) ಅವರು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಈ ಮಧ್ಯೆ ಬಾಲಿವುಡ್ ನಟ ಗೋವಿಂದ ಕೂಡ ಆಸ್ಪತ್ರೆ ಸೇರಿದ್ದಾರೆ. ಅವರು ತಮ್ಮ ಮುಂಬೈ ನಿವಾಸದಲ್ಲಿ ಮಂಗಳವಾರ (ನವೆಂಬರ್ 11) ರಾತ್ರಿ ಕುಸಿದು ಬಿದ್ದರು. ಅವರನ್ನು ಜುಹುವಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವಿಚಾರವನ್ನು ಅವರ ಗೆಳೆಯ ಹಾಗೂ ಅವರ ಕಾನೂನು ಸಲಹೆಗಾರ ಲಲಿತ್ ಬಿಂದಲ್ ಖಚಿತಪಡಿಸಿದ್ದಾರೆ.
ತಡರಾತ್ರಿ ಗೋವಿಂದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಈ ಸಂದರ್ಭದಲ್ಲಿ ಎಮರ್ಜೆನ್ಸಿ ವಾರ್ಡ್ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿದೆ. ಅವರಿಗೆ ಹಲವು ಪರೀಕ್ಷೆಗಳನ್ನು ಮಾಡಲಾಗಿದ್ದು, ಅವುಗಳ ವರದಿ ಇನ್ನಷ್ಟೇ ಬರಬೇಕಿದೆ. ಗೋವಿಂದ ಪ್ರಜ್ಞೆತಪ್ಪಲು ಕಾರಣ ಇನ್ನೂ ಬಹಿರಂಗವಾಗಿಲ್ಲ. ಪರೀಕ್ಷಾ ವರದಿ ಬಂದ ಬಳಿಕ ಈ ವಿಚಾರ ರಿವೀಲ್ ಆಗಲಿದೆ.
ಧರ್ಮೇಂದ್ರ ಭೇಟಿ ತೆರಳಿದ್ದ ಗೋವಿಂದ
ಧರ್ಮೇಂದ್ರ ಅವರು ಆಸ್ಪತ್ರೆ ಸೇರಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಸೋಮವಾರ (ನವೆಂಬರ್ 10) ಗೋವಿಂದ ಅವರು ಧರ್ಮೇಂದ್ರ ದಾಖಲಾದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ಅವರು ಗೋವಿಂದ ಅವರ ಆರೋಗ್ಯ ವಿಚಾರಿಸಿ, ಕುಟುಂಬದವರಿಗೆ ಧೈರ್ಯ ತುಂಬಿ ಬಂದಿದ್ದರು. ಈ ಸಂದರ್ಭದಲ್ಲಿ ಗೋವಿಂದ ಅವರು ಭಾವುಕರಾಗಿದ್ದರು. ಗೋವಿಂದ ರೀತಿ ಸಲ್ಮಾನ್ ಖಾನ್, ಶಾರುಖ್ ಖಾನ್, ಆರ್ಯನ್ ಖಾನ್ ಸೇರಿದಂತೆ ಅನೇಕರು ಧರ್ಮೇಂದ್ರ ಆರೋಗ್ಯ ವಿಚಾರಿಸಿದ್ದಾರೆ.
ಇದನ್ನೂ ಓದಿ: ‘ಇದು ಅಗೌರವ, ಅಜಾಗರೂಕತೆ’: ಆಕ್ರೋಶ ಹೊರಹಾಕಿದ ಹೇಮಾಮಾಲಿನಿ
ಗುಂಡು ಹಾರಿಸಿಕೊಂಡು ಆಸ್ಪತ್ರೆ ಸೇರಿದ್ದ ಗೋವಿಂದ
ಕಳೆದ ವರ್ಷ ಅಕ್ಟೋಬರ್ನಲ್ಲಿ ಗೋವಿಂದ ಅವರು ಆಸ್ಪತ್ರೆ ಸೇರುವ ಪರಿಸ್ಥಿತಿ ಬಂದಿತ್ತು. ತಮ್ಮ ರಿವಾಲ್ವರ್ನಿಂದ ಮಿಸ್ ಫೈಯರ್ ಆದ ಬುಲೆಟ್ ಅವರ ಕಾಲಿಗೆ ಹೊಡೆದಿತ್ತು. ಇದರಿಂದ ಅವರು ಆಸ್ಪತ್ರೆ ಸೇರಬೇಕಾಯಿತು. ಸದ್ಯ ಗೋವಿಂದ ಹಾಗೂ ಅವರ ಪತ್ನಿ ಸುನಿತಾ ಅಹುಜಾ ಸಂಬಂಧ ಹದಗೆಟ್ಟಿದೆ. ಇವರು ಶೀಘ್ರವೇ ವಿಚ್ಛೇದನ ಪಡೆಯುತ್ತಾರೆ ಎಂದು ಕೂಡ ಹೇಳಲಾಗುತ್ತಿದೆ. ಈ ದಂಪತಿಗೆ ಇಬ್ಬರು ಮಕ್ಕಳು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




